ಅಕ್ಕಿ ಡಬ್ಬದಲ್ಲಿ ಹುಳುಗಳು ಕಾಣಿಸಿಕೊಂಡರೆ ಅವುಗಳನ್ನು ಸ್ವಚ್ಛ ಮಾಡುವುದು ದೊಡ್ಡ ತಲೆನೋವು. ಆದರೆ ಈ ಸರಳ ಮನೆಮದ್ದುಗಳ ಮೂಲಕ ಅಕ್ಕಿ ಹಾಳಾಗದಂತೆ ಹುಳುಗಳನ್ನು ಓಡಿಸಬಹುದು.
kitchen Apr 12 2026
Author: Ashwini HR Image Credits:Pinterest
Kannada
ಇಂಗಿನ ಪುಡಿ
ಅಕ್ಕಿಗೆ ಸ್ವಲ್ಪ ಇಂಗಿನ ಪುಡಿಯನ್ನು ಹಾಕಿದರೆ, ಅದರ ಘಾಟು ವಾಸನೆಗೆ ಹುಳುಗಳು ಅಕ್ಕಿಯಿಂದ ಪಲಾಯನ ಮಾಡುತ್ತವೆ.
Image credits: Getty
Kannada
ತೇವಾಂಶದ ನಿಯಂತ್ರಣ
ಇಂಗನ್ನು ಅಕ್ಕಿಯ ಡಬ್ಬದಲ್ಲಿಟ್ಟಾಗ ಅಲ್ಪಸ್ವಲ್ಪ ತೇವಾಂಶವನ್ನೂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹುಳುಗಳು ಬೆಳೆಯಲು ತೇವಾಂಶ ಬೇಕೇ ಬೇಕು, ಆದರೆ ಇಂಗು ತಡೆಯುವಲ್ಲಿ ಸಹಕಾರಿ.
Image credits: Social Media
Kannada
ಬಳಸುವ ವಿಧಾನ
ಇಂಗಿನ ಪುಡಿಯನ್ನು ನೇರವಾಗಿ ಅಕ್ಕಿಗೆ ಬೆರೆಸುವ ಬದಲು, ಒಂದು ಸಣ್ಣ ಇಂಗಿನ ಹರಳು ಅಥವಾ ಪುಡಿಯನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಡಬ್ಬದ ಮಧ್ಯದಲ್ಲಿ ಇಡಿ. ಇದರಿಂದ ಅಕ್ಕಿಗೆ ಇಂಗಿನ ರುಚಿ ಅಂಟಿಕೊಳ್ಳುವುದಿಲ್ಲ.
Image credits: Social Media
Kannada
ಬೇವಿನ ಎಲೆ, ಕಲ್ಲುಪ್ಪು
ಅಕ್ಕಿ ಚೀಲದಲ್ಲಿ ಒಣಗಿದ ಬೇವಿನ ಎಲೆಗಳನ್ನೂ ಹಾಕಿಡಬಹುದು. ಅಕ್ಕಿಯ ನಡುವೆ ಸ್ವಲ್ಪ ಕಲ್ಲುಪ್ಪನ್ನು ಹಾಕಿಡುವುದರಿಂದಲೂ ಹುಳುಗಳು ಸುಳಿಯುವುದಿಲ್ಲ.
Image credits: Getty
Kannada
ತೇವಾಂಶ ಬೇಡ
ಅಕ್ಕಿ ಸಂಗ್ರಹಿಸುವ ಡಬ್ಬ ಯಾವಾಗಲೂ ಒಣಗಿರಲಿ, ನೀರು ತಾಕದಂತೆ ನೋಡಿಕೊಳ್ಳಿ. ಈ ವಿಧಾನಗಳನ್ನು ಬಳಸಿದರೆ ನಿಮ್ಮ ಮನೆಯ ಅಕ್ಕಿ ಯಾವಾಗಲೂ ಹುಳು ಮುಕ್ತವಾಗಿ ಮತ್ತು ಸುರಕ್ಷಿತವಾಗಿರುತ್ತದೆ.