ಕೊತ್ತಂಬರಿ ಸೊಪ್ಪು ಬೇಗ ಬಾಡಿ ಹೋಗುವುದು ಅಥವಾ ಕೊಳೆತು ಹೋಗುವುದು ಸಾಮಾನ್ಯ. ಅದನ್ನು ಫ್ರೆಶ್ ಆಗಿ ಇಡಲು ಇಲ್ಲಿದೆ ಸುಲಭ ಉಪಾಯ.
kitchen Apr 05 2026
Author: Ashwini HR Image Credits:pixabay
Kannada
ಮೊದಲ ಹಂತ
ಮಾರುಕಟ್ಟೆಯಿಂದ ತಂದ ಸೊಪ್ಪಿನಲ್ಲಿರುವ ಕೊಳೆತ ಅಥವಾ ಹಳದಿ ಎಲೆಗಳನ್ನು ಮೊದಲು ಬೇರ್ಪಡಿಸಿ. ತೇವಾಂಶವಿದ್ದರೆ ಸೊಪ್ಪು ಬೇಗ ಕೊಳೆಯುವುದರಿಂದ, ತೊಳೆದ ನಂತರ ಅದನ್ನು ಪೂರ್ಣವಾಗಿ ಒಣಗಿಸುವುದು ಬಹಳ ಮುಖ್ಯ.
Image credits: Getty
Kannada
ಮಸ್ಲಿನ್ ಬಟ್ಟೆಯ ಬಳಕೆ
ಸೊಪ್ಪನ್ನು ಒಂದು ಹಗುರವಾದ ಹತ್ತಿ ಅಥವಾ ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಇಡಿ. ಹೀಗೆ ಮಾಡುವುದರಿಂದ ಗಾಳಿಯಾಡುತ್ತದೆ ಮತ್ತು ತೇವಾಂಶ ಇಲ್ಲದೆ ಸೊಪ್ಪು ಒಂದು ವಾರಕ್ಕೂ ಹೆಚ್ಚು ಕಾಲ ಹಸಿರಾಗಿರುತ್ತದೆ.
Image credits: pixabay
Kannada
ಏರ್-ಟೈಟ್ ಡಬ್ಬಿಯ ಬಳಕೆ
ಡಬ್ಬಿಯ ತಳದಲ್ಲಿ ಟಿಶ್ಯೂ ಹರಡಿ, ಅದರ ಮೇಲೆ ಸೊಪ್ಪನ್ನು ಇರಿಸಿ. ಮತ್ತೆ ಮೇಲೆ ಟಿಶ್ಯೂ ಪೇಪರ್‌ನಿಂದ ಮುಚ್ಚಿ ಡಬ್ಬಿಯನ್ನ ಗಟ್ಟಿಯಾಗಿ ಮುಚ್ಚಿ ಫ್ರಿಜ್‌ನಲ್ಲಿಡಿ. ಇದು ಬ್ಯಾಕ್ಟೀರಿಯಾಗಳಿಂದ ಸೊಪ್ಪನ್ನು ರಕ್ಷಿಸುತ್ತೆ
Image credits: pixabay
Kannada
ನೀರಿನಲ್ಲಿ ಇಡುವ ವಿಧಾನ
ಬೇರು ಸಹಿತ ಇಡಬೇಕೆಂದರೆ, ಒಂದು ಗ್ಲಾಸ್ ನೀರಿಗೆ ಅದರ ಬೇರುಗಳು ಮುಳುಗುವಂತೆ ಇರಿಸಿ. ನಂತರ ಮೇಲ್ಭಾಗದ ಎಲೆಗಳನ್ನು ಒಂದು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ ಫ್ರಿಜ್‌ನಲ್ಲಿಟ್ಟರೆ ಎಲೆಗಳು ಫ್ರೆಶ್ ಆಗಿರುತ್ತವೆ.
Image credits: Getty
Kannada
ನೆನಪಿರಲಿ
ಮಧ್ಯೆ ಮಧ್ಯೆ ಯಾವುದಾದರೂ ಎಲೆ ಹಳದಿಯಾಗುತ್ತಿದ್ದರೆ ಅದನ್ನು ತೆಗೆಯುತ್ತಿರಿ, ಇಲ್ಲದಿದ್ದರೆ ಆ ಒಂದು ಎಲೆ ಇಡೀ ಕಂತೆಯನ್ನು ಹಾಳು ಮಾಡಬಹುದು.