relationship

ಸ್ಪೆಷಲ್ ಮದುವೆ!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮದುವೆಯನ್ನು ಸ್ಪೆಷಲ್ ಆಗಿ ಮಾಡಲು ಏನೇನೋ ಟ್ರೆಂಡ್ ಫಾಲೋ ಮಾಡುತ್ತಿರುತ್ತಾರೆ. ಕೆಲವುದನ್ನ ನೊಡಿದ್ರೆ ಹೀಗೂ ಉಂಟೆ ಎನ್ನುವಂತಿರುತ್ತೆ… ಬನ್ನಿ ಅಂತಹ ಮದ್ವೆ ಬಗ್ಗೆ ನೋಡೋಣ. 

Image credits: our own

ಟ್ರ್ಯಾಕ್ಟರ್‌ನಲ್ಲಿ ಬಂದ ದಿಬ್ಬಣ

ರಾಜಸ್ಥಾನದ ಬಾಡ್ಮೇರ್ ನಲ್ಲಿ ಕೆಲದಿನಗಳ ಹಿಂದೆ ನಡೆದ ಮದುವೆಯಲ್ಲಿ ಮಧುಮಗ 51 ಟ್ರ್ಯಾಕ್ಟರ್ ಗಳಲ್ಲಿ ದಿಬ್ಬಣ ಜೊತೆಗೆ ಮಂಟಪ ತಲುಪಿದ್ದಾನೆ. ಸಾಲು ಸಾಲು ಟ್ರ್ಯಾಕ್ಟರ್ ನೋಡಿಯೇ ಜನರು ಶಾಕ್ ಆಗಿದ್ದರು. 

Image credits: our own

ಅಂಗದಾನದ ಸಂಕಲ್ಪ

ಮಧ್ಯಪ್ರದೇಶದ ಬಾಲಾಘ್ಹಾಟ್ ಜಿಲ್ಲೆಯ ಕಟಂಗಿಯಲ್ಲಿ ಈ ಮದುವೆ ಭಾರಿ ಚರ್ಚೆಯಾಗಿತ್ತು. ಯಾಕಂದ್ರೆ ಈ ಮದುವೆಯಲ್ಲಿ ವಧು ಮತ್ತು ವರ ಅಂಗದಾನ ಮಾಡುವ ನಿರ್ಧಾರ ಮಾಡಿದ್ದರು. ಈ ಕುರಿತು ಬ್ಯಾನರ್ ಕೂಡ ಹಾಕಿಸಿದ್ದರು. 

Image credits: our own

ವಧುವನ್ನು JCB ಯಲ್ಲಿ ಕರೆದೊಯ್ದ ವರ

ರಾಂಚಿಯ ಟಾಟಿಸಿಲ್ವೆಯಲ್ಲಿ ಒಬ್ಬ ಯುವಕ  JCB ಯಲ್ಲಿ ಕುಳಿತುಕೊಂಡು ಮದುವೆ ಮಂಟಪ್ಪಕ್ಕೆ ಬಂದಿದ್ದಾನೆ. ಅಷ್ಟೇ ಅಲ್ಲ ಮದ್ವೆ ನಂತರವೂ  JCB ಯಲ್ಲಿಯೇ ವಧುವನ್ನು ಕರೆದುಕೊಂಡು ಹೋಗಿದ್ದಾನೆ. 

Image credits: our own

ಸೈಕಲ್ಲೇರಿ ಹೊರಟ ವರ

ಮಧ್ಯಪ್ರದೇಶದ ಇಂಡೋರ್ ನಲ್ಲಿ ವರ ಸೈಕಲ್ ನಲ್ಲಿ ದಿಬ್ಬಣ ಹೊರಟಿದ್ದಾನೆ. ಮದುವೆ ಬಳಿಕ ಆತ ವಧು ಡಿಂಪಲ್ ಭಾಟಿಯಾಳನ್ನು ಸೈಕಲ್ ನಲ್ಲಿ ಎದುರಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. 

Image credits: our own

ಎತ್ತಿನ ಗಾಡಿಯಲ್ಲಿ ಬಂದ ವರ

ನಾವು ನೋಡಿರುವಂತೆ ಮದುವೆಗೆ ವರ ದೊಡ್ಡ ದೊಡ್ಡ ಕಾರಿನಲ್ಲಿ ಬರುತ್ತಾನೆ. ಆದರೆ ಬೋಕಾರೋ ದ ಕಸ್ಮಾರ್ ಠಾಣೆಯಲ್ಲಿ ನೆಲೆಸಿರುವ ಸಂದೀಪ್ ಕಛ್ವಾರ್ ಮದುವೆಗೆ ಎತ್ತಿನಗಾಡಿಯಲ್ಲಿ ಬಂದಿದ್ದನು.

Image credits: our own

ರಕ್ತದಾನ ಶಿಬಿರ

ಛತ್ತೀಸ್‌ಗಢದ ಕಂಡೆಲ್ ಗ್ರಾಮದಲ್ಲಿ ವಿಭಿನ್ನವಾಗಿ ಮದುವೆ ನೆರವೇರಿತು. ಇಲ್ಲಿ ಗಿಫ್ಟ್ ರೂಪದಲ್ಲಿ ರಕ್ತದಾನ ಮಾಡಲಾಯಿತು. ಮದುವೆಯಲ್ಲಿ ರಕ್ತದಾನ ಕ್ಯಾಂಪ್ ಮಾಡಿದ್ದು, 50 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು. 

Image credits: our own
Find Next One