relationship
ನೀವು ಸಹ ಸಾಮಾನ್ಯವಾಗಿ ಮದುವೆಯಾದ ಮೇಲೆ ಗಂಡಸರು ದಪ್ಪ ಆಗೋದನ್ನು ನೋಡಿರಬಹುದು. ಆದ್ರೆ ಅವರಿಗೆ ಹೊಟ್ಟೆ ಯಾಕೆ ಬರುತ್ತೆ ಗೊತ್ತಾ?
ಮದುವೆಯ ಬಳಿಕ ಸುಮಾರು ಒಂದು ತಿಂಗಳವರೆಗೆ ಹುಡುಗನ ಮನೆಗೆ ನೆಂಟರಿಷ್ಟರು, ಗೆಳೆಯರು ಬಂದು ಹೋಗೋದು ಇದ್ದೇ ಇರುತ್ತೆ. ಇದರಿಂದ ನಿದ್ರೆಯ ಕೊರತೆ ಉಂಟಾಗುತ್ತೆ.
ಸೆಕ್ಸ್ ಲೈಫಿನಿಂದಾಗಿ ಪುರುಷರ ಹಾರ್ಮೋನ್ಸ್‌ನಲ್ಲಿ ಬದಲಾವಣೆಯಾಗುತ್ತಿರುತ್ತೆ. ಇದರಿಂದ ಪುರುಷರ ತೂಕ ಹೆಚ್ಚಾಗುತ್ತದೆ.
ಹಲವಾರು ಸಂಪ್ರದಾಯಗಳನ್ನು ಫಾಲೋ ಮಾಡೋದು, ನೆಂಟರಿಷ್ಟರ ಮನೆಯಲ್ಲಿ ಊಟಕ್ಕೆ ಆಹ್ವಾನ ಈ ಎಲ್ಲಾ ಕಾರಣದಿಂದಾಗಿ ಗಂಡಸರಿಗೆ ತಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಡಲು ಸಾಧ್ಯವಾಗೋದಿಲ್ಲ.
ಮದುವೆ ನಂತ್ರ ಪುರುಷರ ಜವಾಬ್ಧಾರಿ ಹೆಚ್ಚುತ್ತೆ, ಇದರಿಂದಾಗಿ ಅವರಿಗೆ ಫಿಸಿಕಲ್ ಆಕ್ಟಿವಿಟಿ ಮಾಡಲು ಸಹ ಸಮಯ ಇರೋದಿಲ್ಲ. ಇದರಿಂದ ಹೊಟ್ಟೆ ಬರುತ್ತೆ.
ತುಂಬಾ ತಡವಾಗಿ ಆಹಾರ ಸೇವಿಸೋದು, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೇ ಇರೋದು. ವ್ಯಾಯಾಮ, ಜಿಮ್ ಯಾವುದು ಇರೋದಿಲ್ಲ. ಹೀಗೆ ಮದುವೆಯ ನಂತರ ಕೆಟ್ಟ ಲೈಫ್ ಸ್ಟೈಲ್ ನಿಂದ ಬೊಜ್ಜು ಹೆಚ್ಚುತ್ತೆ.
ಕೆಲವೊಮ್ಮೆ ಡಿನ್ನರ್ ಡೇಟ್, ಮತ್ತೆ ಕೆಲವೊಮ್ಮೆ ಫ್ಯಾಮಿಲಿ ಗೆಟ್ ಟು ಗೆದರ್ ಕಾರಣದಿಂದಾಗಿ ಹೊಟೇಲ್ ಊಟ ಮಾಡಿ ಮಾಡೋದಾಗುತ್ತೆ.
ಮದುವೆ ನಂತರ ಪುರುಷರು ತಮ್ಮ ಹೊಸ ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡಿ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಅವರಲ್ಲಿ ಬೊಜ್ಜು ಹೆಚ್ಚುತ್ತದೆ.
ಹೊಸದಾಗಿ ಮದುವೆಯಾದಾಗ ಪುರುಷರಿಗೆ ತಮಗಾಗಿ ಸಮಯ ಮೀಸಲಿಡಲು ಸಾಧ್ಯವಾಗೋದಿಲ್ಲ. ಇದರಿಂದಾಗಿ ಅವರಿಗೆ ವ್ಯಾಯಾಮ, ಜಿಮ್ ಯಾವುದಕ್ಕೂ ಸಮಯ ಕೊಡಲು ಸಾಧ್ಯವಿರಲ್ಲ. ಇದರಿಂದ ದಪ್ಪಗಾಗ್ತಾರೆ.