Kannada

ಪರಿಮಳ ಜಗ್ಗೇಶ್

ಜಗ್ಗೇಶ್ ಪತ್ನಿ ಹಾಗೂ ಡಯಟೀಶನ್ ಆಗಿರುವ ಪರಿಮಳ ಅವರು ಗಂಡ-ಹೆಂಡತಿ ಸಂಬಂಧ ಗಟ್ಟಿಯಾಗಿರಲು ಕಪಲ್ಸ್ ಈ 7 ಸೂತ್ರಗಳನ್ನು ಪಾಲಿಸಬೇಕು ಎಂದಿದ್ದಾರೆ. ಯಾವುವು ನೋಡಿ.

Kannada

ದೂರುವುದಕ್ಕಿಂತ ಹೆಚ್ಚು ಮೆಚ್ಚುಗೆ ಸೂಚಿಸಿ

ಹ್ಯಾಪಿ ಕಪಲ್ಸ್ ಯಾವಾಗ್ಲೂ ಇಬ್ಬರಿಗೂ ಯಾವುದು ಬೆಸ್ಟ್ ಎನ್ನುವ ಬಗ್ಗೆ ಯೋಚನೆ ಮಾಡುತ್ತಾರೆ. ಯಾರದು ತಪ್ಪು ಎನ್ನುವುದರ ಬಗ್ಗೆ ಅಲ್ಲ.

Image credits: Instagram
Kannada

ಮಾತುಕತೆ ನಡೆಸಿ

ಕೋಪ, ಅಸಹನೆ ಏನೇ ಇದ್ದರೂ, ಇಬ್ಬರು ಮಾತುಕತೆ ನಡೆಸಿ ಸರಿಪಡಿಸಿ. ಹಾಗೆ ಉಳಿಸಿಕೊಂಡರೆ, ಸಂಬಂಧದಲ್ಲಿ ಬಿರುಕು ಖಚಿತಾ.

Image credits: Instagram
Kannada

ಮಾತುಗಳನ್ನು ಕೇಳಿ

ನಿಮ್ಮ ಸಂಗಾತಿ ಏನಾದರೂ ಹೇಳಲು ಬಂದರೆ, ಅದಕ್ಕೆ ಥಟ್ ಅಂತ ರಿಪ್ಲೈ ಮಾಡುವ ಬದಲಾಗಿ, ಅವರು ಹೇಳುವುದನ್ನು ಪೂರ್ತಿ ಕೇಳಿ. ಸಂಬಂಧದಲ್ಲಿ ಕೇಳುಗನಾಗುವುದು ಸಹ ಮುಖ್ಯ.

Image credits: Instagram
Kannada

ಜಗಳ ಮಾಡುವಾಗ ತಾಳ್ಮೆ ಇರಲಿ

ಇಬ್ಬರ ಮಧ್ಯೆ ಯಾವುದೇ ಕಾರಣಕ್ಕೂ ಜಗಳವಾದರೆ ಅದನ್ನು ತಾಳ್ಮೆಯಿರಲಿ. ಕೋಪ ಕೈಗೆ ಬುದ್ದಿ ಕೊಟ್ಟು ಕೆಟ್ಟ ಮಾತುಗಳನ್ನು ಆಡಬೇಡಿ. ಇದರಿಂದ ಸಂಬಂಧ ಕೆಡುತ್ತದೆ.

Image credits: Instagram
Kannada

ಫ್ರೆಂಡ್’ಶಿಪ್ ಬೆಳೆಯಲಿ

ಗಂಡ-ಹೆಂಡತಿ ಸಂಬಂಧದಲ್ಲಿ ಫ್ರೆಂಡ್’ಶಿಪ್ ಇರೋದು ಮುಖ್ಯ. ಅದಕ್ಕಾಗಿ ಇಬ್ಬರು ಕ್ವಾಲಿಟಿ ಸಮಯ ಜೊತೆಯಾಗಿ ಕಳೆಯಬೇಕು. ಅರ್ಥಮಾಡಿಕೊಳ್ಳಬೇಕು.

Image credits: Instagram
Kannada

ಪರಸ್ಪರ ಪ್ರಗತಿಗೆ ಬೆಂಬಲ

ಗಂಡನಾದವನು ಹೆಂಡತಿಯ, ಹೆಂಡತಿಯಾದವಳು ಗಂಡನ ಪ್ರಗತಿಗೆ ಬೆಂಬಲ ಸೂಚಿಸಬೇಕು. ಅವರ ಹವ್ಯಾಸ, ಗುರಿಯ ಕಡೆಗೆ ಪ್ರವೇಶಿಸಲು ಬೆಂಬಲ ನೀಡಬೇಕು.

Image credits: Instagram
Kannada

ಈ ಸಣ್ಣ ಅಭ್ಯಾಸ ಬೆಳೆಸಿ

ಪ್ರತಿದಿನ ಬೆಳಗ್ಗೆ ಒಟ್ಟಿಗೆ ಚಹಾ ಕುಡಿಯುವುದು, ಸಂಜೆ ವಾಕಿಂಗ್ ಮಾಡೋದು, ರಾತ್ರಿ ಸುಂದರ ಮಾತುಕತೆ ಇವೆಲ್ಲವೂ ಸಣ್ಣ ವಿಷಯ ಆದರೂ, ಇದು ಸಂಬಂಧವನ್ನು ಸುಂದರಗೊಳಿಸುತ್ತೆ.

Image credits: Instagram
Kannada

ಹ್ಯಾಪಿ ರಿಲೇಶನ್’ಶಿಪ್

ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ, ಸಣ್ಣ ಸಣ್ಣ ಕ್ರಿಯೆಗಳು ಗೌರವ, ತಾಳ್ಮೆ, ಮೆಚ್ಚುಗೆ ಮಾತುಕತೆ ಇವೇ ಸಹಾಯ ಮಾಡುವುದು. ಇದಕ್ಕೆ ದೊಡ್ಡದಾದ ಸರ್ಪ್ರೈಸ್, ಗಿಫ್ಟ್ ಬೇಕಾಗಿಲ್ಲ ಎನ್ನುವುದು ನೆನಪಿರಲಿ.

Image credits: Instagram

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಗಂಡನನ್ನ ಏನೆಂದು ಕರೆಯುತ್ತಾರೆ ಗೊತ್ತಾ?

ಸುಖ ದಾಂಪತ್ಯಕ್ಕೆ ಪತಿಯ ಯಾವ ಬದಿಯಲ್ಲಿ ಪತ್ನಿ ಮಲಗಿದ್ರೆ ಒಳ್ಳೆಯದು?

ರಾತ್ರಿ ಈ ಕೆಲಸ ಮಾಡಿದರೆ ಸಾಕು, ನೀವೇ ಕೋಟ್ಯಾಧಿಪತಿಗಳಂತೆ!

ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ಹೇಗೆ ಕರೆಯುತ್ತಾರೆ ಗೊತ್ತಾ?