ಮನೆಯಲ್ಲಿ ಇಲಿಗಳ ಕಾಟ ವಿಪರೀತವಾಗಿದೆಯೇ? ಹಾಗಿದ್ರೆ ಈ ಐದು ಸುಲಭ ಉಪಾಯಗಳನ್ನು ಪಾಲಿಸಿ ನೋಡಿ. ಇವು ಇಲಿಗಳನ್ನು ಓಡಿಸಲು ಸಹಕಾರಿ.
ಮೊದಲನೆಯದಾಗಿ, ನಿಮ್ಮ ಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮನೆಯಲ್ಲಿನ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಿ.
ಮನೆಯಲ್ಲಿರುವ ಅನಗತ್ಯ ಪೆಟ್ಟಿಗೆಗಳು ಮತ್ತು ಬಾಟಲಿಗಳನ್ನು ಮೊದಲು ಹೊರಗೆ ಹಾಕಿ. ಸಾಮಾನ್ಯವಾಗಿ ನಮ್ಮ ಗಮನ ಹೋಗದ ಜಾಗಗಳಲ್ಲೇ ಇಲಿಗಳು ಗೂಡು ಕಟ್ಟುತ್ತವೆ.
ಹಳೆಯ ಫರ್ನಿಚರ್, ಪುಸ್ತಕಗಳು ಮತ್ತು ಕಸವನ್ನು ಮನೆ ಹಾಗೂ ಸುತ್ತಮುತ್ತಲು ಬಿದ್ದಿರದಂತೆ ನೋಡಿಕೊಳ್ಳಿ. ಇವು ಇಲಿಗಳಿಗೆ ಅಡಗುತಾಣವಾಗುತ್ತವೆ.
ಅಡುಗೆ ಮನೆಯಲ್ಲಿ ತಿಂದು ಉಳಿದ ಆಹಾರವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಅದನ್ನು ಸರಿಯಾಗಿ ಮುಚ್ಚಳವಿರುವ ಡಬ್ಬದಲ್ಲಿ ಹಾಕಿ ಸುರಕ್ಷಿತವಾಗಿಡಿ.
ಹಳೆಯ ಪೇಪರ್‌ಗಳು ಮತ್ತು ಮ್ಯಾಗಝಿನ್‌ಗಳನ್ನು ಎಲ್ಲೆಂದರಲ್ಲಿ ಹರಡಿ ಹಾಕಬೇಡಿ. ಇವು ಇಲಿಗಳಿಗೆ ಅಡಗಿಕೊಳ್ಳಲು ಜಾಗ ಮಾಡಿಕೊಡುತ್ತವೆ.
ಬಳಕೆಗೆ ಬಾರದ ಹಳೆಯ ಗೃಹೋಪಯೋಗಿ ವಸ್ತುಗಳನ್ನು ಮನೆಯಲ್ಲಿ ರಾಶಿ ಹಾಕಬೇಡಿ. ಅವುಗಳನ್ನು ತಕ್ಷಣವೇ ಮನೆಯಿಂದ ಹೊರಹಾಕಿ.
Parenting Guide: ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪೋಷಕರಿಗೆ ಸದ್ಗುರುಗಳ ಸಲಹೆ
ಸಾಂಪ್ರದಾಯಿಕ ಶೈಲಿಯಲ್ಲಿ ಈ ರೀತಿ ರಾಗಿ ಅಂಬಲಿ ಮಾಡಿ, ಬಹಳ ರುಚಿಯಾಗಿರುತ್ತೆ
HD Gold Earrings: ಕೇವಲ 4 ಗ್ರಾಂನಲ್ಲಿ ಖರೀದಿಸಿ 6 ಲೇಟೆಸ್ಟ್ ಕಿವಿಯೋಲೆಗಳು!
ಬಿಸಾಡೋ ಎಗ್ ಟ್ರೇನಿಂದ ಮನೆಗೆ ಸ್ಟೈಲಿಶ್ ಲುಕ್: ಇಲ್ಲಿವೆ 7 ಅದ್ಭುತ ಐಡಿಯಾಗಳು!