relationship
ದೇಶ-ವಿದೇಶಗಳಲ್ಲಿ ಭಿನ್ನ-ವಿಭಿನ್ನ ಮದುವೆ ಸಂಪ್ರದಾಯವಿದೆ. ಮದುವೆಯಲ್ಲಿ ವರನಿಗೆ ಹೆಚ್ಚಿನ ಪ್ರಾಶಸ್ತ್ರವನ್ನು ನೀಡಲಾಗುತ್ತದೆ. ಆದ್ರೆ ಕೆಲವೆಡೆ ಮದುವೆಗೆ ಸಂಬಂಧಿಸಿ ವಿಚಿತ್ರ ಸಂಪ್ರದಾಯಗಳೂ ಇವೆ.
ಇಲ್ಲಿ ಮದುವೆಯ ಮೊದಲು ವರನಿಗೆ ಕರೆಂಟ್ ಶಾಕ್ ನೀಡಲಾಗುತ್ತದೆ. ಪುರುಷರು ತಮ್ಮ ಪುರುಷತ್ವವನ್ನು ಸಾಬೀತುಪಡಿಸಲು ಹೀಗೆ ಕರೆಂಟ್ ಶಾಕ್‌ಗೆ ಒಳಪಡಬೇಕು.
ದಕ್ಷಿಣ ಅಮೇರಿಕಾದ ಬುಡಕಟ್ಟು ಜನಾಂಗದಲ್ಲಿ ಹುಡುಗಿಯರು ಮದುವೆಗೂ ಮೊದಲು ಗಂಡಸರ ಪುರುಷತ್ವವನ್ನು ತಿಳಿಯಲು ಬಯಸುತ್ತಾರೆ. ಹೀಗಾಗಿ ಪುರುಷರು ಕರೆಂಟ್ ಶಾಕ್ ಹೊಡೆಸಿಕೊಳ್ಳುತ್ತಾರೆ.
ಮೊದಲು ಮದ್ಯವನ್ನು ಬಡಿಸಲಾಗುತ್ತದೆ. ನಂತರ ವಿದ್ಯುತ್ ಶಾಕ್ ನೀಡಲಾಗುತ್ತದೆ. ಹೆಚ್ಚು ಮದ್ಯಪಾನ ಮಾಡಿಸಿ ನಂತರ 120 ವೋಲ್ಟ್ ವಿದ್ಯುತ್ ಶಾಕ್ ನೀಡುತ್ತಾರೆ.
ಹುಡುಗ ಕರೆಂಟ್ ಆಘಾತವನ್ನು ತಡೆದುಕೊಂಡು ರಸ್ತೆ ಬಿಟ್ಟು ಹೋಗದಿದ್ದಲ್ಲಿ ಆತನ ಪುರುಷತ್ವ ಸದೃಢ ಎಂದು ನಂಬಲಾಗುತ್ತದೆ. ಇಲ್ಲದಿದ್ದರೆ ಆತನನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ.
ಈ ಸಂಪ್ರದಾಯದ ಪ್ರಕಾರ ಹುಡುಗನಿಗೆ ವಿದ್ಯುತ್ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಹುಡುಗಿ ಬಯಸಿದಲ್ಲಿ ಆತನನ್ನು ಮದುವೆಯಾಗಲು ನಿರಾಕರಿಸಬಹುದು.
ದಕ್ಷಿಣ ಅಮೇರಿಕಾದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಇಂಥಾ ವಿಚಿತ್ರ ಆಚರಣೆಗಳಿವೆ. ಉತ್ತರಪ್ರದೇಶದ ಸರ್ಸಾಲ್ ನಗರದಲ್ಲಿ ಕೊಳೆತ ಮೊಟ್ಟೆ ಮತ್ತು ಟೊಮೆಟೋದೊಂದಿಗೆ ವರನನ್ನು ಸ್ವಾಗತಿಸಲಾಗುತ್ತದೆ.