ಶ್ರಾವಣದಲ್ಲಿ ಟ್ರೈ ಮಾಡಿ ಈ ಕಮಲದ ಡಿಸೈನ್ ಓಲೆಗಳು: ನೋಡಿದವರೇ ಫಿದಾ ಆಗ್ತಾರೆ!
fashion Aug 21 2026
Author: Govindaraj S Image Credits:INSTAGRAM
Kannada
ಕಮಲ ಮತ್ತು ಗೆಜ್ಜೆ ಇರುವ ಓಲೆ
ಸ್ವಲ್ಪ ಕಾಶ್ಮೀರಿ ಟಚ್ ಇರುವ ಈ ಕಮಲದ ಡಿಸೈನ್ ಓಲೆಗಳು ನೋಡಲು ತುಂಬಾನೇ ನಾಜೂಕಾಗಿ ಕಾಣಿಸುತ್ತವೆ. ಕೆಳಗೆ ನೇತಾಡುವ ಸಣ್ಣ ಗೆಜ್ಜೆಗಳು, ನೀವು ನಡೆದಾಗ ಅಥವಾ ತಲೆ ಅಡಿಸಿದಾಗೆಲ್ಲಾ ಸಣ್ಣಗೆ ಸದ್ದು ಮಾಡುತ್ತವೆ.
Image credits: INSTAGRAM
Kannada
ಕುಂದನ್ ಕಮಲ ಟಾಪ್ಸ್
ದೊಡ್ಡ ಜುಮುಕಿ ಅಥವಾ ಉದ್ದನೆಯ ಇಯರಿಂಗ್ಸ್ ಇಷ್ಟಪಡದವರಿಗೆ, ಕುಂದನ್ ವರ್ಕ್ ಇರುವ ಈ ಕಮಲದ ಟಾಪ್ಸ್ ಒಳ್ಳೆ ಆಯ್ಕೆ. ನೋಡೋಕೆ ಚಿಕ್ಕದಾಗಿದ್ದರೂ, ಇವು ನಿಮ್ಮ ಲುಕ್ ಅನ್ನು ಇನ್ನಷ್ಟು ಸುಂದರವಾಗಿಸುತ್ತವೆ.
Image credits: INSTAGRAM
Kannada
ಕುಂದನ್ ಕಮಲ ಜುಮುಕಿ
ಸಾಂಪ್ರದಾಯಿಕ ಜುಮುಕಿಗಳಲ್ಲಿ ಕಮಲದ ವಿನ್ಯಾಸ ಮತ್ತು ಬಣ್ಣಬಣ್ಣದ ಕುಂದನ್ ವರ್ಕ್‌ನ ಸುಂದರ ಸಂಗಮವನ್ನು ಇಲ್ಲಿ ನೋಡಬಹುದು. ಗುಲಾಬಿ, ಹಸಿರು ಮತ್ತು ಬಿಳಿ ಕುಂದನ್‌ಗಳು ಈ ಜುಮುಕಿಗೆ ರಾಯಲ್ ಲುಕ್ ನೀಡುತ್ತವೆ.
Image credits: INSTAGRAM
Kannada
ಚಾಂದ್‌ಬಾಲಿ ಮೀನಾಕಾರಿ ಕಮಲ ಜುಮುಕಿ
ಚಾಂದ್‌ಬಾಲಿ ಸ್ಟೈಲ್ ಮತ್ತು ಕಮಲದ ಹೂವಿನ ವಿನ್ಯಾಸದಿಂದಾಗಿ ಈ ಜುಮುಕಿ ಸ್ವಲ್ಪ ಡಿಫರೆಂಟ್ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ಇದರ ಮೇಲಿನ ಮೀನಾಕಾರಿ ವರ್ಕ್, ಆಭರಣಕ್ಕೆ ಹೆಚ್ಚು ಸಾಂಪ್ರದಾಯಿಕ ಲುಕ್ ನೀಡುತ್ತದೆ.
Image credits: INSTAGRAM
Kannada
ಕಮಲ ಜುಮುಕಿ ಡ್ಯಾಂಗಲ್ ಇಯರಿಂಗ್
ಉದ್ದನೆಯ ಇಯರಿಂಗ್ಸ್ ಹಾಕಿಕೊಳ್ಳಲು ಇಷ್ಟಪಡುವವರಿಗೆ ಈ ಡಿಸೈನ್ ಹೇಳಿ ಮಾಡಿಸಿದ್ದು. ಕುಂದನ್ ಮತ್ತು ಮೀನಾಕಾರಿ ವರ್ಕ್ ಜೊತೆಗೆ ಕಮಲ, ಚಂದ್ರ ಮತ್ತು ಡ್ಯಾಂಗಲ್ಸ್‌ಗಳ ರಚನೆಯು ತುಂಬಾ ಆಕರ್ಷಕವಾಗಿ ಕಾಣುತ್ತದೆ.