ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಬಳಸಿ ಸುಂದರವಾಗಿ ಅಲಂಕಾರ ಮಾಡಬಹುದು.
life Oct 15 2026
Author: Govindaraj S Image Credits:INSTAGRAM
Kannada
ಶೂ ಬಾಕ್ಸ್ನಿಂದ ಸ್ಟೋರೇಜ್
ಮನೆಯಲ್ಲಿ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿದ್ದರೆ ಹಳೆಯ ಶೂ ಬಾಕ್ಸ್ ಬಳಸಿ. ಈ ಬಾಕ್ಸ್ಗೆ ನಿಮಗೆ ಇಷ್ಟವಾದ ಪ್ರಿಂಟೆಡ್ ಪೇಪರ್ ಅಂಟಿಸಿ, ಅದರಲ್ಲಿ ಪುಸ್ತಕಗಳನ್ನು ನೀಟಾಗಿ ಜೋಡಿಸಿಡಿ.
Image credits: INSTAGRAM
Kannada
ಟಿನ್ ಡಬ್ಬದಲ್ಲಿ ಕ್ಯಾಂಡಲ್
ಖಾಲಿ ಟಿನ್ ಡಬ್ಬಗಳಿಗೆ ಅಕ್ರಿಲಿಕ್ ಬಣ್ಣ ಬಳಿದು, ಅದರ ಮೇಲೆ ಹೂವಿನ ಡಿಸೈನ್ ಬಿಡಿಸಿ. ಇದರೊಳಗೆ ಕ್ಯಾಂಡಲ್ ಇಟ್ಟು ಮನೆಯ ಅಲಂಕಾರಕ್ಕೆ ಬಳಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ.
Image credits: INSTAGRAM
Kannada
ಹಳೆಯ ಡಬ್ಬದಿಂದ ಪೆನ್ ಸ್ಟ್ಯಾಂಡ್
ಖಾಲಿ ಡಬ್ಬಕ್ಕೆ ಸೆಣಬಿನ ದಾರವನ್ನು ಸುತ್ತಿ, ಅದರ ಮೇಲೆ ಬಿಳಿ ಲೇಸ್ ಹಚ್ಚಿ ಅಲಂಕರಿಸಿ. ಈ ರೀತಿ ತಯಾರಿಸಿದ ಪೆನ್ ಸ್ಟ್ಯಾಂಡ್ ಟೇಬಲ್ ಮೇಲೆ ಇಟ್ಟರೆ ಸಖತ್ ಆಗಿ ಕಾಣುತ್ತದೆ.
Image credits: INSTAGRAM
Kannada
ಟಿನ್ ಡಬ್ಬದಲ್ಲಿ ಕ್ಯಾಂಡಲ್
ಖಾಲಿ ಟಿನ್ ಡಬ್ಬಗಳಿಗೆ ಅಕ್ರಿಲಿಕ್ ಬಣ್ಣ ಬಳಿದು, ಅದರ ಮೇಲೆ ಹೂವಿನ ಡಿಸೈನ್ ಬಿಡಿಸಿ. ಇದರೊಳಗೆ ಕ್ಯಾಂಡಲ್ ಇಟ್ಟು ಮನೆಯ ಅಲಂಕಾರಕ್ಕೆ ಬಳಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ.
Image credits: INSTAGRAM
Kannada
ಪ್ಲಾಸ್ಟಿಕ್ ಡಬ್ಬದಿಂದ ಪ್ಲಾಂಟರ್
ಮನೆಯಲ್ಲಿ ಕೃತಕ ಗಿಡಗಳನ್ನು ಇಡಬೇಕಾದರೆ ಹಳೆಯ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ. ಡಬ್ಬಗಳಿಗೆ ಬಣ್ಣ ಬಳಿದು ಅಥವಾ ಎಂಬ್ರಾಯ್ಡರಿ ಕವರ್ನಿಂದ ಅಲಂಕರಿಸಿದರೆ ಅವು ಆಕರ್ಷಕ ಪ್ಲಾಂಟರ್ಗಳಂತೆ ಕಾಣುತ್ತವೆ.
Image credits: INSTAGRAM
Kannada
ಪ್ಲಾಸ್ಟಿಕ್ ಬಾಟಲಿಯಿಂದ ಪ್ಲಾಂಟರ್
ಹಳೆಯ ಪ್ಲಾಸ್ಟಿಕ್ ಬಾಟಲಿಯನ್ನು ಬಿಸಾಡುವ ಬದಲು, ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಿ ಪ್ಲಾಂಟರ್ ಮಾಡಿ. ಅದರಲ್ಲಿ ಮನಿ ಪ್ಲಾಂಟ್ ಅಥವಾ ಸಣ್ಣ ಗಿಡಗಳನ್ನು ನೆಡುವ ಮೂಲಕ ಮನೆಗೆ ವಿಶಿಷ್ಟ ಲುಕ್ ನೀಡಬಹುದು.