News

ಉದಯಪುರದ ಕಿಸಾನ್ ಮಹಾಕುಂಭ

ಉದಯಪುರದಲ್ಲಿ ಕಿಸಾನ್ ಮಹಾಕುಂಭ ಶುರುವಾಗಿದೆ. ಇಲ್ಲಿ ರೈತರು ತಮ್ಮ ಪ್ರಾಣಿಗಳು ಮತ್ತು ವ್ಯವಸಾಯದ ಆಧುನಿಕ ಉಪಕರಣಗಳನ್ನು ಡಿಸ್ಪ್ಲೇ ಮಾಡುತ್ತಾರೆ. ಇಲ್ಲಿನ ಮುಖ್ಯ ಆಕರ್ಷಣೆ ಎಮ್ಮೆ. 
 

Image credits: google

ಈ ಎಮ್ಮೆ ತುಂಬಾ ಫೇಮಸ್

ಈ ವಿಶೇಷ ಎಮ್ಮೆಯ ಹೆಸರು ಯುವರಾಜ. ಇದಕ್ಕೆ ಸುಮಾರು 15 ವರ್ಷ ಇರಬಹುದು, ಜೊತೆಗೆ ಸಾವಿರ ಕೆಜಿ ತೂಗುತ್ತೆ. ಎತ್ತರವಾದ ಈ ಎಮ್ಮೆಯನ್ನು ನೋಡಲು ಜನಜಾತ್ರೆಯೇ ಸೇರುತ್ತೆ. 
 

Image credits: google

ಹರಿಯಾಣದ ರೈತ ಕರ್ಮವೀರನ ಎಮ್ಮೆ

ಹರಿಯಾಣದ ಕುರುಕ್ಷೇತ್ರದಲ್ಲಿ ವಾಸಿಸುವ ರೈತ ಕರ್ಮವೀರನ ಎಮ್ಮೆ ಇದಾಗಿದ್ದು, ಇದನ್ನು ಒಂದು ನಡೆದಾಡುವ ಎಟಿಎಂ ಮಶೀನ್ ಎಂದೇ ಕರೆಯಬಹುದು. ಯಾಕಂದ್ರೆ ಇದು ತಿಂಗಳಲ್ಲಿ ಸುಮಾರು 7-8 ಲಕ್ಷ ದುಡಿಯುತ್ತೆ. 
 

Image credits: google

ಉಪಹಾರದಲ್ಲಿ ಬಾದಾಮಿ ಮತ್ತು ತುಪ್ಪ

ಈ ಎಮ್ಮೆಯನ್ನು ನೋಡಿಕೊಳ್ಳುವ ವಿಧಾನವೇ ವಿಭಿನ್ನ. ಬೆಳಗ್ಗೆ ಹಾಲು ಮತ್ತು ಬಾದಾಮಿ ಸೇವಿಸುತ್ತೆ. ಬಳಿಕ ಐದು ಬಗೆಯ ವನಸ್ಪತಿ ಮತ್ತು ಎಣ್ಣೆ ಮಿಶ್ರಿತವಾದ ತಿಳಿ, ಧಾನ್ಯಗಳು ಮತ್ತು ತುಪ್ಪ ಸೇವಿಸುತ್ತೆ. 
 

Image credits: google

ಇಲ್ಲಿವರೆಗೆ ಇದರ ಗಳಿಕೆ 9 ಕೋಟಿ

ಈ ಎಮ್ಮೆ ಇಲ್ಲಿವರೆಗೆ ತನ್ನ ಮಾಲೀಕನಿಗೆ ಸುಮಾರು 9 ಕೋಟಿ ರೂಪಾಯಿ ಆದಾಯ ನೀಡಿದೆ. ಇದನ್ನ ಖರೀದಿಸಲು ಸಾವಿರಾರು ಜನ ಕಾಯ್ತಿದ್ದಾರೆ. ಆದರೆ ಕರ್ಮವೀರ ಮಾತ್ರ ಇದನ್ನ ಮಾರಲು ತಯಾರಿಲ್ಲ. 
 

Image credits: google

ಮರ್ಸಿಡೀಸ್ ಮತ್ತು ಬಿಎಂಡಬ್ಲ್ಯೂ ಕ್ಕಿಂತ ದುಬಾರಿ ಎಮ್ಮೆ

ಈ ಎಮ್ಮೆ ಮರ್ಸಿಡೀಸ್ ಮತ್ತು ಬಿಎಂಡಬ್ಲ್ಯೂ ಗಿಂತಾನೂ ದುಬಾರಿ. ಭಾರತದಲ್ಲಿ ಮರ್ಸಿಡೀಸ್ ಬೆಲೆ 3 ಕೋಟಿ ಮತ್ತು BMW ಎಕ್ಸ್ 7 ಬೆಲೆ ಸುಮಾರು ಒಂದೂವರೆಗೆ ಕೋಟಿ. ಈ ಎಮ್ಮೆ ಬೆಲೆ 9.2 ಕೋಟಿ.

Image credits: google
Find Next One