ಟೊಮೆಟೊ ಕೇವಲ ಅಡುಗೆಯ ರುಚಿ ಹೆಚ್ಚಿಸುವುದಲ್ಲದೆ, ನಮ್ಮ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.
ಟೊಮೆಟೊದಲ್ಲಿರುವ ಲೈಕೋಪೀನ್ ಮತ್ತು ಪೊಟ್ಯಾಸಿಯಮ್ ಅಂಶಗಳು ದೇಹದಲ್ಲಿನ ಕೆಟ್ಟ (LDL) ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ. ರಕ್ತನಾಳಗಳಲ್ಲಿ ಪ್ಲಾಕ್ ಶೇಖರಣೆಯಾಗುವುದನ್ನು ತಡೆದು, ಸೋಡಿಯಂ ಮಟ್ಟ ಸಮತೋಲನದಲ್ಲಿಡುತ್ತದೆ.
ಇದರಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಫೋಲೇಟ್ ಅಂಶಗಳು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ. ಜೊತೆಗೆ ರಕ್ತನಾಳಗಳನ್ನು ರಕ್ಷಿಸಿ, ದೇಹದಲ್ಲಿ ಆರೋಗ್ಯಕರ ರಕ್ತ ಪರಿಚಲನೆ ಆಗುವಂತೆ ನೋಡಿಕೊಳ್ಳುತ್ತವೆ.
ಟೊಮೆಟೊದಲ್ಲಿರುವ ಲೈಕೋಪೀನ್ ಪ್ರಬಲವಾದ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಇದು ಪ್ರಾಸ್ಟೇಟ್, ಶ್ವಾಸಕೋಶ ಮತ್ತು ಹೊಟ್ಟೆಯ ಕ್ಯಾನ್ಸರ್ ಬರುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮೆಟೊದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ತ್ವಚೆಗೆ ಬಿಗಿತ ಹಾಗೂ ಕಾಂತಿಯನ್ನು ನೀಡುತ್ತದೆ.
ಇದರಲ್ಲಿರುವ ಲ್ಯೂಟಿನ್, ಜಿಯಾಕ್ಸಾಂಥಿನ್ ಮತ್ತು ವಿಟಮಿನ್ ಎ ಅಂಶಗಳು ಕಣ್ಣುಗಳನ್ನು ಯುವಿ (UV) ಕಿರಣಗಳಿಂದ ರಕ್ಷಿಸುತ್ತವೆ. ಅಲ್ಲದೆ ವಯಸ್ಸಾದಂತೆ ಬರುವ ಮ್ಯಾಕ್ಯುಲರ್ ಡಿಜೆನರೇಶನ್ ಸಮಸ್ಯೆಯನ್ನು ತಡೆಯುತ್ತವೆ.
ಟೊಮೆಟೊದಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಅಂಶಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತವೆ. ಇದು ಮೂಳೆಗಳನ್ನು ಬಲವಾಗಿರಿಸುವುದರ ಜೊತೆಗೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಟೊಮೆಟೊದಲ್ಲಿ ಕರಗುವ ಮತ್ತು ಕರಗದ ನಾರಿನಂಶ (ಫೈಬರ್) ಹೇರಳವಾಗಿದೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಿ, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಲು ಅತ್ಯಂತ ಸಹಕಾರಿಯಾಗಿದೆ.