ನಿಮ್ಮ ಅಡುಗೆಮನೆಯ ಗಾತ್ರ 8x10 ಅಡಿಯಲ್ಲಿದ್ದರೆ ಸರಿಯಾದ ಕಿಚನ್ ಕ್ಯಾಬಿನೆಟ್ ವಿನ್ಯಾಸವು ನಿಮ್ಮ ಅಡುಗೆಮನೆಗೆ ದೊಡ್ಡ, ಆಧುನಿಕ ಮತ್ತು ಪ್ರೀಮಿಯಂ ಲುಕ್ ಕೊಡುತ್ತದೆ. ಇಲ್ಲಿ ಕೆಲವು ವಿನ್ಯಾಸಗಳನ್ನು ನೀಡಲಾಗಿದೆ.
life Feb 01 2026
Author: Ashwini HR Image Credits:livspace.com
Kannada
ಗ್ಲಾಸಿ ಫಿನಿಶ್ ಮಾಡ್ಯುಲರ್ ಕಿಚನ್ ಕ್ಯಾಬಿನೆಟ್
ಅಡುಗೆಮನೆ ದೊಡ್ಡದಾಗಿ ಕಾಣಬೇಕೆಂದ್ರೆ ಗ್ಲಾಸಿ ಫಿನಿಶ್ ಮಾಡ್ಯುಲರ್ ಕಿಚನ್ ಕ್ಯಾಬಿನೆಟ್ ಉತ್ತಮ ಆಯ್ಕೆ. ಬಿಳಿ, ತಿಳಿ ಬೂದು ಬಣ್ಣದ ಗ್ಲಾಸಿ ಕ್ಯಾಬಿನೆಟ್ ಅಳವಡಿಸಿ. ಹ್ಯಾಂಡಲ್‌ಲೆಸ್ ಕ್ಯಾಬಿನೆಟ್ ಪರ್‌ಫೆಕ್ಟ್.
Image credits: Gemini AI
Kannada
ಎಲ್-ಆಕಾರದ ಬಿಳಿ ಮತ್ತು ಮರದ ಬಣ್ಣದ ಕಿಚನ್ ಕ್ಯಾಬಿನೆಟ್
ಅಡುಗೆಮನೆಯು ಎಲ್-ಆಕಾರಕ್ಕೆ ಸೂಕ್ತವಾಗಿದ್ದರೆ, ಈ ರೀತಿಯ ಕಿಚನ್ ಕ್ಯಾಬಿನೆಟ್ ಮಾಡಬಹುದು. ಬಿಳಿ ಮತ್ತು ಮರದ ಟೆಕ್ಸ್ಚರ್‌ನಲ್ಲಿ ಕ್ಯಾಬಿನೆಟ್ ಮಾಡಿ. ಓವನ್ ಕೆಳಗೆ ಇರಿಸಿ. ಇಡೀ ಅಡುಗೆಮನೆ ಐಷಾರಾಮಿಯಾಗಿ ಕಾಣುತ್ತದೆ.
Image credits: pinterest
Kannada
ಟು-ಟೋನ್ ಕಿಚನ್ ಕ್ಯಾಬಿನೆಟ್
ಒಂದೇ ಬಣ್ಣ ಇಷ್ಟಪಡದಿದ್ದರೆ ಟು-ಟೋನ್‌ನಲ್ಲಿ ವಿನ್ಯಾಸಗೊಳಿಸಬಹುದು. ಡಾರ್ಕ್ ಮತ್ತು ಲೈಟ್ ಕಾಂಬಿನೇಶನ್ ಪರ್‌ಫೆಕ್ಟ್. ಬೂದು ಬಣ್ಣದೊಂದಿಗೆ ಮರದ ಬಣ್ಣದ ಕಾಂಬಿನೇಶನ್ ಮೂಲಕ ನೀವು ಸೊಗಸಾದ ಲುಕ್ ನೀಡಬಹುದು.
Image credits: Gemini AI
Kannada
ಮ್ಯಾಟ್ ಗ್ರೀನ್ ಮತ್ತು ವುಡನ್ ಫಿನಿಶ್ ಕಿಚನ್ ಕ್ಯಾಬಿನೆಟ್
ಮ್ಯಾಟ್ ಗ್ರೀನ್ ಮತ್ತು ವುಡನ್ ಫಿನಿಶ್ ಕಿಚನ್ ಕ್ಯಾಬಿನೆಟ್ ಚಿಕ್ಕದಾಗಿದ್ದರೂ ಐಷಾರಾಮಿ ಲುಕ್ ಕೊಡುತ್ತೆ. ಸೀಲಿಂಗ್‌ವರೆಗೆ ನಿರ್ಮಿಸಲಾದ ಹ್ಯಾಂಡಲ್‌ಲೆಸ್ ಕ್ಯಾಬಿನೆಟ್, ಕನಿಷ್ಠ ವಿನ್ಯಾಸವು ಪ್ರೀಮಿಯಂ ಲುಕ್ ಕೊಡುತ್ತೆ.
Image credits: pinterest
Kannada
ಗ್ರೀನ್ ಮ್ಯಾಟ್ ಫಿನಿಶ್ ಕಿಚನ್ ಕ್ಯಾಬಿನೆಟ್
ಗ್ರೀನ್ ಮ್ಯಾಟ್ ಫಿನಿಶ್ ಕಿಚನ್ ಕ್ಯಾಬಿನೆಟ್, ಮರದ ಓಪನ್ ಶೆಲ್ಫ್‌ಗಳೊಂದಿಗೆ ಸಾಫ್ಟ್ ಮತ್ತು ಸೊಗಸಾದ ಲುಕ್ ಕೊಡುತ್ತೆ. ತಿಳಿ ಬಣ್ಣದ ಪ್ಯಾಲೆಟ್, ಕನಿಷ್ಠ ವಿನ್ಯಾಸದಿಂದಾಗಿ ಅಡುಗೆಮನೆಯು ಐಷಾರಾಮಿ ಅನುಭವ ನೀಡುತ್ತೆ.