Kannada

ಮನೆಯಲ್ಲೇ ಶುಂಠಿ ಬೆಳೆಯಿರಿ

ಮನೆಗೆ ಬೇಕಾದ ಶುಂಠಿಗಾಗಿ ಯಾಕೆ ಅಂಗಡಿಗೆ ಹೋಗಬೇಕು? ಮನೆಯಲ್ಲೇ ಸುಲಭವಾಗಿ ಬೆಳೆಸಬಹುದು. ಅದಕ್ಕೆ ಏನೆಲ್ಲಾ ಗಮನಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Kannada

ಉತ್ತಮ ಬೀಜದ ಆಯ್ಕೆ

ಅಂಗಡಿಯಿಂದ ತಂದ ಶುಂಠಿಯನ್ನೇ ಬೀಜವಾಗಿ ಬಳಸಬಹುದು. ಒಂದಕ್ಕಿಂತ ಹೆಚ್ಚು ಮೊಳಕೆ ಇರುವ, ಒಣಗದ, ದಪ್ಪಗಿರುವ ಶುಂಠಿ ತುಂಡುಗಳನ್ನು ಆಯ್ಕೆ ಮಾಡಿಕೊಳ್ಳಿ.

Image credits: google
Kannada

ಸರಿಯಾದ ಪಾತ್ರೆ / ಸ್ಥಳದ ಆಯ್ಕೆ

ಶುಂಠಿ ಆಳವಾಗಿ ಬೆಳೆಯುವುದಕ್ಕಿಂತ ಹೆಚ್ಚಾಗಿ ಅಡ್ಡಲಾಗಿ ಹರಡಿಕೊಂಡು ಬೆಳೆಯುತ್ತದೆ. ಹಾಗಾಗಿ, ಆಳ ಕಡಿಮೆ ಇದ್ದು, ಅಗಲವಾಗಿರುವ ಪಾತ್ರೆ ಅಥವಾ ಪ್ಲಾಸ್ಟಿಕ್ ಚೀಲಗಳನ್ನು ಆಯ್ಕೆ ಮಾಡಿ. ಪಾತ್ರೆಗೆ ತೂತುಗಳಿರಲಿ.

Image credits: google
Kannada

ಮಣ್ಣು ಸಿದ್ಧಪಡಿಸುವುದು

ಶುಂಠಿ ಬೆಳೆಗೆ ನೀರು ನಿಲ್ಲುವುದು ಒಳ್ಳೆಯದಲ್ಲ. ಹಾಗಾಗಿ, ತೆಂಗಿನ ನಾರು, ಸಗಣಿ ಗೊಬ್ಬರ/ಕಾಂಪೋಸ್ಟ್, ತೇವಾಂಶವಿರುವ ಮಣ್ಣು ಮತ್ತು ಸ್ವಲ್ಪ ಮರಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪಾಟಿಂಗ್ ಮಿಕ್ಸ್ ರೆಡಿ ಮಾಡಿ.

Image credits: google
Kannada

ಶುಂಠಿ ನೆಡುವ ವಿಧಾನ

ಶುಂಠಿ ತುಂಡುಗಳನ್ನು ಮಣ್ಣಿನಲ್ಲಿ 1 ರಿಂದ 2 ಇಂಚುಗಳಷ್ಟು ಆಳದಲ್ಲಿ ಇಡಿ. ಮೊಳಕೆಗಳು ಮೇಲ್ಮುಖವಾಗಿರುವಂತೆ ನೆಡಬೇಕು. ಮೇಲೆ ತೆಳುವಾಗಿ ಮಣ್ಣು ಹರಡಿ ಮುಚ್ಚಿ.

Image credits: google
Kannada

ಸೂರ್ಯನ ಬೆಳಕು

ಇದಕ್ಕೆ ನೇರವಾದ ಹಾಗೂ ಗಾಢ ಬಿಸಿಲಿನ ಅಗತ್ಯವಿಲ್ಲ. ಭಾಗಶಃ ನೆರಳಿರುವ ಜಾಗಗಳು ಸೂಕ್ತ. ದಿನಕ್ಕೆ 2-5 ಗಂಟೆಗಳ ಕಾಲ ಮಾತ್ರ ಬಿಸಿಲು ಬೀಳುವ ಕಿಟಕಿ ಪಕ್ಕ, ಬಾಲ್ಕನಿ ಅಥವಾ ಮರದ ನೆರಳು ಉತ್ತಮ.

Image credits: google
Kannada

ನೀರುಣಿಸುವ ವಿಧಾನ

ಮಣ್ಣಿನಲ್ಲಿ ಯಾವಾಗಲೂ ಸ್ವಲ್ಪ ತೇವಾಂಶ ಇರಬೇಕು. ನೀರು ನಿಲ್ಲಬಾರದು. ಮಣ್ಣಿನ ಮೇಲ್ಭಾಗ ಒಣಗಿದಾಗ ಮಾತ್ರ ನೀರು ಹಾಕಿ. ಪ್ರತಿ ತಿಂಗಳು ಸ್ವಲ್ಪ ಸಾವಯವ ಗೊಬ್ಬರ ಅಥವಾ ಬೂದಿ ಹಾಕಬಹುದು.

Image credits: google
Kannada

ಮಲ್ಚಿಂಗ್ ವಿಧಾನ

ಶುಂಠಿ ನೆಟ್ಟ ನಂತರ, ಒಣಗಿದ ಎಲೆಗಳು/ ಹುಲ್ಲನ್ನು ಮೇಲೆ ಮುಚ್ಚಬಹುದು. ಇದರಿಂದ ತೇವಾಂಶ ಉಳಿಯುತ್ತದೆ. ಕಳೆಗಳು ಬೆಳೆಯುವುದಿಲ್ಲ. 8-10 ತಿಂಗಳ ನಂತರ ಶುಂಠಿ ಎಲೆಗಳು ಹಳದಿಯಾಗಿ ಒಣಗಲು ಆರಂಭಿಸಿದಾಗ ಫಸಲು ತೆಗೆಯಬಹುದು.

Image credits: google

Chandbali Earrings: ಶ್ರಾವಣದಲ್ಲಿ ಸೀರೆ, ಸಲ್ವಾರ್‌ ಜೊತೆ ಧರಿಸಲು ಟ್ರೆಂಡಿ ಚಾಂದ್‌ಬಾಲಿ ಡಿಸೈನ್‌ಗಳು!

ಗಂಡನಿಲ್ಲದೆ ಹೆಂಡತಿ ಎಂದಿಗೂ ಹೋಗಬಾರದ ಸ್ಥಳಗಳಿವು

Nail Art: ಮಾನ್ಸೂನ್‌ನಲ್ಲಿ ಹುಡುಗಿಯರಿಗಾಗಿ ಟ್ರೆಂಡಿ ನೇಲ್ ಆರ್ಟ್ಸ್: ಕೈಗಳ ಅಂದ ಹೆಚ್ಚಿಸುತ್ತೆ!

ಮಗುವಿಗೆ ಹೆಸರಿಡಬೇಕಾ? ಯಾವಾಗ್ಲೂ ಟ್ರೆಂಡಿಂಗ್‌ನಲ್ಲಿರುವ ನೇಮ್ಸ್ ಇಲ್ಲಿವೆ