Kannada

ಸೌತೆಕಾಯಿ ಕೃಷಿ

ಮನೆಯಲ್ಲೇ ಸೌತೆಕಾಯಿ ಬೀಜ ನೆಟ್ಟು, ಅದರಿಂದ ಉತ್ತಮ ಇಳುವರಿ ಪಡೆಯಲು ಏನು ಮಾಡಬೇಕು ಅಂತ ನೋಡೋಣ ಬನ್ನಿ.

Kannada

ಸೂರ್ಯನ ಬೆಳಕು ಮುಖ್ಯ

ಚೆನ್ನಾಗಿ ಸೂರ್ಯನ ಬೆಳಕು ಬೀಳುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ನೀರು ನಿಲ್ಲಬಾರದು. ಮಣ್ಣನ್ನು ಚೆನ್ನಾಗಿ ಅಗೆದು, ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಮತ್ತು ಮೂಳೆ ಪುಡಿಯನ್ನು ಸೇರಿಸಿ ಪಾತಿ ರೆಡಿ ಮಾಡಿ.
Image credits: pixabay
Kannada

ಪ್ರತಿ ಪಾತಿಗೆ 3-4 ಬೀಜ

ಬೀಜಗಳನ್ನು ಸಾಲಾಗಿ 4-5 ಅಡಿ ಅಂತರದಲ್ಲಿ ನೆಡಿ. ಪ್ರತಿ ಪಾತಿಗೆ 3-4 ಬೀಜಗಳನ್ನು ಹಾಕಬಹುದು. ಬೀಜ ಬಿತ್ತುವ ಮುನ್ನ 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದರೆ, ಬೇಗ ಮೊಳಕೆಯೊಡೆಯಲು ಸಹಾಯ ಆಗುತ್ತೆ.
Image credits: pixabay
Kannada

ಮಲ್ಚಿಂಗ್ ಮಾಡಿ

ಗಿಡ ಬೆಳೆಯಲು ಶುರುವಾದಾಗ, ಪಾತಿಯಲ್ಲಿ ಹಸಿರೆಲೆ ಅಥವಾ ಒಣಗಿದ ಎಲೆಗಳನ್ನು ಬಳಸಿ ಮಲ್ಚಿಂಗ್ ಮಾಡಿ. ಅಂದರೆ ಗಿಡದ ಬುಡಕ್ಕೆ ಹೊದಿಕೆ ಹಾಕಿ.
Image credits: pixabay
Kannada

ಚಪ್ಪರ ಹಾಕಿ ಕೊಡಿ

ಬಳ್ಳಿಗಳು ಬೆಳೆಯಲು ಶುರುವಾದಾಗ ಚಪ್ಪರ ಹಾಕಿ ಅಥವಾ ಹಗ್ಗ ಕಟ್ಟಿ ಹಬ್ಬಲು ಬಿಡಿ. ಬಳ್ಳಿಗಳು ನೆಲಕ್ಕೆ ತಾಗದಂತೆ ನೋಡಿಕೊಂಡರೆ, ಕಾಯಿಗಳು ಕೊಳೆಯುವುದನ್ನು ತಪ್ಪಿಸಬಹುದು.
Image credits: pixabay
Kannada

ನಿಯಮಿತವಾಗಿ ನೀರು ಬೇಕು

ಸೌತೆಕಾಯಿ ಗಿಡಕ್ಕೆ ಪ್ರತಿದಿನ ತಪ್ಪದೇ ನೀರು ಬೇಕು. ಆದರೆ, ನೀರು ನಿಲ್ಲಲು ಬಿಡಬೇಡಿ. ಕಾಯಿ ಬಿಡುವ ಸಮಯದಲ್ಲಿ ನೀರು ಕಡಿಮೆ ಆದರೆ, ಸೌತೆಕಾಯಿ ಕಹಿ ಆಗುವ ಸಾಧ್ಯತೆ ಇರುತ್ತದೆ.
Image credits: pixabay
Kannada

ಸಾವಯವ ಗೊಬ್ಬರ ಬಳಸಿ

ಬಳ್ಳಿ ಬೆಳೆಯುವಾಗ, ಹುದುಗಿಸಿದ ಕಡಲೆ ಹಿಂಡಿ, ಜೀವಾಮೃತ ಅಥವಾ ಗಂಜಿಗೆ ಸಗಣಿ ಬೆರೆಸಿ ಗಿಡಕ್ಕೆ ಹಾಕಿ.
Image credits: pixabay
Kannada

ಬೂದಿ ಬಳಸಿ ನೋಡಿ

ಕಾಯಿ ಬಿಡುವ ಸಮಯದಲ್ಲಿ ಗಿಡದ ಬುಡಕ್ಕೆ ಬೂದಿ ಉದುರಿಸುವುದರಿಂದ ಹೆಚ್ಚು ಹೂವುಗಳು ಮತ್ತು ಕಾಯಿಗಳು ಬಿಡಲು ಸಹಾಯ ಆಗುತ್ತದೆ.
Image credits: pixabay
Kannada

ಕವರ್ ಹಾಕಿ ರಕ್ಷಿಸಿ

ಸೌತೆಕಾಯಿ ಬೆಳೆಯಲ್ಲಿ ದೊಡ್ಡ ವಿಲನ್ ಅಂದ್ರೆ ಕಾಯಿ ನೊಣ. ಕಾಯಿಗಳು ಚಿಕ್ಕದಿದ್ದಾಗಲೇ ಪೇಪರ್ ಬ್ಯಾಗ್ ಅಥವಾ ಕವರ್‌ಗಳಿಂದ ಸುತ್ತಿ ರಕ್ಷಿಸಿ.
Image credits: pixabay
Kannada

ಬೇವಿನೆಣ್ಣೆ-ಬೆಳ್ಳುಳ್ಳಿ ದ್ರಾವಣ

ಬಿಳಿನೊಣದಂತಹ ಕೀಟಗಳನ್ನು ತಡೆಯಲು, 2% ಸಾಂದ್ರತೆಯ ಬೇವಿನೆಣ್ಣೆ-ಬೆಳ್ಳುಳ್ಳಿ ಮಿಶ್ರಣ ಅಥವಾ ಸೋಪಿನ ದ್ರಾವಣವನ್ನು ವಾರಕ್ಕೊಮ್ಮೆ ಸಂಜೆ ಹೊತ್ತು ಸಿಂಪಡಿಸಿ.

Image credits: pixabay
Kannada

ಬೆಳೆ ಕಟಾವು

ಗಿಡದಲ್ಲಿ ಹೂವು ಬಿಟ್ಟ 45-50 ದಿನಗಳಲ್ಲಿ ಮೊದಲ ಫಸಲು ಕಟಾವು ಮಾಡಬಹುದು. ಕಟಾವು ತಡವಾದರೆ ಕಾಯಿಗಳು ಬಲಿತು ಗಟ್ಟಿಯಾಗುತ್ತವೆ. ಹಾಗಾಗಿ, ಸರಿಯಾದ ಹದಕ್ಕೆ ಬಂದಾಗ ಕಿತ್ತುಕೊಳ್ಳಿ.
Image credits: pixabay

ನೋಡಿದ್ರೆ ಫಿದಾ ಆಗ್ತೀರಾ, ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌ ಇಲ್ಲಿವೆ!

Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ

Growing Garlic: ಮನೆಯಲ್ಲೇ ಬೆಳ್ಳುಳ್ಳಿ ಬೆಳೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ರೇಷ್ಮೆ ಸೀರೆಗೆ ಸಖತ್‌ ಲುಕ್‌ ಕೊಡುವ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು! ಟ್ರೈ ಮಾಡಿ