ಕಪ್ಪಾದ, ತಳ ಸೀದು ಹೋಗಿರುವ ಪಾತ್ರೆಗಳನ್ನು ಮತ್ತೆ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿವೆ ಐದು ಸುಲಭ ಮನೆಮದ್ದುಗಳು. ಈ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಪಾತ್ರೆಗಳು ಪಳಪಳ ಹೊಳೆಯುತ್ತವೆ.
kitchen Apr 15 2026
Author: Sathish Kumar KH Image Credits:Getty
Kannada
ನೈಸರ್ಗಿಕ ವಿಧಾನಗಳನ್ನು ಟ್ರೈ ಮಾಡಿ ನೋಡಿ
ಕೇವಲ ಸೋಪು ಬಳಸಿ ಮಾತ್ರವಲ್ಲ, ಸೋಪು ಇಲ್ಲದೆಯೂ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದಕ್ಕಾಗಿ ಈ ನ್ಯಾಚುರಲ್ ವಿಧಾನಗಳನ್ನು ಬಳಸಿ ನೋಡಿ.
Image credits: Getty
Kannada
ಬಿಸಿ ನೀರು
ಪಾತ್ರೆಗಳನ್ನು ತೊಳೆಯಲು ಬಿಸಿ ನೀರನ್ನು ಬಳಸಿ. ಬಿಸಿ ನೀರು ಕೇವಲ ಕೊಳೆಯನ್ನು ಮಾತ್ರವಲ್ಲ, ಪಾತ್ರೆಗೆ ಅಂಟಿಕೊಂಡಿರುವ ಜಿಡ್ಡು, ಕಲೆ ಮತ್ತು ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.
Image credits: Getty
Kannada
ಬೇಕಿಂಗ್ ಸೋಡಾ
ಪಾತ್ರೆಯನ್ನು ಒಮ್ಮೆ ನೀರಿನಲ್ಲಿ ತೊಳೆದ ನಂತರ, ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ. 10 ನಿಮಿಷ ಹಾಗೆಯೇ ಬಿಟ್ಟು, ನಂತರ ಚೆನ್ನಾಗಿ ಉಜ್ಜಿ ತೊಳೆದರೆ ಕಲೆ ಮತ್ತು ಕೊಳೆ ಮಾಯವಾಗುತ್ತದೆ.
Image credits: Freepik
Kannada
ಉಪ್ಪು ಮತ್ತು ನಿಂಬೆ
ಕರಿ ಹಿಡಿದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ರಸವನ್ನು ಬಳಸಿ ತೊಳೆಯಿರಿ. ಇದು ಅತ್ಯುತ್ತಮ ಕ್ಲೀನರ್ ರೀತಿ ಕೆಲಸ ಮಾಡುತ್ತದೆ.
Image credits: Getty
Kannada
ವಿನೆಗರ್
ಮೂರು ಟೇಬಲ್ ಸ್ಪೂನ್ ವಿನೆಗರ್ ಅನ್ನು ನೀರಿಗೆ ಹಾಕಿ ದ್ರಾವಣ ತಯಾರಿಸಿ. ಇದನ್ನು ಸ್ಪ್ರೇ ಬಾಟಲಿಗೆ ತುಂಬಿ ಪಾತ್ರೆಯ ಮೇಲೆ ಸಿಂಪಡಿಸಿ. ನಂತರ ಸ್ಪಾಂಜ್‌ನಿಂದ ಚೆನ್ನಾಗಿ ಉಜ್ಜಿ ತೊಳೆದರೆ ಸಾಕು.
Image credits: social Media
Kannada
ಅಕ್ಕಿ ತೊಳೆದ ನೀರು/ಗಂಜಿ
ಅಕ್ಕಿ ತೊಳೆದ ನೀರು ಅಥವಾ ಗಂಜಿಯಲ್ಲಿ ಸ್ಪಾಂಜ್ ಅದ್ದಿ, ಅದರಿಂದ ಪಾತ್ರೆಗಳನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಇದರಲ್ಲಿರುವ ಪಿಷ್ಟದ ಅಂಶವು ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.