ಸಕ್ಕರೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು ಎಂದುಕೊಂಡಿದ್ದೀರಾ? ಹಾಗಿದ್ರೆ ಈ ಕೆಲವು ವಿಷಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಲೇಬೇಕು.
ಯಾವುದೇ ಆಹಾರ ಪದಾರ್ಥಗಳನ್ನು ಖರೀದಿಸುವಾಗ, ಅದರ ಮೇಲಿರುವ ಲೇಬಲ್ ಅನ್ನು ಸರಿಯಾಗಿ ಓದಿ. ಅದರಲ್ಲಿ ಯಾವೆಲ್ಲಾ ಪದಾರ್ಥಗಳನ್ನು ಬಳಸಲಾಗಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ.
ಸಿಹಿತಿಂಡಿಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಅದರ ಬದಲು, ತಾಜಾ ಹಣ್ಣುಗಳನ್ನು ಸೇವಿಸಿ. ಇದು ದೇಹಕ್ಕೆ ಹೆಚ್ಚುವರಿ ಸಕ್ಕರೆ ಸೇರುವುದನ್ನು ತಡೆಯುತ್ತದೆ.
ಸಾಫ್ಟ್ ಡ್ರಿಂಕ್ಸ್, ಕೋಲಾ ಸೇರಿದಂತೆ ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳನ್ನು ಸಂಪೂರ್ಣವಾಗಿ ಕುಡಿಯುವುದನ್ನು ನಿಲ್ಲಿಸಿ.
ಟೀ ಮತ್ತು ಕಾಫಿಯಲ್ಲಿ ಸಕ್ಕರೆಗೆ ಬದಲಾಗಿ ಜಾಯಿಕಾಯಿ (nutmeg), ಹೇಝಲ್‌ನಟ್ (hazelnut) ಅಥವಾ ದಾಲ್ಚಿನ್ನಿ (cinnamon) ಪುಡಿಯನ್ನು ಸೇರಿಸಬಹುದು.
ಯಾವಾಗಲೂ ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಸಿಹಿ ತಿನ್ನಬೇಕೆಂಬ ಬಯಕೆ ಮತ್ತು ಅತಿಯಾದ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬಿಸ್ಕತ್ತು, ಚಿಪ್ಸ್‌ನಂತಹ ಸಂಸ್ಕರಿಸಿದ ಸ್ನ್ಯಾಕ್ಸ್‌ಗಳನ್ನು ತಿನ್ನುವುದನ್ನು ಬಿಡಿ. ಇವುಗಳ ಬದಲು ನಿಮ್ಮ ಡಯಟ್‌ನಲ್ಲಿ ನಟ್ಸ್ ಮತ್ತು ಸೀಡ್ಸ್ (ಬೀಜಗಳು) ಸೇರಿಸಿಕೊಳ್ಳಿ.
ಯಾರಾದರೂ ನಿಮಗೆ ಸಿಹಿತಿಂಡಿಗಳನ್ನು ಕೊಟ್ಟಾಗ, 'ಬೇಡ' ಎಂದು ಹೇಳಲು ಹಿಂಜರಿಯಬೇಡಿ. ಈ ಅಭ್ಯಾಸವು ನೀವು ಅತಿಯಾಗಿ ಸಕ್ಕರೆ ಸೇವಿಸುವುದನ್ನು ತಡೆಯಲು ಖಂಡಿತಾ ಸಹಾಯ ಮಾಡುತ್ತದೆ.
Soft Idli: ಬೆಣ್ಣೆಯಷ್ಟು ಮೃದುವಾದ ಇಡ್ಲಿ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್!
Bangle Designs: ಕೈಗಳ ಅಂದ ಹೆಚ್ಚಿಸುವ ಬಗೆಬಗೆಯ ಬಳೆಗಳು, ಇಲ್ಲಿದೆ ನೋಡಿ!
Mangalsutra : ಟ್ರೆಂಡಿ ಲುಕ್‌ಗೆ ಇಲ್ಲಿವೆ ಲೈಟ್‌ವೇಟ್ ಮಂಗಳಸೂತ್ರ ಬ್ರೇಸ್ಲೆಟ್!
ಈಗ ಮತ್ತೆ ಟ್ರೆಂಡ್‌ನಲ್ಲಿವೆ ಅಜ್ಜ-ಅಜ್ಜಿಯ ಕಾಲದ ಈ ಹೆಸರುಗಳು