Politics

ಮೋದಿ ಕಂಠದಲ್ಲಿ ತುಳು

ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಸೊಲ್ಮೆಲು ಎಂದು ಮುಲ್ಕಿಯಲ್ಲಿ ಮೋದಿ ತುಳುವಿನಲ್ಲಿ ಭಾಷಣ ಆರಂಭಿಸಿದ್ದು, ಕರಾವಳಿಗರು ಫುಲ್ ಖುಷ್ ಆಗಿದ್ದಾರೆ.

ಮೋದಿ ನೋಡಲು ತಾಯಿ-ಮಗು

ಮೂಡಬಿದಿರೆ ಸಾರ್ವಜನಿಕ ಸಮಾವೇಶದಲ್ಲಿ ಕಂಡುಬಂದ ದೃಶ್ಯ, ಮೋದಿಯನ್ನು ನೋಡಲು ಬಂದ ತಾಯಿ ಮತ್ತು ಪುಟ್ಟ ಮಗು. ಇಂದಿನ ಕಾರ್ಯಕ್ರಮದ ಹೈಲೈಟ್.

ಬಿಜೆಪಿ ಸಂಕಲ್ಪ

ಕರ್ನಾಟಕದಲ್ಲಿ ಆಧುನಿಕತೆಯ ಅಭಿವೃದ್ಧಿ ಮಾಡೋದು. ಕರ್ನಾಟಕವನ್ನ ಉತ್ಪಾದನೆಯಲ್ಲಿ ಸೂಪರ್ ಪವರ್ ಮಾಡೋದು ಬಿಜೆಪಿ ಸಂಕಲ್ಪ ಎಂದ ಮೋದಿ.

ಕೈ-ತೆನೆ ಬಗ್ಗೆ ಎಚ್ಚರ

ಕರ್ನಾಟಕದ ಜನರು ಕಾಂಗ್ರೆಸ್ ಬಗ್ಗೆ ಬಹಳ ಎಚ್ಚರವಾಗಿರಬೇಕು. ಅದೇ ರೀತಿ ಜೆಡಿಎಸ್ ಬಗ್ಗೆಯೂ ಇರಬೇಕು.

ಶಿಕ್ಷಣದಲ್ಲಿ ಕರಾವಳಿ ಟಾಪ್

ದ.ಕ ಮತ್ತು ಉಡುಪಿ ಶಿಕ್ಷಣದಲ್ಲಿ ಟಾಪರ್ ಜಿಲ್ಲೆಗಳು. ಕರ್ನಾಟಕ ಔದ್ಯೋಗಿಕ ವಿಕಾಸದಲ್ಲಿ ನಂಬರ್ ವನ್ ಆಗಬೇಕು. ಬಿಜೆಪಿ ಕರ್ನಾಟಕವನ್ನ ವಿಕಾಸದ ಕ್ಷೇತ್ರವಾಗಿ ಮಾಡಲಿದೆ.

ಯಕ್ಷಗಾನ ಕಿರೀಟ

ಕುಂದಾಪುರದ ಕಲಾವಿದರೊಬ್ಬರು ತಯಾರಿಸಿದ ಕರಾವಳಿ ಗಂಡು ಕಲೆ ಯಕ್ಷಗಾನದ ಕಿರೀಟ ವನ್ನು ಹಾಕಿ ಪ್ರಧಾನಿ ಮೋದಿಗೆ  ಅಂಕೋಲಾ ಸಮಾವೇಶದಲ್ಲಿ ಸನ್ಮಾನಿಸಲಾಯಿತು.

ಕೈ ವಿರುದ್ಧ ಕಿಡಿ

ಕರ್ನಾಟಕದಲ್ಲಿ ಸ್ಥಿರ ಸರ್ಕಾರ ರಚನೆ ಆಗದೇ ಇದ್ರೆ ನಿಮ್ಮ ಸಂಕಲ್ಪಗಳೂ ಸ್ಥಿರವಾಗಲ್ಲ. ಕಾಂಗ್ರೆಸ್ ಶಾಂತಿ ಮತ್ತು ಅಭಿವೃದ್ಧಿಯ ವಿರೋಧಿ

ಉತ್ತರ ಕನ್ನಡ ಅಭಿವೃದ್ಧಿ

ಉತ್ತರ ಕನ್ನಡದ ಉತ್ತರೋತ್ತರ ಅಭಿವೃದ್ಧಿಗೆ ಬದ್ಧವಾಗಿದೆ ಬಿಜೆಪಿ ಸರ್ಕಾರ. ಉತ್ತರ ಕನ್ನಡದ ಅಂಕೋಲಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿಕೆ.

ಪದ್ಮ ಪುರಸ್ಕೃತರ ಭೇಟಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸಾರ್ವಜನಿಕ ಸಭೆಯ ಮುನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

40%ಲಂಚ ಹೊಡೆದ್ರು, ಬೆಲೆ ಏರಿಸಿ ದೋಚಿದ್ರು‌: ಬಿಜೆಪಿ ವಿರುದ್ಧ ರಾಗಾ ವಾಗ್ದಾಳಿ

ಉತ್ತರ ಕರ್ನಾಟಕದ ಹಲವು ಕಡೆ ಪ್ರಿಯಾಂಕ ಗಾಂಧಿ ರೋಡ್ ಶೋ, ಹೊಸ ಗ್ಯಾರಂಟಿ ಘೋಷಣೆ

ಫೋಟೋಗಳಲ್ಲಿ: ರಾಜ್ಯದಲ್ಲಿ ಅಮಿತ್ ಶಾ ಭರ್ಜರಿ ರ್‍ಯಾಲಿ

ಫೋಟೋಗಳಲ್ಲಿ: ಪ್ರಿಯಾಂಕ ಗಾಂಧಿ ಕರ್ನಾಟಕ ಭೇಟಿಯ ಕ್ಷಣಗಳು