Politics
ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಎಸ್.ಬಿ.ಐ ಆಫೀಸರ್ಸ್ ಸೊಸೈಟಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆ ಸಂಖ್ಯೆ 122 ರಲ್ಲಿ ಕುಟುಂಬ ಸಮೇತವಾಗಿ ಮತದಾನ ಜಗದೀಶ್ ಶೆಟ್ಟರ್ ಮತದಾನ
ಮತದಾನ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್. ಬೆಂಗಳೂರಿನ ಜಯನಗರದಲ್ಲಿ ನಿರ್ಮಲಾ ಓಟಿಂಗ್. ಚಿಕ್ಕಮ್ಮ, ಚಿಕ್ಕಪ್ಪನ ಜೊತೆ ಬಂದು ಮತದಾನ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವೋಟಿಂಗ್ ಮಾಡಿದ್ದು, ಕೋರಮಂಗಲದಲ್ಲಿ ಪತ್ನಿ, ಪುತ್ರನ ಜತೆ ರಾಜೀವ್ ಚಂದ್ರಶೇಖರ್ ಮತದಾನ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದ ದೊಡ್ಡಾಲಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ವರುಣಾ ವಿಧಾನ ಸಭಾ ಕ್ಷೇತ್ರದ ಸಿದ್ದರಾಮನ ಹುಂಡಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ
ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತಿಯಲ್ಲಿರುವ ಮತದಾನ ಕೇಂದ್ರದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಮತದಾನ
ನಿಪ್ಪಾಣಿಯ ಶಶಿಕಲಾ ಜೊಲ್ಲೆ ಯಕ್ಸಂಬಾ ಪಟ್ಟಣದ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಬೂತ್ ನಂಬರ್ 27 ರಲ್ಲಿ ಮತ ಚಲಾಯಿಸಿದರು.
ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ, ಪತ್ನಿ ಜೊತೆ ಆಗಮಿಸಿ ಮತ ಚಲಾವಣೆ. ಕೊಡಿಗೆಹಳ್ಳಿಯಲ್ಲಿರುವ ಮತದಾನ
ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕು ಬಾಳಂಬೀಡ ಗ್ರಾಮದ ಬೂತ್ ನಂ 98 ರಲ್ಲಿ
ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಮತದಾನ
ಹುಬ್ಬಳ್ಳಿಯಲ್ಲಿ ಕುಟುಂಬದವರೊಂದಿಗೆ ನಾಗಶೆಟ್ಟಿಕೊಪ್ಪದ ವಿವೇಕಾನಂದ ನಗರದ ರೋಟರಿ ಶಾಲೆಯಲ್ಲಿ ಮತ ಚಲಾವಣೆ ಮಾಡಿ ಹಕ್ಕನ್ನು ಚಲಾಯಿಸಿದರು.
ಚಾಮರಾಜನಗರದ ಪೇಟೆ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 75 ರಲ್ಲಿ ಪತ್ನಿ ಶೈಲಜಾ ಜತೆ ಸೋಮಣ್ಣ ತೆರಳಿ ಮತವನ್ನು ಚಲಾಯಿಸಿದರು
ಮತದಾನ ಮಾಡುವುದಕ್ಕೆ ಮೊದಲು ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು ಹಾಗೂ ಬಿಡದಿ ಬಳಿ ಇರುವ ಶ್ರೀ ಕೋತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ
ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಟುಂಬ ಸಮೇತವಾಗಿ ಬಂದು ಮತದಾನ ಮಾಡಿದ ಕುಮಾರಸ್ವಾಮಿ