ಮಣ್ಣು, ಕುಂಡ ಎರಡೂ ಬೇಡ; ವೇಸ್ಟ್ ಪ್ಲಾಸ್ಟಿಕ್ ಬಾಟಲಿಯಲ್ಲೇ ಕೊತ್ತಂಬರಿ ಬೆಳೆಸಿ!
ಮಣ್ಣು ಮತ್ತು ಕುಂಡದ ಅಗತ್ಯವಿಲ್ಲದೆ ಕೇವಲ ಪ್ಲಾಸ್ಟಿಕ್ ಬಾಟಲಿಯಲ್ಲಿ ತಾಜಾ ಕೊತ್ತಂಬರಿ ಬೆಳೆಯುವ ಸುಲಭ ವಿಧಾನ ಇಲ್ಲಿದೆ.
life Oct 04 2026
Author: Govindaraj S Image Credits:pixabay
Kannada
ಮನೆಯಲ್ಲೇ ಕೊತ್ತಂಬರಿ ಬೆಳೆಯಿರಿ
ಮಣ್ಣು ಮತ್ತು ಕುಂಡ ಇಲ್ಲದೆ, ಕೇವಲ ಒಂದು ವೇಸ್ಟ್ ಪ್ಲಾಸ್ಟಿಕ್ ಬಾಟಲಿಯನ್ನು ಬಳಸಿಕೊಂಡು ಮನೆಯಲ್ಲೇ ಸುಲಭವಾಗಿ ಕೊತ್ತಂಬರಿ ಸೊಪ್ಪು ಬೆಳೆಯಬಹುದು. ಅದು ಹೇಗೆ ಅಂತ ಈಗ ನೋಡೋಣ.
Image credits: pixabay
Kannada
ಪ್ಲಾಸ್ಟಿಕ್ ಬಾಟಲಿ ಆಯ್ಕೆ
ಮೊದಲಿಗೆ ಮನೆಯಲ್ಲಿರುವ ಒಂದು ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಳ್ಳಿ. ಬಳಿಕ ಅದನ್ನು ನೀರಿನಿಂದ ಶುದ್ಧವಾಗಿ ತೊಳೆಯಿರಿ.
Image credits: Getty
Kannada
ಬೇಕಾಗುವ ಸಾಮಗ್ರಿಗಳು
ಒಂದು ಪ್ಲಾಸ್ಟಿಕ್ ಬಾಟಲಿ, ಒಂದು ಕಪ್ ಪೀಟ್ ಮಾಸ್ (ಫೈಬರ್), 2 ಚಮಚ ರಸಗೊಬ್ಬರ, 1 ಚಮಚ ಕೊತ್ತಂಬರಿ ಬೀಜಗಳು ಮತ್ತು ಸ್ವಲ್ಪ ಸಣ್ಣ ಕಲ್ಲುಗಳು (ಗುಂಡುಕಲ್ಲು) ಬೇಕಾಗುತ್ತದೆ.
Image credits: Instagram
Kannada
ನೆನೆಸಿದ ಕೊತ್ತಂಬರಿ ಬೀಜ
ಮೊದಲಿಗೆ ಕೊತ್ತಂಬರಿ ಬೀಜಗಳನ್ನು ಒಂದು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಬೇಕು. ನಂತರ ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಂಡು ಅದರ ಮೇಲ್ಭಾಗವನ್ನು (ಮುಚ್ಚಳದ ಕಡೆ) ಕತ್ತರಿಸಬೇಕು.
Image credits: Instagram
Kannada
ಕಲ್ಲುಗಳನ್ನು ತುಂಬಿಸಿ
ಈಗ ಕತ್ತರಿಸಿದ ಪ್ಲಾಸ್ಟಿಕ್ ಬಾಟಲಿ ಒಂದು ಕಂಟೇನರ್ ರೀತಿ ಕಾಣುತ್ತದೆ. ಈ ಬಾಟಲಿಯ ಅರ್ಧದಷ್ಟು ಭಾಗಕ್ಕೆ ಸಣ್ಣ ಕಲ್ಲುಗಳನ್ನು ತುಂಬಿಸಬೇಕು.
Image credits: Getty
Kannada
ರಸಗೊಬ್ಬರ ಮತ್ತು ಬೀಜ
ಈಗ ಇದೇ ಬಾಟಲಿಗೆ ರಸಗೊಬ್ಬರ ಮತ್ತು ನೆನೆಸಿಟ್ಟ ಕೊತ್ತಂಬರಿ ಬೀಜಗಳನ್ನು ಹಾಕಬೇಕು. ಒಂದು ಲೋಟ ನೀರು ಹಾಕಿ, ಈ ಬಾಟಲಿಯನ್ನು ಬಿಸಿಲು ಬೀಳುವ ಜಾಗದಲ್ಲಿ ನೇತುಹಾಕಬೇಕು.
Image credits: Getty
Kannada
20 ದಿನಗಳಲ್ಲಿ ತಾಜಾ ಕೊತ್ತಂಬರಿ
ಪ್ರತಿದಿನ ಸ್ವಲ್ಪ ಸ್ವಲ್ಪವೇ ನೀರನ್ನು ಸ್ಪ್ರೇ ಮಾಡುತ್ತಾ ಬಂದರೆ, ಕೇವಲ 20 ದಿನಗಳಲ್ಲಿ ನಿಮಗೆ ಮನೆಯಲ್ಲೇ ಬೆಳೆದ ತಾಜಾ ಕೊತ್ತಂಬರಿ ಸೊಪ್ಪು ಸಿಗುತ್ತದೆ.