ಬೇಸಿಗೆ ಅಂದ್ರೆನೇ ಮಾವಿನ ಹಣ್ಣಿನ ಸೀಸನ್. ಎಲ್ಲೇ ಕಂಡ್ರೂ ತಕ್ಷಣ ಕೊಂಡುಕೊಳ್ತೀವಿ. ಎಷ್ಟೇ ದುಡ್ಡಾದ್ರೂ ಕೊಟ್ಟು ತರ್ತೀವಿ. ಇದನ್ನೇ ಬಂಡವಾಳ ಮಾಡಿಕೊಳ್ಳೋ ವ್ಯಾಪಾರಿಗಳು ಮೋಸ ಮಾಡ್ತಾರೆ, ಹುಷಾರಾಗಿರಿ.
food Mar 24 2026
Author: Sushma Hegde Image Credits:Getty
Kannada
ಮನೆಯಲ್ಲೇ ಮಾಡಿ ಈ 5 ಪರೀಕ್ಷೆಗಳನ್ನು
ಮಾರುಕಟ್ಟೆಯಲ್ಲಿ ಸಿಗೋ ಮಾವಿನ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿವೆಯೇ ಅಥವಾ ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಕೆಮಿಕಲ್ ಬಳಸಿ ಹಣ್ಣು ಮಾಡಿದ್ದಾರಾ ಎಂದು ತಿಳಿಯಬೇಕು. ಆರೋಗ್ಯಕ್ಕಾಗಿ ಮನೆಯಲ್ಲೇ ಈ ಪರೀಕ್ಷೆ ಮಾಡಿ.
Image credits: Getty
Kannada
ನೀರಿನಲ್ಲಿ ಮುಳುಗಿಸಿ ಪರೀಕ್ಷಿಸಿ
ಒಂದು ಬಕೆಟ್ ತುಂಬಾ ನೀರು ತೆಗೆದುಕೊಂಡು ಅದರಲ್ಲಿ ಮಾವಿನ ಹಣ್ಣುಗಳನ್ನು ಹಾಕಿ. ಹಣ್ಣುಗಳು ನೀರಿನ ತಳಕ್ಕೆ ಹೋದರೆ, ಅವು ನೈಸರ್ಗಿಕವಾಗಿ ಹಣ್ಣಾಗಿವೆ ಎಂದರ್ಥ. ನೀರಿನ ಮೇಲೆ ತೇಲಿದರೆ ಕೆಮಿಕಲ್ ಬಳಸಿ ಹಣ್ಣು ಮಾಡಲಾಗಿದೆ.
Image credits: Getty
Kannada
ಒತ್ತಿ ನೋಡಿ ಪರೀಕ್ಷಿಸಿ
ಹಣ್ಣನ್ನು ಒತ್ತಿದಾಗ ಅದು ಮೆತ್ತಗಿರಬೇಕು. ಆದರೆ ಕೆಲವು ಕಡೆ ಗಟ್ಟಿಯಾಗಿದ್ದು, ಕೆಲವು ಕಡೆ ಮೆತ್ತಗಿದ್ದರೆ ಅದು ಸರಿಯಾಗಿ ಹಣ್ಣಾಗಿಲ್ಲ ಎಂದರ್ಥ. ರಾಸಾಯನಿಕ ಬಳಸಿ ಹಣ್ಣು ಮಾಡಿದಾಗ ಹೀಗಾಗುತ್ತದೆ.
Image credits: Getty
Kannada
ಬಣ್ಣ ನೋಡಿಯೂ ಕಂಡುಹಿಡಿಯಬಹುದು
ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣು ಒಂದೇ ಬಣ್ಣದಲ್ಲಿ ಇರುವುದಿಲ್ಲ. ಅಲ್ಲಲ್ಲಿ ಹಳದಿ ಮತ್ತು ಹಸಿರು ಬಣ್ಣಗಳು ಮಿಶ್ರಣಗೊಂಡಿರುತ್ತವೆ. ಹಣ್ಣು ಪೂರ್ತಿಯಾಗಿ ಒಂದೇ ಸಮನಾದ ಹಳದಿ ಬಣ್ಣದಲ್ಲಿದ್ದರೆ, ಅನುಮಾನ ಪಡಬೇಕು.
Image credits: Getty
Kannada
ವಾಸನೆ ನೋಡಿ ತಿಳಿಯಿರಿ
ಮಾವಿನ ಹಣ್ಣಿನ ವಾಸನೆ ಅದರ ಗುಣಮಟ್ಟವನ್ನು ತಿಳಿಸುತ್ತದೆ. ತೊಟ್ಟಿನ ಬಳಿ ಮೂಸಿ ನೋಡಿದರೆ ಸಿಹಿ ಮತ್ತು ಸುವಾಸನೆ ಬರುತ್ತದೆ. ಕೆಮಿಕಲ್ ಬಳಸಿ ಹಣ್ಣು ಮಾಡಿದ್ದರೆ ವಾಸನೆ ಇರುವುದಿಲ್ಲ. ಕೆಟ್ಟ ರಾಸಾಯನಿಕದ ವಾಸನೆ ಬರಬಹುದು.
Image credits: Getty
Kannada
ಕತ್ತರಿಸಿ ನೋಡಿ
ಹಣ್ಣನ್ನು ಕತ್ತರಿಸಿ ಒಳಗಿನ ಬಣ್ಣವನ್ನು ನೋಡಿ ತಿರುಳು ಕಡು ಹಳದಿ -ಕೇಸರಿ ಇದ್ದರೆ ರಸಭರಿತವಾಗಿರುತ್ತದೆ. ತಿರುಳು ಬಿಳಿ ಅಥವಾ ತಿಳಿ ಹಳದಿ ಬಣ್ಣದಲ್ಲಿದ್ದರೆ, ಅದು ರಾಸಾಯನಿಕಗಳಿಂದ ಹಣ್ಣಾಗಿದೆ ಎಂದರ್ಥ.
Image credits: Getty
Kannada
ಹೀಗೆ ತಿಂದರೆ ಸುರಕ್ಷಿತ
ಹಣ್ಣುಗಳನ್ನು ತಿನ್ನುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ತಿನ್ನುವುದು ಸುರಕ್ಷಿತ.