ಹಳೆ ಟೈರ್‌ಗೆ ಗೋಲ್ಡನ್ ಬಣ್ಣ ಹಚ್ಚಿ. ಟೈರ್ ಅಳತೆಯ ಕನ್ನಡಿಯನ್ನು ಅದಕ್ಕೆ ಅಳವಡಿಸಿ ಗೋಡೆಗೆ ನೇತುಹಾಕಿ. ಇದು ನೋಡಲು ತುಂಬಾನೇ ಟ್ರೆಂಡಿಯಾಗಿ ಕಾಣಿಸುತ್ತದೆ.
ಹಳೆ ಟೈರ್ ಬಳಸಿ ಬಾಲ್ಕನಿಯಲ್ಲಿ ಉಯ್ಯಾಲೆ ಮಾಡಬಹುದು. ಟೈರ್‌ನ ಕೆಳಭಾಗದಲ್ಲಿ ಪ್ಲೈವುಡ್ ಹಾಕಿ, ಮೇಲ್ಭಾಗದಲ್ಲಿ ವೃತ್ತಾಕಾರದ ಕುಶನ್ ಇಡಬಹುದು.
ಟೈರ್ ಬಳಸಿ ನೀವು ಸಣ್ಣ ಟೇಬಲ್ ತಯಾರಿಸಬಹುದು. ಇದಕ್ಕಾಗಿ ಬಡಗಿಯಿಂದ ಮರದ ಸ್ಟ್ಯಾಂಡ್ ಮತ್ತು ವೃತ್ತಾಕಾರದ ಪ್ಲೈವುಡ್ ಮಾಡಿಸಿಕೊಳ್ಳಿ. ನಂತರ ನಿಮ್ಮಿಷ್ಟದ ಬಣ್ಣ ಹಚ್ಚಿ.
ಹಳೆ ಟೈರ್‌ನಿಂದ ಪ್ಲಾಂಟರ್ ಕೂಡಾ ಮಾಡಬಹುದು. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಟೈರ್‌ನ ಕೆಳಗೆ ವಾಟರ್‌ಪ್ರೂಫ್ ಪ್ಲೈವುಡ್ ಹಾಕಿ, ಅದಕ್ಕೆ ಒಂದು ತೂತು ಮಾಡಿ.
ನಿಮಗೆ ದೊಡ್ಡ ಟೇಬಲ್‌ನ ಸ್ಟ್ಯಾಂಡ್ ಸಿಕ್ಕರೆ, ಹಳೆ ಟೈರ್‌ನಿಂದ ಸೆಂಟರ್ ಟೇಬಲ್ ಕೂಡಾ ರೆಡಿ ಮಾಡಬಹುದು. ಜೊತೆಗೆ, 2 ಟೈರ್‌ಗಳನ್ನು ಬಳಸಿ ಕೂರುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು.
ಹಳೆ ಟೈರ್ ಅನ್ನು ಗೋಡೆಗೆ ಫಿಟ್ ಮಾಡಿ, ಅದರೊಳಗೆ ಮರದ ಶೆಲ್ಫ್‌ಗಳನ್ನು ಅಳವಡಿಸಿ. ನಂತರ ನಿಮ್ಮಿಷ್ಟದ ಅಲಂಕಾರಿಕ ವಸ್ತುಗಳು ಅಥವಾ ಗಿಡಗಳನ್ನು ಇಡಿ.
ದಿನಾಲೂ ಧರಿಸಿ, ವರ್ಷಗಟ್ಟಲೇ ಬಳಸಿ! ಇಲ್ಲಿದೆ 8 ಲೇಟೆಸ್ಟ್ ಸೈಯಾರಾ ಸೂಟ್ ಡಿಸೈನ್ಸ್
Mehndi Design: ಕೈತುಂಬಾ ಮೆಹಂದಿ ಬೇಕಿಲ್ಲ, ಈ ಸಿಂಪಲ್ ಹೂವಿನ ಡಿಸೈನ್ ಟ್ರೈ ಮಾಡಿ
ಅರ್ಧ ಗ್ರಾಂನಲ್ಲಿ ಮಾಡಿಸಿ ಈ ಸ್ಟಾರ್ ಶೇಪ್ ಚಿನ್ನದ ಮೂಗುತಿ: ದಿನಾ ಧರಿಸಲು ಬೆಸ್ಟ್
ಕೆಂಪು ಬಣ್ಣವಿಲ್ಲದೆ ರಾಮನವಮಿ ಶೃಂಗಾರ ಅಪೂರ್ಣ, ಈ 5 ಬಗೆಯ ಬಳೆಗಳನ್ನು ಟ್ರೈ ಮಾಡಿ