Kannada

ಲಿವರ್ ಫ್ಯಾಟ್ ಕರಗಿಸಿ

ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಯಲು ಮತ್ತು ಲಿವರ್ ಆರೋಗ್ಯವನ್ನು ಕಾಪಾಡಲು ನಿಮ್ಮ ಅಡುಗೆಮನೆಯಲ್ಲಿರುವ ಈ ಮಸಾಲೆ ಪದಾರ್ಥಗಳೇ ಸಾಕು.

Kannada

ಜೀರಿಗೆ

ಜೀರಿಗೆ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಿ ಲಿವರ್‌ನಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಅರಿಶಿನ

ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ. ಇದು ಲಿವರ್ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಫ್ಯಾಟಿ ಲಿವರ್ ಸಮಸ್ಯೆಯ ವಿರುದ್ಧ ಹೋರಾಡುತ್ತದೆ.

Image credits: Getty
Kannada

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಲಿವರ್ ಆರೋಗ್ಯವನ್ನು ಸುಧಾರಿಸುವ ಹಲವು ಗುಣಗಳಿವೆ. ಇದನ್ನು ಪ್ರತಿದಿನದ ಡಯಟ್‌ನಲ್ಲಿ ಸೇರಿಸುವುದರಿಂದ ಒಟ್ಟಾರೆ ಆರೋಗ್ಯ ವೃದ್ಧಿಯಾಗುತ್ತದೆ.

Image credits: Getty
Kannada

ಚಕ್ಕೆ

ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ನಿಯಂತ್ರಿಸಲು ಚಕ್ಕೆ ತುಂಬಾ ಉಪಯುಕ್ತ. ಇದು ಲಿವರ್ ಫ್ಯಾಟ್ ಕರಗಿಸಲೂ ನೆರವಾಗುತ್ತದೆ.

Image credits: Getty
Kannada

ಶುಂಠಿ

ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ಲಿವರ್ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Image credits: Getty
Kannada

ಸೇವಿಸುವ ವಿಧಾನ

ಈ ಮಸಾಲೆಗಳನ್ನು ಪುಡಿಮಾಡಿ ಚಹಾದೊಂದಿಗೆ ಬೆರೆಸಿ ಕುಡಿಯಬಹುದು ಅಥವಾ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ ಸೇವಿಸಬಹುದು.

Image credits: Getty

ಉಪ್ಪಿಗೆ ನೀರು ಬಿದ್ರೆ ಇದೊಂದು ಪದಾರ್ಥ ಸೇರಿಸಿ.. ಕೆಲವೇ ಗಂಟೇಲಿ ಡ್ರೈ ಆಗುತ್ತೆ

ಕುಕ್ಕರ್‌ನಿಂದ ನೀರು ಹೊರಬರ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ದೋಸೆ ಹಿಟ್ಟು ಹುಳಿಯಾಗಿದ್ರೆ ಏನೂ ಸೇರಿಸ್ಬೇಡಿ, ಈ ಹಳೆ ವಿಧಾನ ಫಾಲೋ ಮಾಡಿ

ಈ ಬಾಕ್ಸ್‌ನಲ್ಲಿಟ್ರೆ ಸಾಕು ಕೊತ್ತಂಬರಿ-ಪುದೀನಾ ಒಂದು ವಾರ ಫ್ರೆಶ್ ಆಗಿರುತ್ತೆ