ರೇಖಾ ಅಡುಗೆ ಮೂಲಕ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ರೇಖಾ ಅಡುಗೆ ಚಾನೆಲ್ ಯುಟ್ಯೂಬರ್ ರೇಖಾ ಅವರು Rapid Rashmi Showನಲ್ಲಿ ಹಲವರು ಅಡುಗೆ ಟಿಪ್ಸ್ ಕೊಟ್ಟಿದ್ದಾರೆ.
kitchen Mar 22 2026
Author: Suchethana D Image Credits:Rapid Rashmi Instagram
Kannada
ಪಕೋಡಾ, ಬೋಂಡಾ ಕ್ರಿಸ್ಪಿ ಆಗಲು
ಪಕೋಡಾ, ಬೋಂಡಾ ಸೇರಿದಂತೆ ಈ ರೀತಿಯಲ್ಲಿ ಎಣ್ಣೆಯಲ್ಲಿ ಕರಿಯುವ ಪದಾರ್ಥಗಳು ಕ್ರಿಸ್ಪಿ ಆಗಬೇಕು ಎಂದರೆ ಅಕ್ಕಿ ಹಿಟ್ಟು ಮಿಕ್ಸ್ ಮಾಡಬೇಕು ಹಾಗೂ ಬಿಸಿಬಿಸಿ ಎಣ್ಣೆ ಬಳಕೆ ಮಾಡಬೇಕು. ಸುರ್ ಅಂತ ಸೌಂಡ್ ಬರಬೇಕು.
Image credits: Rapid Rashmi Instagram
Kannada
ಎಣ್ಣೆ ಕಾದಿದ್ಯಾ ನೋಡಲು
ಎಣ್ಣೆ ಚೆನ್ನಾಗಿ ಕಾದಿದ್ಯಾ ನೋಡಲು ಒಂದು ಚೂರು ಹಿಟ್ಟು ಹಾಕಿ ಸೌಂಡ್ ಬರುವುದು ಒಂದು ವಿಧವಾದರೆ, ಸೌಟ್ ಇಟ್ಟರೂ ಗೊತ್ತಾಗತ್ತೆ. ಗುಳ್ಳೆ ಗುಳ್ಳೆ ಬಂತು ಎಂದರೆ ಎಣ್ಣೆ ಕಾದಿದೆ ಎಂದರ್ಥ ಎನ್ನುತ್ತಾರೆ ರೇಖಾ
Image credits: Rapid Rashmi Instagram
Kannada
ಎಣ್ಣೆ ಹೀರಿಕೊಳ್ಳದೇ ಇರಲು
ಪಕೋಡಾ, ಬೋಂಡಾ ಇಂಥ ಯಾವುದೇ ತಿನಿಸು ಮಾಡುವಾಗ ಎಣ್ಣೆ ಹೀರಿಕೊಳ್ಳಬಾರದು ಎಂದರೆ ಸ್ವಲ್ಪ ಕಲ್ಲುಪ್ಪನ್ನು ಎಣ್ಣೆಗೆ ಹಾಕಬೇಕು. ಹೀಗೆ ಮಾಡಿದರೆ ಎಣ್ಣೆ ಹೀರಿಕೊಳ್ಳದೇ ಟೇಸ್ಟ್ ಹೆಚ್ಚಿಗೆ ಬರುತ್ತದೆ.
Image credits: Rapid Rashmi Instagram
Kannada
ನಾನ್ವೆಜ್ ರೆಸಿಪಿಗಳು
ಇವಿಷ್ಟೇ ಅಲ್ಲದೇ ನಾನ್ವೆಜ್ ಅಡುಗೆಗಳು ಟೇಸ್ಟಿಯಾಗಲು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಇದೇ ಚಾನೆಲ್ನಲ್ಲಿ ಅವರು ವಿವರಿಸಿದ್ದಾರೆ.
Image credits: Rapid Rashmi Instagram
Kannada
ಒಲೆಯಲ್ಲಿ ಮಾಡಿದ್ರೆ ಸಕತ್ ಟೇಸ್ಟ್
ಯಾವುದೇ ಅಡುಗೆ ಮಾಡುವುದಿದ್ದರೆ ಒಲೆಯಲ್ಲಿ ಮಾಡಿದ್ರೆ ಅದಕ್ಕಿಂತ ಮತ್ತೊಂದು ರುಚಿ ಬೇರೊಂದಿಲ್ಲ ಎನ್ನುತ್ತಾರೆ ರೇಖಾ. ಒರಿಜಿನಲ್ ಟೇಸ್ಟ್ ಬೇಕು ಎಂದರೆ ಒಲೆನೇ ಬೆಸ್ಟ್ ಎನ್ನುವುದು ಅವರ ಮಾತು.