ನಾವು ಪ್ರತಿದಿನ ಆಫೀಸ್‌ಗೆ ಅಥವಾ ಬೇರೆಡೆಗೆ ಕೊಂಡೊಯ್ಯುವ ವಾಟರ್ ಬಾಟಲ್ ಎಷ್ಟೇ ತೊಳೆದರೂ ಕೆಲವೊಮ್ಮೆ ಕೆಟ್ಟ ವಾಸನೆ ಬರುತ್ತಲೇ ಇರುತ್ತದೆ. ಇದಕ್ಕೆ ಕಾರಣ ಬ್ಯಾಕ್ಟೀರಿಯಾ, ತೇವಾಂಶ ಮತ್ತು ಸ್ವಚ್ಛತೆ ಇಲ್ಲದಿರುವುದು.
kitchen Mar 07 2026
Author: Sathish Kumar KH Image Credits:instagram And AI Image
Kannada
5 ಸುಲಭ ಡೀಪ್ ಕ್ಲೀನಿಂಗ್ ಟ್ರಿಕ್ಸ್
ಬಾಟಲ್‌ಗಳನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ, ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಈ 5 ಸುಲಭ ಡೀಪ್ ಕ್ಲೀನಿಂಗ್ ಟ್ರಿಕ್ಸ್ ಬಳಸಿ ನಿಮ್ಮ ವಾಟರ್ ಬಾಟಲಿಯನ್ನು ಸ್ವಚ್ಛವಾಗಿ ಮತ್ತು ವಾಸನೆ ಮುಕ್ತವಾಗಿ ಇಟ್ಟುಕೊಳ್ಳಿ.
Image credits: instagram And AI Image
Kannada
ಬೇಕಿಂಗ್ ಸೋಡಾದಿಂದ ಡೀಪ್ ಕ್ಲೀನ್ ಮಾಡಿ
ಬಾಟಲ್‌ಗೆ 1 ಚಮಚ ಬೇಕಿಂಗ್ ಸೋಡಾ ಹಾಕಿ, ಅದಕ್ಕೆ ಉಗುರುಬೆಚ್ಚಗಿನ ನೀರನ್ನು ತುಂಬಿಸಿ. ಮುಚ್ಚಳವನ್ನು ಮುಚ್ಚಿ ಬಾಟಲಿ ಅಲ್ಲಾಡಿಸಿ. 20-30 ನಿಮಿಷದ ನಂತರ ಬ್ರಷ್‌ನಿಂದ ಸ್ವಚ್ಛಗೊಳಿಸಿ ತೊಳೆದರೆ ವಾಸನೆ ಮತ್ತು ಕಲೆ ಮಾಯ.
Image credits: instagram And AI Image
Kannada
ನಿಂಬೆ ಮತ್ತು ಬಿಸಿ ನೀರಿನ ಬಳಕೆ
ನಿಂಬೆಯಲ್ಲಿರುವ ಆಸಿಡ್, ಬ್ಯಾಕ್ಟೀರಿಯಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ನಿಂಬೆಹಣ್ಣಿನ ರಸವನ್ನು ಬಾಟಲಿಗೆ ಹಾಕಿ, ಬಿಸಿ ನೀರು ತುಂಬಿಸಿ. 15-20 ನಿಮಿಷಗಳ ನಂತರ ಬ್ರಷ್‌ನಿಂದ ಸ್ವಚ್ಛಗೊಳಿಸಿ ತೊಳೆಯಿರಿ.
Image credits: instagram And AI Image
Kannada
ವಿನೆಗರ್‌ನಿಂದ ಹಠಮಾರಿ ವಾಸನೆ ತೆಗೆಯಿರಿ
ಬಿಳಿ ವಿನೆಗರ್ (White Vinegar) ವಾಸನೆ ಮತ್ತು ಬ್ಯಾಕ್ಟೀರಿಯಾ ಹೋಗಲಾಡಿಸಲು ಪರಿಣಾಮಕಾರಿ. ಬಾಟಲಿಗೆ ಅರ್ಧನೀರು ತುಂಬಿಸಿ, ಅದಕ್ಕೆ 2-3 ಚಮಚ ವಿನೆಗರ್ ಸೇರಿಸಿ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಚೆನ್ನಾಗಿ ತೊಳೆಯಿರಿ.
Image credits: instagram And AI Image
Kannada
ಉಪ್ಪು ಮತ್ತು ಐಸ್‌ನಿಂದ ಸ್ಕ್ರಬ್ ಮಾಡಿ
ಬಾಟಲಿಯ ಒಳಗೆ ಕಲೆಗಳು ಅಂಟಿಕೊಂಡಿದ್ದರೆ ಈ ವಿಧಾನ ತುಂಬಾ ಉಪಯುಕ್ತ. ಬಾಟಲಿಗೆ ಸ್ವಲ್ಪ ದಪ್ಪ ಉಪ್ಪು ಮತ್ತು ಕೆಲವು ಐಸ್ ತುಂಡುಗಳನ್ನು ಹಾಕಿ. ಬಾಟಲಿಯನ್ನು ಜೋರಾಗಿ ಅಲ್ಲಾಡಿಸಿ, ನಂತರ ಶುದ್ಧ ನೀರಿನಿಂದ ತೊಳೆಯಿರಿ.
Image credits: instagram And AI Image
Kannada
ಬಾಟಲ್ ಬ್ರಷ್‌ನಿಂದ ಸರಿಯಾಗಿ ಸ್ವಚ್ಛಗೊಳಿಸಿ
ಕೆಲವೊಮ್ಮೆ ಕೈಯಿಂದ ಬಾಟಲಿ ಒಳಭಾಗ ಸರಿಯಾಗಿ ಸ್ವಚ್ಛವಾಗಲ್ಲ. ಉದ್ದನೆ ಹಿಡಿಕೆಯುಳ್ಳ ಬಾಟಲ್ ಬ್ರಷ್ ಬಳಸಿ. ಮುಚ್ಚಳ ಮತ್ತು ರಬ್ಬರ್ ರಿಂಗ್ ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ. ತೊಳೆದ ನಂತರ, ಬಾಟಲಿ ತೆರೆದಿಟ್ಟು ಒಣಗಿಸಿ.