Kannada

ಕ್ವಿಕ್ ಹೇರ್‌ಸ್ಟೈಲ್, ಗಡಿಬಿಡಿ ಇಲ್ಲದೆ ಮಗಳನ್ನು ಶಾಲೆಗೆ ರೆಡಿ ಮಾಡಿ

ಬೆಳಗ್ಗಿನ ಅವಸರದಲ್ಲಿ ಮಕ್ಕಳಿಗೆ ಶಾಲೆಗೆ ರೆಡಿ ಮಾಡುವುದು ದೊಡ್ಡ ಸವಾಲು. ಅದರಲ್ಲೂ ಹೇರ್‌ಸ್ಟೈಲ್ ಮಾಡುವುದು ಕಷ್ಟ. ಇಲ್ಲಿವೆ 5 ನಿಮಿಷದಲ್ಲಿ ಮಾಡಬಹುದಾದ ಸುಲಭ ಕೇಶವಿನ್ಯಾಸಗಳು.
Kannada

ಡಬಲ್ ಬ್ರೇಡ್

ಸಾದಾ ಡಬಲ್ ಜಡೆ ಬದಲು ಬ್ರೇಡ್ ಸ್ಟೈಲ್ ಮಾಡಬಹುದು. ಮೇಲಿನಿಂದ ಕೂದಲನ್ನು ತೆಳುವಾದ ರಬ್ಬರ್‌ನಿಂದ ಕಟ್ಟಿ, ಕೆಳಗಿನವರೆಗೂ ತನ್ನಿ. ನಂತರ ಒಂದು ಕ್ಯೂಟ್ ಕ್ಲಿಪ್ ಹಾಕಿ ಟೈಟ್ ಮಾಡಿ. ಇದು ತುಂಬಾ ಸುಲಭವಾಗಿ ಆಗುತ್ತೆ.

Image credits: pinterest
Kannada

ಬಬಲ್ ಡಬಲ್ ಪೋನಿಟೇಲ್

ಕೂದಲು ಉದ್ದ ಇದ್ರೆ, ಬಬಲ್ ಪೋನಿಟೇಲ್ ಹಾಕಿ. ಇದು ನೋಡೋಕೆ ಹೆಚ್ಚು ಟೈಮ್ ಹಿಡಿಯುತ್ತೆ ಅನ್ಸುತ್ತೆ, ಆದ್ರೆ ಮಾಡೋದು ತುಂಬಾ ಸುಲಭ. ಸ್ವಲ್ಪ ಗ್ಯಾಪ್ ಬಿಟ್ಟು ರಬ್ಬರ್ ಬ್ಯಾಂಡ್ ಹಾಕುತ್ತಾ ಬನ್ನಿ. ಬಬಲ್ ಪೋನಿಟೇಲ್ ರೆಡಿ.

Image credits: pinterest
Kannada

ಡಬಲ್ ಫ್ರಂಟ್ ಬನ್

ಮಗಳಿಗೆ ಕ್ಯೂಟ್ ಲುಕ್ ಕೊಡಬೇಕಂದ್ರೆ, ಮುಂಭಾಗದ ಕೂದಲನ್ನು ತೆಗೆದುಕೊಂಡು ಡಬಲ್ ಬನ್ ಮಾಡಿ. ಹಿಂದಿನ ಕೂದಲನ್ನು ಹಾಗೆಯೇ ಓಪನ್ ಆಗಿ ಬಿಡಿ. ಮುಂಭಾಗದಲ್ಲಿ ಒಂದು ಕ್ಯೂಟ್ ಕ್ಲಿಪ್ ಹಾಕಿ.
Image credits: pinterest
Kannada

ಫ್ರಂಟ್ ಡಬಲ್ ಜಡೆ ಜೊತೆ ಓಪನ್ ಹೇರ್

ಕೂದಲು ಚಿಕ್ಕದಾಗಿದ್ದು, ಪೂರ್ತಿಯಾಗಿ ಓಪನ್ ಬಿಡೋಕೆ ಇಷ್ಟ ಇಲ್ಲದಿದ್ರೆ, ಎರಡೂ ಬದಿಯಿಂದ ಸ್ವಲ್ಪ ಕೂದಲು ತೆಗೆದು ಜಡೆ ಹೆಣೆಯಿರಿ. ಕೆಳಭಾಗದಲ್ಲಿ ಸೈಡಿಗೆ ಒಂದು ಕ್ಲಿಪ್ ಹಾಕಿ. ಇದನ್ನು ಮಾಡೋಕೂ ಕೇವಲ 5 ನಿಮಿಷ ಸಾಕು.
Image credits: pinterest
Kannada

ಸೈಡ್ ಟ್ರಿಪಲ್ ಲೇಯರ್ ಜಡೆ

ಸಿಂಪಲ್ ಆದ್ರೂ ನೋಡೋಕೆ ಕ್ಲಾಸಿಕ್ ಆಗಿ ಕಾಣುವ ಹೇರ್‌ಸ್ಟೈಲ್. ಸೈಡ್‌ನಿಂದ ಕೂದಲಿನ 3 ಜಡೆಗಳನ್ನು ಮಾಡಿ, ನಂತರ ಎಲ್ಲವನ್ನೂ ಒಟ್ಟಿಗೆ ಕಟ್ಟಿ. ಕ್ಲಿಪ್ ಹಾಕಿ ಅದನ್ನು ಭದ್ರಪಡಿಸಿ. ಶಾಲೆಗೆ ಇದು ಬೆಸ್ಟ್ ಹೇರ್‌ಸ್ಟೈಲ್.

Image credits: pinterest

Gardening Hacks: ಕಸದಿಂದ ರಸ, ನಿಮ್ಮ ಗಾರ್ಡನ್​ಗಾಗಿ 7 ಅದ್ಭುತ ಹ್ಯಾಕ್ಸ್

ಫಸ್ಟ್‌ ಟೈಂ ಸೀರೆ ಧರಿಸುತ್ತಿದ್ದೀರಾ? ಎಲ್ಲೆಲ್ಲಿ ಪಿನ್ ಹಾಕಬೇಕು ಗೊತ್ತಾ?

ಬೆಂಟೆಕ್ಸ್ ಮರಾಠಿ ಬಳೆ ಫ್ಯಾನ್ಸಿ ಡಿಸೈನ್ಸ್: ಗಾಜಿನ ಬಳೆಗಳಿಗೆ ಪರ್ಫೆಕ್ಟ್ ಮ್ಯಾಚ್

ಏಕಾದಶಿಯಂದು ಲಡ್ಡು ಗೋಪಾಲನಿಗೆ ವಿಶೇಷ ಶೃಂಗಾರ: ಇಲ್ಲಿವೆ ಹೊಸ ಡ್ರೆಸ್‌ ಡಿಸೈನ್ಸ್!