Kannada

ತೂಕ ಇಳಿಸಲು ಡಯಟ್‌ನಲ್ಲಿದ್ದೀರಾ? ಹಾಗಿದ್ರೆ ಈ ಆಹಾರಗಳನ್ನು ಸೇವಿಸಿ

ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್ ಮತ್ತು ಫೈಬರ್ ಭರಿತ ಉಪಹಾರವು ಹಸಿವನ್ನು ಕಡಿಮೆ ಮಾಡಲು ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

Kannada

ತೂಕ ಇಳಿಸಲು ಡಯಟ್‌ನಲ್ಲಿದ್ದೀರಾ?

ದೇಹದ ತೂಕವನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Image credits: Getty
Kannada

ಕಾಳುಗಳು

ಹೆಸರುಕಾಳು ಮತ್ತು ಇತರ ಕಾಳುಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿದೆ. ಇದು ದೈನಂದಿನ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. 

Image credits: Pinterest
Kannada

ಬಿಳಿ ಕಡಲೆ

ಹಸಿವನ್ನು ನಿಯಂತ್ರಿಸಲು ಮತ್ತು ಊಟದ ನಂತರದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಿಳಿ ಕಡಲೆ ಸಹಾಯ ಮಾಡುತ್ತದೆ. ಇದನ್ನು ಸಲಾಡ್ ರೂಪದಲ್ಲಿ ಅಥವಾ ಹಾಗೆಯೇ ತಿನ್ನಬಹುದು.

Image credits: Meta AI
Kannada

ಮೊಟ್ಟೆ

ಮೊಟ್ಟೆ ತಿನ್ನುವುದು ಅತಿಯಾದ ಹಸಿವನ್ನು ತಡೆಯುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

Image credits: Getty
Kannada

ಸಿರಿಧಾನ್ಯಗಳು

ಸಿರಿಧಾನ್ಯಗಳಲ್ಲಿ ಫೈಬರ್ ಅಧಿಕ.ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ.

Image credits: Getty
Kannada

ಮೆಂತ್ಯ

ಮೆಂತ್ಯದಲ್ಲಿರುವ ಫೈಬರ್ ಅತಿಯಾದ ಹಸಿವನ್ನು ತಡೆಯುತ್ತದೆ. ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ. ಮೆಂತ್ಯ ಸೊಪ್ಪನ್ನು ಸೇರಿಸುವುದರಿಂದ ಹಸಿವನ್ನು ನಿಯಂತ್ರಿಸುತ್ತೆ.

Image credits: Getty
Kannada

ಪೇರಳೆ ಹಣ್ಣು

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶದಿಂದಾಗಿ ಪೇರಳೆ ಹಣ್ಣು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ತುಂಬಿದ ಅನುಭವ ನೀಡಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

Image credits: Getty

ದಿನಕ್ಕೊಂದು ಅವಕಾಡೊ ತಿನ್ನಿ ನಿಮ್ಮಲ್ಲಿ ಈ ಬದಲಾವಣೆಗಳಾಗುತ್ತವೆ!

ಪ್ರತಿದಿನ ಬೆಳಗ್ಗೆ ಅರಿಶಿನ ನೀರು ಕುಡಿದರೆ ಕಾಮಲೆ ಬರುತ್ತಾ?

ಮನೆಯಲ್ಲಿ ರೂಮ್ ಹೀಟರ್ ಬಳಸುತ್ತೀರಾ? ಈ 7 ವಿಷಯ ತಿಳಿದುಕೊಳ್ಳಿ, ನಿರ್ಲಕ್ಷ್ಯ ಬೇಡ

ಮನೆಯೊಳಗೆ ಸೊಳ್ಳೆ ಬರುವುದನ್ನು ತಡೆಯಲು 7 ಸುವಾಸನೆಗಳು ಸಾಕು