Kannada

ಮಳೆಗಾಲದ ತೇವಾಂಶ ಓಡಿಸಲು ಈ 6 'ಇಂಡೋರ್' ಗಿಡಗಳು ಬೆಸ್ಟ್!

Kannada

ಬೋಸ್ಟನ್ ಫರ್ನ್

ಈ ಗಿಡಗಳು ತೇವಾಂಶವನ್ನು ಹೆಚ್ಚು ಇಷ್ಟಪಡುತ್ತವೆ. ಹಾಗಾಗಿ ಇವುಗಳನ್ನು ಬಾತ್‌ರೂಮ್, ಬಾಲ್ಕನಿಯಲ್ಲಿ ಇಡುವುದು ಉತ್ತಮ. ಇವು ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಂಡು ಮನೆಯನ್ನು ಫ್ರೆಶ್ ಆಗಿಡುತ್ತವೆ.
Image credits: Getty
Kannada

ಅರೆಕಾ ಪಾಮ್

ಮನೆಯ ಹಾಲ್‌ಗೆ ಈ ಗಿಡ ಚೆನ್ನಾಗಿ ಕಾಣಿಸುತ್ತದೆ. ಇದು 'ನ್ಯಾಚುರಲ್ ಹ್ಯೂಮಿಡಿಫೈಯರ್' ಆಗಿ ಕೆಲಸ ಮಾಡುತ್ತದೆ. ಅಂದರೆ, ವಿಷಕಾರಿ ಅಂಶಗಳನ್ನು ತೆಗೆದುಹಾಕಿ, ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವ ಶಕ್ತಿ ಇದಕ್ಕಿದೆ.

Image credits: Getty
Kannada

ರಬ್ಬರ್ ಪ್ಲಾಂಟ್

ದೊಡ್ಡ, ಹೊಳೆಯುವ ಎಲೆಗಳನ್ನು ಹೊಂದಿರುವ ಈ ಗಿಡ ಗಾಳಿಯಲ್ಲಿನ ಮಾಲಿನ್ಯವನ್ನು ಫಿಲ್ಟರ್ ಮಾಡುತ್ತದೆ. ಕಡಿಮೆ ಸೂರ್ಯನ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುವುದರಿಂದ, ಮಳೆಗಾಲಕ್ಕೆ ಇದು ಸೂಪರ್ ಚಾಯ್ಸ್.
Image credits: Getty
Kannada

ಪೀಸ್ ಲಿಲ್ಲಿ

ಬಿಳಿ ಹೂವುಗಳಿಂದ ಸುಂದರವಾಗಿ ಕಾಣುವ ಈ ಗಿಡ, ತನ್ನ ಎಲೆಗಳ ಮೂಲಕ ಗಾಳಿಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಅತ್ಯುತ್ತಮ 'ಏರ್ ಪ್ಯೂರಿಫೈಯರ್' ಗಿಡ ಎಂದೂ ಫೇಮಸ್ ಆಗಿದೆ.
Image credits: Getty
Kannada

ಸ್ಪೈಡರ್ ಪ್ಲಾಂಟ್

ಇದರ ನಿರ್ವಹಣೆ ತುಂಬಾ ಸುಲಭ. ಗಾಳಿಯಲ್ಲಿರುವ ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಶಕ್ತಿ ಇದಕ್ಕಿದೆ. ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸಿದರೆ ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ.
Image credits: Getty
Kannada

ಬ್ರೊಮೆಲಿಯಾಡ್

ಈ ಗಿಡಗಳು ಉಷ್ಣವಲಯದ ವಾತಾವರಣವನ್ನು ಇಷ್ಟಪಡುತ್ತವೆ. ಮಳೆಗಾಲದ ತೇವಾಂಶದಲ್ಲಿ ಇವು ಹುಲುಸಾಗಿ ಬೆಳೆಯುತ್ತವೆ. ಮನೆಯ ಒಳಗೆ ಆಕರ್ಷಕ ಲುಕ್ ನೀಡುವುದಲ್ಲದೆ, ಇವುಗಳ ಆರೈಕೆಯೂ ಸುಲಭ.
Image credits: Getty

ಕೂದಲು ಬೆಳೆಯಲು, ಉದುರುವಿಕೆ ತಡೆಯಲು ತಿನ್ನಲೇಬೇಕಾದ 6 ಬಯೋಟಿನ್‌ಯುಕ್ತ ಆಹಾರ

ಟೀ ಮಾಡುವಾಗ ಸಕ್ಕರೆ/ಬೆಲ್ಲದ ಬದಲಾಗಿ ಬಳಕೆ ಮಾಡಬಹುದಾದ 6 ಪದಾರ್ಥಗಳು

Earring Designs: ಶ್ರಾವಣದಲ್ಲಿ ಟ್ರೈ ಮಾಡಿ ಈ ಕಮಲದ ಡಿಸೈನ್ ಓಲೆಗಳು: ನೋಡಿದವರೇ ಫಿದಾ ಆಗ್ತಾರೆ!

ಅಕ್ಕಿ ಡಬ್ಬದಲ್ಲಿ ಹುಳುಗಳಿವೆಯೇ? ಈ ಸಣ್ಣ ಟ್ರಿಕ್ಸ್ ಬಳಸಿ ಕ್ಷಣಾರ್ಧದಲ್ಲಿ ಓಡಿಸಿ