ಪತ್ನಿಗೆ ಏನಾದರೂ ವಿಶೇಷವಾದ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ನೀವು ಈ ಕಾಲುಂಗುರಗಳನ್ನ ಅಚ್ಚರಿಯಾಗಿ ನೀಡಬಹುದು.
life Sep 15 2026
Author: Ganesh Mabla Gowda Image Credits:chat gpt and pinterest
Kannada
ಲೋಟಸ್ ಡಿಸೈನ್ ಕಾಲುಂಗುರ
ಕಮಲದ ಆಕಾರದ ಕಾಲುಂಗುರ ತುಂಬಾ ನಾಜೂಕಾಗಿ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಹಸಿರು ಕುಂದನ್ ಅಥವಾ ಸ್ಟೋನ್ ವರ್ಕ್ ಈ ವಿನ್ಯಾಸಕ್ಕೆ ಇನ್ನಷ್ಟು ಸೌಂದರ್ಯವನ್ನು ನೀಡುತ್ತದೆ.
Image credits: chat gpt and pinterest
Kannada
ಫ್ಲೋರಲ್ ಸ್ಟೋನ್‌ವರ್ಕ್ ಕಾಲುಂಗುರ
ಹೂವಿನ ಆಕಾರದ ಜೊತೆಗೆ ಬಣ್ಣಬಣ್ಣದ ಕಲ್ಲುಗಳನ್ನು ಬಳಸಿರುವ ಕಾಲುಂಗುರ, ಪತ್ನಿಗೆ ಉಡುಗೊರೆ ನೀಡಲು ಉತ್ತಮ ಆಯ್ಕೆ. ಈ ವಿನ್ಯಾಸ ಸರಳವಾಗಿದ್ದರೂ ಪಾದಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.
Image credits: silver_store_matapayals instagram
Kannada
ಗೆಜ್ಜೆ ಇರುವ ಕಾಲುಂಗುರ
ಕಾಲುಂಗುರಕ್ಕೆ ಸಣ್ಣ ಗೆಜ್ಜೆಗಳನ್ನು ಜೋಡಿಸಿದ್ದರೆ, ಅದರ ಸಾಂಪ್ರದಾಯಿಕ ನೋಟ ಇನ್ನಷ್ಟು ಹೆಚ್ಚುತ್ತದೆ. ಕಾಲ್ಗೆಜ್ಜೆಯೊಂದಿಗೆ ಇಂತಹ ಕಾಲುಂಗುರ ಧರಿಸಿದರೆ ಪಾದಗಳಿಗೆ ಸುಂದರ ಹಾಗೂ ಟ್ರೆಡಿಷನಲ್ ಟಚ್ ಸಿಗುತ್ತದೆ.
Image credits: silver_store_matapayals instagram
Kannada
ಮಾಡರ್ನ್ ಟೋ-ರಿಂಗ್
ಆಫೀಸ್‌ಗೆ ಹೋಗುವಾಗ ಅಥವಾ ವೆಸ್ಟರ್ನ್ ಮತ್ತು ಇಂಡೋ-ವೆಸ್ಟರ್ನ್ ಡ್ರೆಸ್‌ಗಳ ಜೊತೆ ಧರಿಸಬಹುದಾದ ಮಾಡರ್ನ್ ಕಾಲುಂಗುರ ನಿಮ್ಮ ಪತ್ನಿಗೆ ಖಂಡಿತ ಇಷ್ಟವಾಗಬಹುದು.
Image credits: Instagram
Kannada
ನವಿಲು ವಿನ್ಯಾಸದ ಕಾಲುಂಗುರ
ಭಾರತೀಯ ಆಭರಣಗಳಲ್ಲಿ ನವಿಲಿನ ವಿನ್ಯಾಸಕ್ಕೆ ವಿಶೇಷ ಸ್ಥಾನವಿದೆ. ಬೆಳ್ಳಿಯಲ್ಲಿ ತಯಾರಿಸಿದ ನವಿಲಿನ ಆಕಾರದ ಕಾಲುಂಗುರ ಸಾಂಪ್ರದಾಯಿಕ ಹಾಗೂ ರಾಯಲ್ ಲುಕ್ ನೀಡುತ್ತದೆ.