ಅಡುಗೆ ಮನೆಯಲ್ಲಿ ಬಳಸುವ ಬಟ್ಟೆಗಳು ಎಣ್ಣೆ ಮತ್ತು ಮಸಾಲೆ ಕಲೆಗಳಿಂದ ಬೇಗನೆ ಜಿಡ್ಡಾಗುತ್ತವೆ. ಎಷ್ಟೇ ತೊಳೆದರೂ ಆ ಅಂಟು ಹೋಗುವುದಿಲ್ಲ ಅಂತಾದ್ರೆ ಈ ಸರಳ ಮನೆಮದ್ದುಗಳನ್ನು ಬಳಸಿ.
kitchen Apr 03 2026
Author: Ashwini HR Image Credits:Social media
Kannada
ಅಡುಗೆ ಸೋಡಾ
ಬಿಸಿ ನೀರಿಗೆ 2 ಚಮಚ ಅಡುಗೆ ಸೋಡಾ ಹಾಕಿ ಬೆರೆಸಿ. ಇದರಲ್ಲಿ ಜಿಡ್ಡಾದ ಬಟ್ಟೆಗಳನ್ನು 10 ನಿಮಿಷ ನೆನೆಸಿಡಿ. ನಂತರ ಮಾಮೂಲಿ ತೊಳೆದರೆ ಕಲೆ ಮತ್ತು ಅಂಟು ಮಾಯವಾಗುತ್ತದೆ.
Image credits: Pixabay
Kannada
ಉಪ್ಪು ಮತ್ತು ನಿಂಬೆಹಣ್ಣು
ಬಟ್ಟೆಯ ಜಿಡ್ಡಿನ ಕಲೆಗಳ ಮೇಲೆ ಸ್ವಲ್ಪ ಉಪ್ಪು ಉದುರಿಸಿ, ಅದರ ಮೇಲೆ ಲಿಂಬೆ ರಸ ಹಾಕಿ ಉಜ್ಜಿ. ಇದು ಎಣ್ಣೆಯ ಜಿಡ್ಡನ್ನು ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ.
Image credits: Pixabay
Kannada
ವಿನೆಗರ್ ಬಳಕೆ
ಬಿಸಿ ನೀರಿಗೆ ಸ್ವಲ್ಪ ವಿನೆಗರ್ ಸೇರಿಸಿ ಬಟ್ಟೆಗಳನ್ನು ನೆನೆಸಿಟ್ಟರೆ, ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಕೆಟ್ಟ ವಾಸನೆ ಎರಡೂ ದೂರವಾಗುತ್ತವೆ.
Image credits: Getty
Kannada
ಬಿಸಿ ನೀರಿನ ಬಳಕೆ
ಕಿಚನ್ ಬಟ್ಟೆಗಳನ್ನು ಯಾವತ್ತೂ ತಣ್ಣೀರಿನಲ್ಲಿ ತೊಳೆಯಬೇಡಿ. ಬಿಸಿ ನೀರಿನಲ್ಲಿ ಸ್ವಲ್ಪ ಸರ್ಫ್ ಹಾಕಿ ತೊಳೆದರೆ ಜಿಡ್ಡು ಬೇಗನೆ ಬಿಡುತ್ತದೆ.
Image credits: Getty
Kannada
ಒದ್ದೆಯಾಗಿ ಇಡಬೇಡಿ
ಅಡುಗೆ ಮನೆಯ ಮಸಿ ಬಟ್ಟೆಗಳನ್ನು ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ತೊಳೆಯಿರಿ. ಬಟ್ಟೆಗಳು ಅತಿಯಾದ ಜಿಡ್ಡಾಗುವವರೆಗೂ ಕಾಯಬೇಡಿ. ತೊಳೆದ ನಂತರ ಬಟ್ಟೆಗಳನ್ನು ಚೆನ್ನಾಗಿ ಒಣಗಿಸಿ, ಒದ್ದೆಯಾಗಿ ಇಡಬೇಡಿ.