ಅಡುಗೆಮನೆಯ ಸಿಂಕ್‌ನಲ್ಲಿರುವ ಜಿಡ್ಡು, ಕಲೆಗಳನ್ನು ತೆಗೆಯೋದು ಹೇಗೆ ಅಂತ ಯೋಚಿಸ್ತಿದ್ದೀರಾ? ಅದಕ್ಕೆ ಇಲ್ಲಿದೆ ಐದು ಸಿಂಪಲ್ ಟಿಪ್ಸ್.
life Apr 09 2026
Author: Ashwini HR Image Credits:Getty
Kannada
ಇಷ್ಟು ಮಾಡಿದರೆ ಸಾಕು
ನಾವು ಕಿಚನ್ ಕ್ಯಾಬಿನೆಟ್, ಕೌಂಟರ್‌ಟಾಪ್‌ಗಳನ್ನು ಹೇಗೆ ಕ್ಲೀನ್ ಮಾಡ್ತೀವೋ, ಹಾಗೆಯೇ ಸಿಂಕ್ ಅನ್ನೂ ಸ್ವಚ್ಛವಾಗಿಡಬೇಕು. ಕಿಚನ್ ಸಿಂಕ್ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
Image credits: Getty
Kannada
ಬೇಕಿಂಗ್ ಸೋಡಾ ಬಳಸಿ
ಸ್ವಲ್ಪ ನೀರಿಗೆ ಬೇಕಿಂಗ್ ಸೋಡಾ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಸಿಂಕ್‌ಗೆ ಹಚ್ಚಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು, ನಂತರ ಸ್ಕ್ರಬ್ಬರ್ ಮತ್ತು ನೀರಿನಿಂದ ಚೆನ್ನಾಗಿ ಉಜ್ಜಿ ತೊಳೆದರೆ ಸಾಕು.
Image credits: Freepik
Kannada
ನಿಂಬೆರಸ ಮತ್ತು ಬೇಕಿಂಗ್ ಸೋಡಾ
ಅರ್ಧ ಕಪ್ ನಿಂಬೆರಸಕ್ಕೆ ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಸಿಂಕ್‌ಗೆ ಚೆನ್ನಾಗಿ ಹಚ್ಚಿ. 10 ನಿಮಿಷಗಳ ನಂತರ, ಬಿಸಿ ನೀರಿನಿಂದ ತೊಳೆದರೆ ಸಿಂಕ್ ಫಳ ಫಳ ಅನ್ನುತ್ತದೆ.
Image credits: pinterest
Kannada
ವಿನೆಗರ್ ಮ್ಯಾಜಿಕ್
ಮೊದಲು ಸಿಂಕ್ ಮೇಲೆ ಬೇಕಿಂಗ್ ಸೋಡಾವನ್ನು ಉದುರಿಸಿ. ನಂತರ ಅದರ ಮೇಲೆ ಸ್ವಲ್ಪ ವಿನೆಗರ್ ಸುರಿಯಿರಿ. ಆಮೇಲೆ ಸ್ಕ್ರಬ್ಬರ್ ಬಳಸಿ ಚೆನ್ನಾಗಿ ಉಜ್ಜಿ ಕ್ಲೀನ್ ಮಾಡಿದರೆ ಸಾಕು.
Image credits: social Media
Kannada
ಆಲಿವ್ ಆಯಿಲ್
ಸ್ವಚ್ಛವಾದ ಬಟ್ಟೆಗೆ ಸ್ವಲ್ಪ ಆಲಿವ್ ಆಯಿಲ್ ಹಾಕಿಕೊಂಡು ಸಿಂಕ್ ಅನ್ನು ಚೆನ್ನಾಗಿ ಒರೆಸಿ. ಇದು ನಿಮ್ಮ ಸಿಂಕ್‌ಗೆ ಹೊಸ ಹೊಳಪನ್ನು ಕೊಡುತ್ತದೆ.
Image credits: Getty
Kannada
ಸುತ್ತಮುತ್ತಲಿನ ಜಾಗವನ್ನೂ ಕ್ಲೀನ್ ಮಾಡಿ
ಸಿಂಕ್ ಕ್ಲೀನ್ ಮಾಡುವಾಗ ಅದರ ಸುತ್ತಮುತ್ತಲಿನ ಜಾಗವನ್ನೂ ಸ್ವಚ್ಛಗೊಳಿಸುವುದು ಮುಖ್ಯ. ನಿಮ್ಮದು ಸ್ಟೀಲ್ ಸಿಂಕ್ ಆಗಿದ್ದರೆ, ಬ್ಲೀಚ್ ಇರುವ ಕ್ಲೀನರ್‌ಗಳು ಮತ್ತು ಗಡುಸಾದ ಸ್ಕ್ರಬ್ಬರ್‌ಗಳನ್ನು ಬಳಸಬೇಡಿ.