Kannada

ಬದನೆಕಾಯಿ

ಮನೆಯಂಗಳ ಅಥವಾ ಟೆರೇಸ್ ಮೇಲೆ ಬದನೆಕಾಯಿ ಬೆಳೆಯಬಹುದು. ಹೆಚ್ಚು ಇಳುವರಿ ಪಡೆಯಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್.

Kannada

ಉತ್ತಮ ಸೂರ್ಯನ ಬೆಳಕು

ಬದನೆ ಗಿಡಕ್ಕೆ ಸಾಕಷ್ಟು ಸೂರ್ಯನ ಬೆಳಕು ಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೇರ ಬಿಸಿಲು ಬೀಳುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ.

Image credits: Getty
Kannada

ಮಣ್ಣಿನ ತಯಾರಿ

ನೀರು ನಿಲ್ಲದ, ಚೆನ್ನಾಗಿ ಬಸಿದು ಹೋಗುವ ಮಣ್ಣು ಇದಕ್ಕೆ ಸೂಕ್ತ. ತೆಂಗಿನ ನಾರು, ಸಗಣಿ ಗೊಬ್ಬರ/ಕಾಂಪೋಸ್ಟ್, ಸ್ವಲ್ಪ ಬೇವಿನ ಹಿಂಡಿ ಮತ್ತು ಮೂಳೆ ಪುಡಿ ಸೇರಿಸಿ ಮಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ಸಿದ್ಧಪಡಿಸಿ.

Image credits: Getty
Kannada

ಸರಿಯಾದ ಅಂತರ

ಸಸಿಗಳ ನಡುವೆ ಕನಿಷ್ಠ 1.5 ರಿಂದ 2 ಅಡಿ ಅಂತರ ಇರಬೇಕು. ಗ್ರೋ ಬ್ಯಾಗ್‌ನಲ್ಲಿ ನೆಡುವುದಾದರೆ, ಒಂದು ಬ್ಯಾಗ್‌ಗೆ ಒಂದೇ ಸಸಿ ನೆಡುವುದು ಉತ್ತಮ ಬೆಳವಣಿಗೆ ಮತ್ತು ಇಳುವರಿಗೆ ಒಳ್ಳೆಯದು.

Image credits: Getty
Kannada

ನಿಯಮಿತವಾಗಿ ನೀರು ಹಾಕಿ

ಮಣ್ಣಿನಲ್ಲಿ ಯಾವಾಗಲೂ ಸ್ವಲ್ಪ ತೇವಾಂಶ ಇರಬೇಕು. ಆದರೆ, ನೀರು ನಿಲ್ಲಲು ಬಿಡಬೇಡಿ. ಬೇಸಿಗೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನೀರು ಹಾಕುವುದು ಅವಶ್ಯಕ.

Image credits: Getty
Kannada

ಸಾವಯವ ಗೊಬ್ಬರ ಬಳಕೆ

ಗಿಡ ಬೆಳೆಯಲು ಪ್ರಾರಂಭಿಸಿದಾಗ, ಪ್ರತಿ 15-20 ದಿನಗಳಿಗೊಮ್ಮೆ ಮೇಲುಗೊಬ್ಬರವನ್ನು ನೀಡಬೇಕು.

Image credits: Getty
Kannada

ಸಾವಯವ ಕೀಟ ನಿಯಂತ್ರಣ

ಬದನೆ ಗಿಡಕ್ಕೆ ಕಾಂಡ ಕೊರಕ, ಕಾಯಿ ಕೊರಕ ಮತ್ತು ಬಿಳಿನೊಣದ ಕಾಟ ಹೆಚ್ಚು. ವಾರಕ್ಕೊಮ್ಮೆ ಬೇವಿನೆಣ್ಣೆ-ಬೆಳ್ಳುಳ್ಳಿ ಮಿಶ್ರಣ ಅಥವಾ ಬೇವಿನೆಣ್ಣೆ-ಸೋಪು ದ್ರಾವಣವನ್ನು ಸಿಂಪಡಿಸಿ.

Image credits: Getty
Kannada

ಗಿಡಕ್ಕೆ ಆಸರೆ ನೀಡಿ

ಬದನೆ ಗಿಡ ಬೆಳೆದು ತುಂಬಾ ಕಾಯಿ ಬಿಟ್ಟಾಗ, ಭಾರದಿಂದ ಗಿಡ ಬಾಗಬಹುದು ಅಥವಾ ಕೊಂಬೆಗಳು ಮುರಿಯಬಹುದು. ಹಾಗಾಗಿ, ಗಿಡದ ಪಕ್ಕದಲ್ಲಿ ಒಂದು ಸಣ್ಣ ಕೋಲನ್ನು ನೆಟ್ಟು, ಗಿಡವನ್ನು ಅದಕ್ಕೆ ಕಟ್ಟಿರಿ.

Image credits: Getty
Kannada

ಪ್ರೂನಿಂಗ್ ಅಥವಾ ಸವರುವಿಕೆ

ಮಣ್ಣಿಗೆ ತಾಗಿಕೊಂಡಿರುವ, ಹಳೆಯ ಹಾಗೂ ರೋಗಗ್ರಸ್ತ ಕೆಳಗಿನ ಎಲೆಗಳನ್ನು ನಿಯಮಿತವಾಗಿ ಕತ್ತರಿಸಿ ತೆಗೆಯಿರಿ. ಇದರಿಂದ ಗಿಡಕ್ಕೆ ಚೆನ್ನಾಗಿ ಗಾಳಿ, ಬೆಳಕು ಸಿಗುತ್ತದೆ ಮತ್ತು ರೋಗಗಳು ಹರಡುವುದನ್ನು ತಡೆಯಬಹುದು.

Image credits: Getty

ಮನೆಗೆ ಬೇಕಾದ ಕರಿಬೇವು ಖರೀದಿಸಲೇಬೇಡಿ; ಸಣ್ಣ ಜಾಗದಲ್ಲಿ ಹೀಗೆ ಬೆಳೆಸಿ ನೋಡಿ!

Snake Plant: ಮನೆಯೊಳಗೆ ಸ್ನೇಕ್ ಪ್ಲಾಂಟ್ ಬೆಳೆಸುವುದರ 7 ಪ್ರಯೋಜನಗಳು ಇಲ್ಲಿವೆ

ಫ್ರಿಡ್ಜ್ ಇಲ್ಲದೇ 15 ದಿನಗಳವರೆಗೆ ಟೊಮೆಟೋ ಫ್ರೆಶ್ ಆಗಿಡುವ ಸೂಪರ್ ಟ್ರಿಕ್ಸ್

ಕಿಚನ್ ಸಿಂಕ್ ಬ್ಲಾಕ್ ಆದ್ರೆ ಪ್ಲಂಬರ್ ಕರೆಯುವ ಮುನ್ನ ಈ ಕೆಲಸಗಳನ್ನು ಮಾಡಿ