Kannada

ಹೃದಯಾಘಾತ ತಡೆಯಲು ಸಹಕಾರಿ ಈ ಮೀನುಗಳು

ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್, ಪ್ರೋಟೀನ್, ವಿಟಮಿನ್ ಡಿ ಮತ್ತು ಹಲವು ಖನಿಜಾಂಶಗಳು ಸಮೃದ್ಧವಾಗಿವೆ. ಹೃದಯದ ಆರೋಗ್ಯದಿಂದ ಹಿಡಿದು ಮೆದುಳಿನ ಬೆಳವಣಿಗೆಯವರೆಗೆ ಮೀನಿನಿಂದ ಅನೇಕ ಪ್ರಯೋಜನಗಳಿವೆ.

Kannada

ಸಾಲ್ಮನ್ ಮೀನು (Salmon)

ಇದರಲ್ಲಿ EPA ಮತ್ತು DHA ನಂತಹ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಅಧಿಕವಾಗಿವೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯಾಘಾತವನ್ನು ತಡೆಯುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

Image credits: stockPhoto
Kannada

ಬಂಗಡೆ ಮೀನು (Mackerel)

ಇದರಲ್ಲಿ ಒಮೆಗಾ-3 ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಈ ಮೀನನ್ನು ನಿಯಮಿತವಾಗಿ ತಿಂದರೆ ಮೂಳೆಗಳು ಬಲಗೊಳ್ಳುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ನರಮಂಡಲವನ್ನು ರಕ್ಷಿಸುತ್ತದೆ.

Image credits: stockPhoto
Kannada

ಬೂತಾಯಿ ಮೀನು (Sardines)

ಒಮೆಗಾ-3, ಫಾಸ್ಪರಸ್, ಪೊಟ್ಯಾಶಿಯಂ, ಸೆಲೆನಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದಿಂದ ಸಮೃದ್ಧವಾಗಿದೆ. ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ತೆಗೆದುಹಾಕುತ್ತದೆ.

Image credits: stockPhoto
Kannada

ನೆತ್ತಿಲಿ ಮೀನು (Anchovies)

ಒಮೆಗಾ-3 ಮತ್ತು ಕ್ಯಾಲ್ಸಿಯಂ ಅಧಿಕವಾಗಿದೆ. ಇದರಲ್ಲಿರುವ ವಿಟಮಿನ್ ಬಿ3 (ನಿಯಾಸಿನ್) ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  

Image credits: stockPhoto
Kannada

ಟ್ಯೂನ ಮೀನು (Tuna)

ಒಮೆಗಾ-3 ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಮೀನನ್ನು ನಿಯಮಿತವಾಗಿ ತಿಂದರೆ ಪುರುಷರಲ್ಲಿ ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

Image credits: stockPhoto
Kannada

ಅಂಜಲ್ ಮತ್ತು ಕೆಂಪು ಮೀನು

ಇದರಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ ಮತ್ತು ವಿಟಮಿನ್ ಬಿ12 ಸಮೃದ್ಧವಾಗಿದೆ. ಈ ಮೀನುಗಳನ್ನು ನಿಯಮಿತವಾಗಿ ತಿನ್ನುವುದರಿಂದ ನರಮಂಡಲವು ಬಲಗೊಳ್ಳುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ.  

Image credits: stockPhoto
Kannada

ಮರಲ್ ಮತ್ತು ಬ್ರೇಲ್ ಮೀನು

ಮರಲ್ ಮತ್ತು ಬ್ರೇಲ್ ಮೀನುಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ. ವಿಟಮಿನ್ ಬಿ12 ಸಮೃದ್ಧವಾಗಿದೆ. ಇವು ಸ್ನಾಯುಗಳನ್ನು ಬಲಪಡಿಸುತ್ತವೆ ಮತ್ತು ನರಮಂಡಲವನ್ನು ಸದೃಢಗೊಳಿಸುತ್ತವೆ.

Image credits: stockPhoto

ಮೊಡವೆಗಳೇ ನಿಮ್ಮ ಚಿಂತೆಯೇ? ಹಾಗಿದ್ರೆ ಇಲ್ಲಿದೆ ನೋಡಿ 7 ಸಿಂಪಲ್ ಮನೆಮದ್ದುಗಳು

ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಏಲಕ್ಕಿ

ಮಲಗುವ ಮುನ್ನ ತಲೆಯ ಬಳಿ ಬೆಳ್ಳುಳ್ಳಿ ಇಡುವುದರ ಹಿಂದಿದೆ ಈ ರಹಸ್ಯ

30ರ ಬಳಿಕ ಮಹಿಳೆಯರು ಈ 10 ಆರೋಗ್ಯ ತಪಾಸಣೆ ಮಿಸ್ ಮಾಡ್ಲೇಬಾರ್ದು