ಎಳನೀರು ಅಥವಾ ತೆಂಗಿನಕಾಯಿ ಕೊಳ್ಳುವಾಗ ಅದರಲ್ಲಿ ನೀರು ಎಷ್ಟಿದೆ ಎಂದು ತಿಳಿಯಲು ಕಷ್ಟಪಡಬೇಕಿಲ್ಲ. ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ ನೀವೇ ಸ್ಮಾರ್ಟ್ ಆಗಿ ಕಾಯಿ ಆರಿಸಬಹುದು.
ಕಾಯಿಯನ್ನು ಕಿವಿಯ ಹತ್ತಿರ ಹಿಡಿದು ಅಲುಗಾಡಿಸಿ. ಒಳಗೆ ನೀರು ಅಲುಗಾಡುವ 'ಛಪ್ ಛಪ್' ಶಬ್ದ ಚೆನ್ನಾಗಿ ಕೇಳಿಸಿದರೆ ಅದರಲ್ಲಿ ನೀರು ಹೆಚ್ಚಿದೆ ಎಂದರ್ಥ.
ಕೈಯಲ್ಲಿ ಎತ್ತಿ ನೋಡಿದಾಗ ಗಾತ್ರಕ್ಕಿಂತ ಹೆಚ್ಚು ಭಾರ ಅನಿಸಿದರೆ ಅದು ಅಸಲಿ 'ವಾಟರ್ ಕಂಟೆಂಟ್' ಇರುವ ಕಾಯಿ. ಹಗುರವಾಗಿದ್ದರೆ ನೀರು ಕಡಿಮೆಯಾಗಿ ಎಳೆ ಕೊಬ್ಬರಿ ಹೆಚ್ಚಿರುತ್ತದೆ.
ಯಾವಾಗಲೂ ಹಸಿರು ಬಣ್ಣದ ಮತ್ತು ಪೂರ್ತಿ ಗೋಲಾಕಾರದ ಕಾಯಿಯನ್ನೇ ಆರಿಸಿ. ಕಂದು ಬಣ್ಣಕ್ಕೆ ತಿರುಗಿದ ಅಥವಾ ಆಕಾರ ಬದಲಾದ ಕಾಯಿಗಳಲ್ಲಿ ನೀರು ಒಣಗಿ ಕೊಬ್ಬರಿ ಹೆಚ್ಚಾಗಿರುತ್ತದೆ.
ಕಾಯಿಯ ಮೇಲ್ಭಾಗದಲ್ಲಿ ಕಪ್ಪು ಚುಕ್ಕೆ ಅಥವಾ ಬಿರುಕುಗಳಿದ್ದರೆ ಅಂತಹ ಕಾಯಿ ತೆಗೆದುಕೊಳ್ಳಬೇಡಿ.
ತೆಂಗಿನಕಾಯಿ ಕೊಂಡ ನಂತರ ತುಂಬಾ ದಿನ ಇಡಬೇಡಿ. ತಂದ ತಕ್ಷಣ ಬಳಸಿದರೆ ಅದರ ರುಚಿ ಮತ್ತು ತಾಜಾತನ ಉತ್ತಮವಾಗಿರುತ್ತದೆ.
ನಿಮಗೂ ಸ್ತನ ಕ್ಯಾನ್ಸರ್ ಇದೆಯೇ? ಕನ್ನಡಿ ಮುಂದೆ ನಿಂತು ಈ ರೀತಿಯಾಗಿ ಪತ್ತೆ ಹಚ್ಚಿ
ಪ್ಲೇನ್ ಸೀರೆಗೆ ಗ್ಲಾಮ್ ಟಚ್: ಈ 6 ಡಿಸೈನರ್ ಸ್ವೀಟ್‌ಹಾರ್ಟ್ ಬ್ಲೌಸ್ ಟ್ರೈ ಮಾಡಿ!
ವಿಷಕಾರಿ ಸಕ್ಕರೆ ಬದಲು ಟೀ- ಕಾಫಿಗೆ ಇದನ್ನು ಸೇರಿಸಿ, ಆರೋಗ್ಯವಂತರಾಗಿ
ಕಡಿಮೆ ಚಿನ್ನದಲ್ಲಿ ರಾಯಲ್ ಲುಕ್, ವಿವಾಹಿತೆಯರ ಆಯ್ಕೆ ಈ 6 ಮಾಂಗಲ್ಯ ಸರ ಡಿಸೈನ್ಸ್!