ಮನೆಗೆ ಬಣ್ಣ ಬಳಿಯುವುದು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸ. ಹಾಗಾಗಿ ಹೇಗೆ ಬಣ್ಣ ಬಳಿಯಬೇಕು ಎಂಬುದರ ಬಗ್ಗೆ ನಮಗೆ ತಿಳಿದಿರಬೇಕು.
ಮನೆಯ ಹಲವು ಭಾಗಗಳಲ್ಲಿ ಬಣ್ಣ ಬಳಿಯಬೇಕಾಗಿರುವುದರಿಂದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಮನೆಯ ಹೊರಗಿನ ವಿದ್ಯುತ್ ಲೈನ್‌ಗಳ ಬಗ್ಗೆ ಎಚ್ಚರವಿರಲಿ.
ಮನೆಯ ಹೊರಭಾಗಕ್ಕೆ ಹಗಲಿನಲ್ಲಿ ಬಣ್ಣ ಬಳಿಯುವುದು ಉತ್ತಮ. ಬೆಳಗಿನ ಸಮಯವನ್ನು ಆಯ್ಕೆ ಮಾಡಬಹುದು. ಆದರೆ ಬೆಳಗಿನ ಜಾವ ಬಣ್ಣ ಬಳಿಯಬಾರದು.
ಹೆಚ್ಚು ತೇವಾಂಶವಿರುವ ಸಮಯದಲ್ಲಿ ಬಣ್ಣ ಬಳಿದರೆ ಬೇಗನೆ ಬಣ್ಣ ಕಿತ್ತು ಹೋಗುವ ಸಾಧ್ಯತೆ ಇದೆ. ಹೆಚ್ಚು ಬಿಸಿಲಿರುವ ಸಮಯದಲ್ಲೂ ಬಣ್ಣ ಬಳಿಯಬಾರದು.
ಬಣ್ಣ ಬಳಿಯುವ ಮೊದಲು ಮನೆಯನ್ನು ತೊಳೆದು ಸ್ವಚ್ಛಗೊಳಿಸುವುದು ಮುಖ್ಯ. ಚೆನ್ನಾಗಿ ಸ್ವಚ್ಛಗೊಳಿಸದಿದ್ದರೆ ಬಣ್ಣ ಕಿತ್ತು ಹೋಗುವ ಸಾಧ್ಯತೆ ಇದೆ.
ಮನೆಯ ಹೊರಭಾಗಕ್ಕೆ ಎರಡನೇ ಬಾರಿ ಬಣ್ಣ ಬಳಿಯುವಾಗ ಮೊದಲು ಬಳಸಿದ್ದ ಬಣ್ಣವನ್ನೇ ಬಳಸುವುದು ಒಳ್ಳೆಯದು. ಇದು ಬಣ್ಣ ಕಿತ್ತು ಹೋಗುವುದನ್ನು ತಡೆಯುತ್ತದೆ.
ಹಳೆಯದಲ್ಲದ ಬಣ್ಣವಾಗಿದ್ದರೆ ಅಥವಾ ಎರಡನೇ ಬಾರಿ ಅದೇ ಬಣ್ಣ ಬಳಿಯುತ್ತಿದ್ದರೆ ಪ್ರೈಮರ್ ಬಳಸಬೇಕಾಗಿಲ್ಲ.
ಎರಡನೇ ಬಾರಿ ಮನೆಗೆ ಬಣ್ಣ ಬಳಿಯುವಾಗ ಮೊದಲು ಬಳಿದ ಬಣ್ಣವನ್ನು ತೆಗೆಯಲು ಸುಲಭವಾಗಿ ಕೆರೆಯುವುದುಂಟು. ಹೀಗೆ ಮಾಡುವಾಗ ಗೋಡೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ಅಳುವುದರಿಂದ ಮುಖದ ಕಾಂತಿ ಹೆಚ್ಚುತ್ತಾ? ಅತ್ತರೂ ಇದೆ ಪ್ರಯೋಜನ
ಬಿಳಿ ಸೂಟ್‌ಗೆ 5 ವೆರೈಟಿ ದುಪ್ಪಟ್ಟ
ಮಳೆಗಾಲದಲ್ಲಿ ಮಕ್ಕಳಿಗೆ ಕಾಯಿಲೆ ಬರಬಾರದಂದ್ರೆ ಈ ಟಿಪ್ಸ್ ಫಾಲೋ ಮಾಡಿ!
ಪಾಕಿಸ್ತಾನದಿಂದ ಏನೇನೆಲ್ಲಾ ಖರೀದಿಸುತ್ತದೆ ಚೀನಾ?