ಬೆಳ್ಳುಳ್ಳಿಯನ್ನು ನಮ್ಮ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದು. ಆದರೆ, ಅದಕ್ಕೂ ಮುನ್ನ ನೀವು ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳಬೇಕು.
ಬೀಜಕ್ಕಾಗಿ ದೊಡ್ಡ ಗಾತ್ರದ ಬೆಳ್ಳುಳ್ಳಿ ಎಸಳುಗಳನ್ನು ಬಳಸಿ. ಇದರಿಂದ ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ. ಎಸಳುಗಳನ್ನು ಬಿಡಿಸುವಾಗ ಅದರ ಮೇಲಿನ ಸಿಪ್ಪೆ ತೆಗೆಯದಂತೆ ಎಚ್ಚರವಹಿಸಿ.
ಗ್ರೋ ಬ್ಯಾಗ್ ಅಥವಾ ಕುಂಡದಲ್ಲಿ ಬೆಳ್ಳುಳ್ಳಿ ನೆಡುವಾಗ, ಹೆಚ್ಚುವರಿ ನೀರು ಸರಾಗವಾಗಿ ಹೊರಹೋಗಲು ಸಾಕಷ್ಟು ರಂಧ್ರಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮೇಲ್ಮಣ್ಣು, ಕೋಕೋ ಪೀಟ್ (ತೆಂಗಿನ ನಾರು) ಮತ್ತು ಒಣಗಿದ ಸಗಣಿ ಪುಡಿ ಅಥವಾ ಕಾಂಪೋಸ್ಟ್ ಅನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಮಣ್ಣಿನ ಮಿಶ್ರಣ ತಯಾರಿಸಿ.
ಬೆಳ್ಳುಳ್ಳಿ ಎಸಳಿನ ಚೂಪಾದ ಭಾಗ ಮೇಲ್ಮುಖವಾಗಿ ಮತ್ತು ಬೇರು ಬರುವ ಚಪ್ಪಟೆ ಭಾಗ ಕೆಳಮುಖವಾಗಿರುವಂತೆ ನೆಡಿ. ಎಸಳುಗಳನ್ನು 1-2 ಇಂಚು ಆಳದಲ್ಲಿ ಮತ್ತು 4-5 ಇಂಚು ಅಂತರದಲ್ಲಿ ನೆಡಬೇಕು.
ಪ್ರತಿದಿನ ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಗ್ರೋ ಬ್ಯಾಗ್ ಅಥವಾ ಕುಂಡವನ್ನು ಇಡಿ.
ಮಣ್ಣಿನಲ್ಲಿ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ. ಆದರೆ, ನೀರು ನಿಂತು ಬೆಳ್ಳುಳ್ಳಿ ಕೊಳೆಯದಂತೆ ಎಚ್ಚರವಹಿಸುವುದು ಬಹಳ ಮುಖ್ಯ.
ಗಿಡ ಬೆಳೆಯುತ್ತಿರುವಾಗ ಪ್ರತಿ 15 ದಿನಗಳಿಗೊಮ್ಮೆ ಕಡಲೆಕಾಯಿ ಹಿಂಡಿ ನೆನೆಸಿದ ನೀರು ಅಥವಾ ಸಗಣಿ ನೀರನ್ನು ಗೊಬ್ಬರವಾಗಿ ಹಾಕಿ.
ಬೆಳ್ಳುಳ್ಳಿ ಕೀಳುವ ಎರಡು ವಾರಗಳ ಮೊದಲು ನೀರು ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಇದು ಬೆಳ್ಳುಳ್ಳಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
4-5 ತಿಂಗಳ ನಂತರ ಗಿಡದ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭಿಸಿದಾಗ, ಬೆಳ್ಳುಳ್ಳಿಯನ್ನು ಎಚ್ಚರಿಕೆಯಿಂದ ಕೀಳಬಹುದು.
ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ Gold ನೆಕ್ಲೇಸ್ ಡಿಸೈನ್ಸ್
Zircon Nose Rings: ಯುವತಿಯರ ಲುಕ್‌ಗೆ ಹೊಸ ಕಳೆ! ಟ್ರೆಂಡ್‌ನಲ್ಲಿದೆ ಈ 6 ಜಿರ್ಕಾನ್ ಮೂಗುತಿ ಡಿಸೈನ್ಸ್
ಮಾನಸಿಕ ಆರೋಗ್ಯ ಸುಧಾರಿಸಲು ಈ ಆಹಾರಗಳನ್ನು ಸೇವಿಸಿ
Chicken During Fever: ಜ್ವರ ಬಂದಾಗ ಚಿಕನ್ ತಿನ್ನಬಹುದಾ? ಅಪ್ಪಿ-ತಪ್ಪಿ ತಿಂದ್ರೆ ಏನಾಗುತ್ತೆ?