ಗಿಡಗಳು ಹಸಿರಾಗಿರಬೇಕೆಂದರೆ ಅವುಗಳಿಗೆ ಸರಿಯಾದ ಆರೈಕೆ ಅಗತ್ಯ. ಕಾಲಕಾಲಕ್ಕೆ ನೀರು ಮತ್ತು ಗೊಬ್ಬರ ನೀಡದಿದ್ದರೆ ಗಿಡಗಳು ಬಾಡಿಹೋಗುತ್ತವೆ. ಹಾಗಾದ್ರೆ ಮನೆಯಲ್ಲಿರುವ ಪದಾರ್ಥದಿಂದಲೇ ಉತ್ತಮ ಗೊಬ್ಬರ ತಯಾರಿಸುವುದು ಹೇಗೆ?
life Jul 07 2026
Author: Ashwini HR Image Credits:AI Image
Kannada
ತರಕಾರಿ ಸಿಪ್ಪೆಗಳು
ಆಲೂಗಡ್ಡೆ, ಈರುಳ್ಳಿ, ಸೌತೆಕಾಯಿ ಮತ್ತು ಕ್ಯಾರೆಟ್‌ನಂತಹ ತರಕಾರಿ ಸಿಪ್ಪೆಗಳನ್ನು ಎಸೆಯಬೇಡಿ. ಇವುಗಳನ್ನು ಮಣ್ಣಿನಲ್ಲಿ ಬೆರೆಸಿದರೆ, ಅವು ಕೊಳೆತು ಗಿಡಗಳಿಗೆ ಅಗತ್ಯವಾದ ನೈಸರ್ಗಿಕ ಪೋಷಕಾಂಶಗಳನ್ನು ನೀಡುತ್ತವೆ.
Image credits: chatgpt AI
Kannada
ಚಹಾ ಪುಡಿ (Used Tea Powder)
ಗಿಡಗಳು ಸದಾ ಹಸಿರಾಗಿರಲು ಬಳಸಿ ಉಳಿದ ಚಹಾ ಪುಡಿ ಅಥವಾ ಚಹಾ ಎಲೆಗಳನ್ನು ಬಳಸಬಹುದು. ಇದರಲ್ಲಿ ಸಾರಜನಕ ಅಂಶ ಹೆಚ್ಚಿರುತ್ತದೆ, ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಉತ್ತಮ ಗೊಬ್ಬರವಾಗಿ ಕೆಲಸ ಮಾಡುತ್ತದೆ.
Image credits: Social Media
Kannada
ಮೊಟ್ಟೆಯ ಸಿಪ್ಪೆ (Eggshells)
ಮೊಟ್ಟೆಯ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಗಿಡಗಳ ಬೇರುಗಳನ್ನು ಸದೃಢಗೊಳಿಸುತ್ತದೆ. ಮೊಟ್ಟೆಯ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ, ಪುಡಿ ಮಾಡಿ ಗಿಡದ ಮಣ್ಣಿನ ಮೇಲೆ ಸಿಂಪಡಿಸಿ.
Image credits: Pinterest
Kannada
ಅಕ್ಕಿ ತೊಳೆದ ನೀರು
ಅಕ್ಕಿಯನ್ನು ತೊಳೆದ ನಂತರ ಸಿಗುವ ಆ ನೀರನ್ನು ಚೆಲ್ಲುವ ಬದಲು ಗಿಡಗಳಿಗೆ ಹಾಕಿ. ಇದರಲ್ಲಿರುವ ಮಿನರಲ್ಸ್ ಮತ್ತು ಪಿಷ್ಟ ಗಿಡಗಳಿಗೆ ಶಕ್ತಿ ನೀಡಿ ಆರೋಗ್ಯವಾಗಿ ಬೆಳೆಯಲು ಸಹಾಯ ಮಾಡುತ್ತವೆ.
Image credits: Getty
Kannada
ಸದಾ ಹಸಿರಾಗಿಡಿ
ಈ ಸರಳ ಮತ್ತು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಮಾರುಕಟ್ಟೆಯ ರಾಸಾಯನಿಕ ಗೊಬ್ಬರಗಳಿಲ್ಲದೆ ನಿಮ್ಮ ಮನೆಯ ಗಾರ್ಡನ್ ಅನ್ನು ಸುಂದರವಾಗಿ ಮತ್ತು ಹಸಿರಾಗಿ ಇಡಬಹುದು!