ಕನ್ನಡದ ಖ್ಯಾತ ನಟಿ ಶೃತಿ ಅವರ ಮುದ್ದಾದ ಫ್ಯಾಮಿಲಿ ಇದು, ತಂದೆ ಮತ್ತು ಇಬ್ಬರು ತಾಯಂದಿರ ಜೊತೆ ನಟಿ ಶೃತಿ ಮತ್ತು ಮಗಳು ಗೌರಿ.
ನಟಿ ಶೃತಿ, ನಟ ಶರಣ್ ಮತ್ತು ಸಹೋದರಿ ಉಷಾ ಅವರ ತಂದೆ ಜಿ.ವಿ. ಕೃಷ್ಣ. ಇವರಿಗೆ ಇಬ್ಬರು ತಾಯಂದಿರು ರಾಧಾ ಮತ್ತು ರುಕ್ಮಿಣಿ.
ರಂಗಭೂಮಿ ಕಲಾವಿದರಾಗಿರುವ ಶೃತಿ ತಂದೆ ಮತ್ತು ತಾಯಂದಿರು ಜೊತೆಯಾಗಿ ಗುಬ್ಬಿ ವೀರಣ್ಣ ಕಂಪನಿಯಲ್ಲಿ ನಟಿಸಿದ್ದು, ನಂತರ ಕೃಷ್ಣ ಅವರು ಅವಳಿಗಳನ್ನು ಪ್ರೀತಿಸಿ ಮದುವೆಯಾದರು.
ನಟಿ ಶೃತಿಯವರಿಗೆ ನಟನೆ ರಕ್ತದಲ್ಲೇ ಇದೆ. ಇದಕ್ಕೆ ಕಾರಣ ತಂದೆ-ತಾಯಂದಿರು. ತಾಯಂದಿರಾದ ರಾಧಾ ಮತ್ತು ರುಕ್ಮಿಣಿ ನಾಟಕಗಳಲ್ಲಿ ಲವ, ಕುಶ, ಕೃಷ್ಣ, ಬಲರಾಮ ಆಗಿ ಜನಪ್ರಿಯತೆ ಪಡೆದಿದ್ದರು.
ಗುಬ್ಬಿ ರಂಗಮಂದಿರದಲ್ಲೆ ಜೊತೆಯಾಗಿ ನಾಟಕ ಮಾಡುತ್ತಿದ್ದಾಗಲೇ, ಕೃಷ್ಣ, ರಾಧ, ರುಕ್ಮಿಣಿ ಪ್ರೀತಿಸಿ, ಬಳಿಕ ಇಬ್ಬರನ್ನೂ ಮದುವೆಯಾಗಿದ್ದಾರೆ ಕೃಷ್ಣ.
ನಟಿ ಶೃತಿ ಮತ್ತು ಶರಣ್‌ಗೆ ಇಲ್ಲಿವರೆಗೂ ತಮಗೆ ಜನ್ಮ ನೀಡಿದ ತಾಯಿ ಯಾರೆಂದೂ ಗೊತ್ತಿಲ್ವಂತೆ, ಅದು ಗೊತ್ತಾಗೋದೂ ಬೇಡವಂತೆ. ಇಬ್ಬರೂ ಜನ್ಮ ನೀಡಿದ ಅಮ್ಮನೇ ಎನ್ನುತ್ತಾರೆ ಶೃತಿ.
ಇಬ್ಬರು ಅಮ್ಮಂದಿರಿಂದ ಡಬಲ್ ಪ್ರೀತಿ ಪಡೆದಂತಹ ಮೂವರು ಮಕ್ಕಳು ಸಹ ತಮ್ಮ ಫ್ಯಾಮಿಲಿ ಜೊತೆ ತುಂಬಾನೆ ಸಂತೋಷವಾಗಿದ್ದಾರೆ.
ನಟಿ ಶೃತಿ ಹೆಚ್ಚಾಗಿ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ತಂದೆ, ತಾಯಂದಿರು, ಮಗಳ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಲೂಸ್ ಮಾದಾ ಯೋಗಿ ಪುತ್ರಿ ಶ್ರೀನಿಕಾ 4ನೇ ಬರ್ತಡೇ ಫೋಟೋ ವೈರಲ್!
ತುಂಬಾ ಸುಲಭವಾಗಿ ಅಳೋಕೆ ಬರುತ್ತೆ, ಕಾಮಿಡಿ ಮಾಡೋಕೆ ಬರಲ್ಲ: ನಿಧಿ ಸುಬ್ಬಯ್ಯ
ಸ್ಯಾಂಡಲ್‌ವುಡ್ ಖ್ಯಾತ ನಟನ ಪುತ್ರನ ಮಸ್ತ್ ಫೋಟೋಶೂಟ್: ಮರಿ ಸಿಂಹ ಎಂದ ಫ್ಯಾನ್ಸ್
ವಿದೇಶದಲ್ಲಿ ಸಂಯುಕ್ತ ಹೆಗ್ಡೆ: ಬೋಲ್ಡ್ ಲುಕ್‌ನಲ್ಲಿ ಮಿಂಚಿದ ನಟಿ