Kannada

ಈ ಟಿಪ್ಸ್ ಅನುಸರಿಸಿ

ರುಚಿಕರ ಬೆಂಡೆಕಾಯಿಯನ್ನ ಮನೆಯಲ್ಲೇ ಬೆಳೆಯುವುದು ತುಂಬಾ ಸುಲಭ. ಮತ್ಯಾಕೆ ತಡ, ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲಿರುವ ಸಣ್ಣ ಜಾಗದಲ್ಲಿ ತಾಜಾ ಬೆಂಡೆಕಾಯಿಯನ್ನು ಬೆಳೆಯಲು ಈ ಟಿಪ್ಸ್ ಅನುಸರಿಸಿ.

Kannada

ಯಾವಾಗ ಬಿತ್ತನೆ ಮಾಡಬೇಕು?

ಬೆಂಡೆಕಾಯಿ ಬೆಳೆಯಲು ಬಿಸಿಲು ಮತ್ತು ಬೆಚ್ಚಗಿನ ವಾತಾವರಣ ಬೇಕು. ಫೆಬ್ರವರಿಯಿಂದ ಮಾರ್ಚ್ ತಿಂಗಳೊಳಗೆ ಬಿತ್ತನೆ ಮಾಡಬಹುದು. ಜುಲೈ ಅಥವಾ ಆಗಸ್ಟ್ ತಿಂಗಳು ಸಹ ಉತ್ತಮ.

Image credits: Getty
Kannada

ಗಮನಿಸಿ

ಅತಿಯಾದ ಚಳಿಯಲ್ಲಿ ಇದರ ಬೀಜಗಳು ಮೊಳಕೆಯೊಡೆಯುವುದು ಕಷ್ಟ.

Image credits: Getty
Kannada

ಪಾಟ್ ಮತ್ತು ಮಣ್ಣಿನ ಆಯ್ಕೆ

ಕನಿಷ್ಠ 12 ಇಂಚು ಆಳ (ಲಾಂಗ್ ಸ್ಕೇಲ್ ಅಳತೆ) ಅಗಲವಿರುವ ಪಾಟ್ ಅಥವಾ 'ಗ್ರೋ ಬ್ಯಾಗ್' ಬಳಸಿ. ಪಾಟ್ ಅಡಿ ರಂಧ್ರವಿರಲಿ. ಮಣ್ಣಿನ ಜೊತೆಗೆ ಸ್ವಲ್ಪ ಸಗಣಿ ಗೊಬ್ಬರ ಅಥವಾ ವರ್ಮಿ ಕಾಂಪೋಸ್ಟ್ ಬೆರೆಸಿ. ಮಣ್ಣು ಫಲವತ್ತಾಗಿರಲಿ.

Image credits: Getty
Kannada

ಬೀಜ ಬಿತ್ತುವ ವಿಧಾನ

ಮಣ್ಣಿನಲ್ಲಿ ಸುಮಾರು 1 ರಿಂದ 1.5 ಇಂಚು ಆಳದಲ್ಲಿ ಬಿತ್ತಿ. ಎರಡು ಗಿಡಗಳ ನಡುವೆ ಕನಿಷ್ಠ 6 ರಿಂದ 8 ಇಂಚು ಅಂತರವಿರಲಿ. ಬಿತ್ತಿದ ನಂತರ ಲಘುವಾಗಿ ನೀರು ಚಿಮುಕಿಸಿ. 5 ರಿಂದ 8 ದಿನದಲ್ಲಿ ಮೊಳಕೆ ಬರಲು ಆರಂಭವಾಗುತ್ತದೆ.

Image credits: Getty
Kannada

ಗಿಡದ ಆರೈಕೆ

ಗಿಡಕ್ಕೆ ಕನಿಷ್ಠ 5 ರಿಂದ 8 ಗಂಟೆಗಳ ಕಾಲ ನೇರ ಬಿಸಿಲು ಬೇಕು. ಮಣ್ಣಿನಲ್ಲಿ ತೇವಾಂಶವಿರಲಿ, ಅತಿಯಾಗಿ ನೀರು ಹಾಕಿ ನಿಲ್ಲಿಸಬೇಡಿ. ಗಿಡಕ್ಕೆ ಕೀಟಬಾಧೆ ಕಾಣಿಸಿಕೊಂಡರೆ 'ಬೇವಿನ ಎಣ್ಣೆ'ಯನ್ನು ನೀರಿಗೆ ಬೆರೆಸಿ ಸಿಂಪಡಿಸಿ.

Image credits: Getty
Kannada

ಕಟಾವು

40-50 ದಿನದಲ್ಲಿ ಕಾಯಿ ಬಿಡಲು ಶುರುವಾಗುತ್ತೆ. ಬೆಂಡೆಕಾಯಿ 3 ರಿಂದ 4 ಇಂಚು ಉದ್ದ ಬೆಳೆದಾಗ ತಕ್ಷಣ ಕಿತ್ತುಕೊಳ್ಳಿ. ಸರಿಯಾದ ಸಮಯಕ್ಕೆ ಕಾಯಿ ಕತ್ತರಿಸುವುದರಿಂದ ಗಿಡದಲ್ಲಿ ಮತ್ತೆ ಹೊಸ ಕಾಯಿಗಳು ಬೇಗನೆ ಬಿಡುತ್ತವೆ. 

Image credits: pixabay
Kannada

ಪದೇ ಪದೇ ಬೇಡ

ನೀವು ಆರಂಭದಲ್ಲಿ ಮಣ್ಣಿಗೆ ಸರಿಯಾಗಿ ಗೊಬ್ಬರ ಹಾಕಿದ್ದರೆ, ಪದೇ ಪದೇ ಗೊಬ್ಬರ ಹಾಕುವ ಅಗತ್ಯವಿರುವುದಿಲ್ಲ. ಕೇವಲ ಬಿಸಿಲು ಮತ್ತು ನೀರಿನ ಬಗ್ಗೆ ಗಮನ ಹರಿಸಿದರೆ ಸಾಕು!

Image credits: Getty

Hair Clips: ಬ್ರೈಡಲ್ ಲುಕ್‌ನಿಂದ ಬೀಚ್ ಲುಕ್‌ವರೆಗೆ, ಬಳಸಿ ಈ ಫ್ಲವರ್ ಹೇರ್ ಕ್ಲಿಪ್ಸ್

ಮಾಡರ್ನ್ ಶಾರ್ಟ್ ಮಾಂಗಲ್ಯದ ಡಿಸೈನ್‌ಗಳು; ಪ್ರತಿದಿನ ಧರಿಸಲು ಲೇಟೆಸ್ಟ್ ಡಿಸೈನ್ಸ್!

ಅರ್ಧ ಮೀ. ಬಟ್ಟೆಯಲ್ಲಿ ಸ್ಟೈಲಿಶ್ ಕ್ರಾಪ್ ಟಾಪ್ ರೆಡಿ: ಕಾಲೇಜಿನಲ್ಲಿ ನೀವೇ ಕ್ವೀನ್

ಕಿವಿಗೆ ಕೊಲ್ಲಾಪುರಿ ಸಾಜ್ ಟಚ್: ಇಲ್ಲಿದೆ 7 ಲೇಟೆಸ್ಟ್ ಗೋಲ್ಡ್ ಇಯರಿಂಗ್ಸ್ ಡಿಸೈನ್