ಕೂದಲು ಆರೋಗ್ಯವಾಗಿ, ದಷ್ಟಪುಷ್ಟವಾಗಿ ಬೆಳೆಯಲು ಬಯೋಟಿನ್ಯುಕ್ತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ.
ಮೊಟ್ಟೆಯ ಹಳದಿ ಭಾಗದಲ್ಲಿ ದೇಹಕ್ಕೆ ಅಗತ್ಯವಾದ ಬಯೋಟಿನ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಮೊಟ್ಟೆಯನ್ನು ಯಾವಾಗಲೂ ಚೆನ್ನಾಗಿ ಬೇಯಿಸಿಯೇ ಸೇವಿಸಿ.
ಬಾದಾಮಿ, ಶೇಂಗಾ, ವಾಲ್‌ನಟ್ ಮತ್ತು ಸೂರ್ಯಕಾಂತಿ ಬೀಜಗಳು ಬಯೋಟಿನ್ ಜೊತೆಗೆ ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್ ಇ ಅನ್ನು ಸಹ ಒದಗಿಸುತ್ತವೆ.
ಸಾಲ್ಮನ್ ಮೀನಿನಲ್ಲಿ ಬಯೋಟಿನ್ ಮತ್ತು ಒಮೆಗಾ-3 ಫ್ಯಾಟಿ ಆಸಿಡ್‌ಗಳು ಅಧಿಕವಾಗಿವೆ. ಇವು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಸಿಹಿ ಗೆಣಸು ಬಯೋಟಿನ್ ಮತ್ತು ಬೀಟಾ-ಕ್ಯಾರೋಟಿನ್‌ನ ಅತ್ಯುತ್ತಮ ಮೂಲವಾಗಿದೆ. ಇದು ನೆತ್ತಿಯ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬೇಳೆ, ಸೋಯಾಬೀನ್, ಬೀನ್ಸ್ ಮತ್ತು ಕಡಲೆಕಾಳಿನಲ್ಲಿ ಪ್ರೊಟೀನ್, ಕಬ್ಬಿಣ ಮತ್ತು ಬಯೋಟಿನ್ ಅಂಶಗಳಿವೆ. ಇವು ಕೂದಲನ್ನು ಆರೋಗ್ಯವಾಗಿಡಲು ನೆರವಾಗುತ್ತವೆ.
ಆಹಾರದಲ್ಲಿ ಅಣಬೆಗಳನ್ನು ಸೇರಿಸುವುದರಿಂದ ದೇಹಕ್ಕೆ ಬಯೋಟಿನ್ ಸಿಗುತ್ತದೆ. ಇದು ಕೂದಲನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ
ಟೀ ಮಾಡುವಾಗ ಸಕ್ಕರೆ/ಬೆಲ್ಲದ ಬದಲಾಗಿ ಬಳಕೆ ಮಾಡಬಹುದಾದ 6 ಪದಾರ್ಥಗಳು
Earring Designs: ಶ್ರಾವಣದಲ್ಲಿ ಟ್ರೈ ಮಾಡಿ ಈ ಕಮಲದ ಡಿಸೈನ್ ಓಲೆಗಳು: ನೋಡಿದವರೇ ಫಿದಾ ಆಗ್ತಾರೆ!
ಅಕ್ಕಿ ಡಬ್ಬದಲ್ಲಿ ಹುಳುಗಳಿವೆಯೇ? ಈ ಸಣ್ಣ ಟ್ರಿಕ್ಸ್ ಬಳಸಿ ಕ್ಷಣಾರ್ಧದಲ್ಲಿ ಓಡಿಸಿ
ದಿನಾ ಸಂಜೆ ಕರ್ಪೂರ-ಲವಂಗ ಹಚ್ಚಿ.. ಆಮೇಲೆ ಚಮತ್ಕಾರ ನೋಡಿ