ಕೆಲವೊಮ್ಮೆ ಮನೆಯಲ್ಲಿ ಹಾಲು ಕಡಿಮೆ ಇರುತ್ತದೆ ಅಥವಾ ತುಂಬಾ ತೆಳುವಾಗಿರುತ್ತದೆ. ಅಂತಹ ಸಮಯದಲ್ಲಿ ಅತಿಥಿಗಳು ಬಂದರೆ ಟೀ ರುಚಿಯಾಗಲ್ಲ ಅನ್ನೋದೆ ಚಿಂತೆ. ಆದರೆ ಗಟ್ಟಿಯಾದ ಟೀ ಮಾಡುವ ದಾದಿಯ ಸೀಕ್ರೆಟ್ ಟಿಪ್ ನಿಮಗಾಗಿ.
food Apr 08 2026
Author: Ashwini HR Image Credits:Social media
Kannada
ಹಾಲಿನ ಪುಡಿ
ಆ ಸೀಕ್ರೆಟ್ ಟಿಪ್ ಅಂದ್ರೆ ಹಾಲಿನ ಪುಡಿ. ಆದರೆ ಟೀ ಮಾಡುವಾಗ ಅದಕ್ಕೆ ಹಾಲಿನ ಪುಡಿಯನ್ನು ನೇರವಾಗಿ ಹಾಕಬೇಡಿ, ಹೀಗೆ ಮಾಡಿದರೆ ಗಂಟುಗಳಾಗಬಹುದು.
Image credits: Getty
Kannada
ಮಿಶ್ರಣ ಮಾಡಿ
ಮೊದಲು ಸ್ವಲ್ಪ ಉಗುರು ಬೆಚ್ಚಗಿನ ನೀರು ಅಥವಾ ಹಾಲನ್ನು ಒಂದು ಸಣ್ಣ ಬಟ್ಟಲಿಗೆ ತೆಗೆದುಕೊಳ್ಳಿ. ಅದಕ್ಕೆ ಹಾಲಿನ ಪುಡಿಯನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಒಂದು ದ್ರಾವಣ ಸಿದ್ಧಪಡಿಸಿಕೊಳ್ಳಿ.
Image credits: unsplash
Kannada
ಟೀಗೆ ಸೇರಿಸಿ
ಈಗ ಟೀ ಕುದಿಯುತ್ತಿರುವಾಗ ಒಂದು ಕೈಯಿಂದ ಈ ಹಾಲಿನ ಪುಡಿಯ ದ್ರಾವಣವನ್ನು ಸುರಿಯಿರಿ ಮತ್ತು ಇನ್ನೊಂದು ಕೈಯಿಂದ ಚಮಚದಲ್ಲಿ ಚಹಾವನ್ನು ನಿರಂತರವಾಗಿ ಕೈಯಾಡಿಸುತ್ತಿರಿ. ಹೀಗೆ ಮಾಡುವುದರಿಂದ ಹಾಲು ಒಡೆಯುವುದಿಲ್ಲ.
Image credits: Social media
Kannada
ಕುದಿಸಿ
ನಂತರ ಇದಕ್ಕೆ ಅಗತ್ಯವಿರುವಷ್ಟು ಸಕ್ಕರೆ ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
Image credits: Social media
Kannada
ಫಲಿತಾಂಶ
ಹಾಲು ಕಡಿಮೆ ಇದ್ದರೂ ಅಥವಾ ಹಾಲು ತೆಳುವಾಗಿದ್ದರೂ ನಿಮ್ಮ ಟೀ ಹೋಟೆಲ್‌ನಲ್ಲಿ ಸಿಗುವಂತೆ ಗಟ್ಟಿಯಾಗಿ ಮತ್ತು ಅತ್ಯಂತ ರುಚಿಕರವಾಗಿ ಸಿದ್ಧವಾಗುತ್ತದೆ.