ಹಲ್ಲಿಗಳು ಮನೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜೀವಿ. ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಅವು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಮನೆಯಲ್ಲಿನ ಹಲ್ಲಿಗಳ ಕಾಟ ಶಾಶ್ವತ ನಿವಾರಿಸಲು ಈ ಸುಲಭ ಉಪಾಯ ಪಾಲಿಸಿ.
kitchen Mar 30 2026
Author: Sathish Kumar KH Image Credits:Getty
Kannada
ಚೆಂಡು ಹೂವು
ಕೀಟಗಳನ್ನು ದೂರವಿಡಲು ಮನೆಯಲ್ಲಿ ಚೆಂಡು ಹೂವಿನ ಗಿಡವನ್ನು ಬೆಳೆಸುವುದು ಉತ್ತಮ. ಇದರ ಘಾಟು ವಾಸನೆಯನ್ನು ಹಲ್ಲಿಗಳಿಗೆ ಸಹಿಸಲು ಸಾಧ್ಯವಾಗುವುದಿಲ್ಲ.
Image credits: pinterest
Kannada
ರೋಸ್ಮರಿ
ರೋಸ್ಮರಿ ಅನೇಕ ಪ್ರಯೋಜನಗಳನ್ನು ಹೊಂದಿರುವ ಔಷಧೀಯ ಸಸ್ಯ. ಇದರ ತೀಕ್ಷ್ಣವಾದ ವಾಸನೆಯನ್ನು ಹಲ್ಲಿಗಳು ತಡೆದುಕೊಳ್ಳಲಾರವು.
Image credits: Getty
Kannada
ಲ್ಯಾವೆಂಡರ್
ಲ್ಯಾವೆಂಡರ್ ಒಂದು ಸುಂದರವಾದ ಸುವಾಸನೆಯನ್ನು ಹರಡುವ ಸಸ್ಯ. ಆದರೆ, ಇದರ ಗಾಢವಾದ ಪರಿಮಳ ಹಲ್ಲಿಗಳಿಗೆ ಇಷ್ಟವಾಗುವುದಿಲ್ಲ.
Image credits: Getty
Kannada
ಯೂಕಲಿಪ್ಟಸ್
ಯೂಕಲಿಪ್ಟಸ್ ಅಥವಾ ನೀಲಗಿರಿ ಸಸ್ಯವು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದರ ಕಟುವಾದ ವಾಸನೆಯನ್ನು ಹಲ್ಲಿಗಳು ಸಹಿಸುವುದಿಲ್ಲ.
Image credits: pexels
Kannada
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಸಲ್ಫರ್ ಅಂಶವಿದೆ. ಇದರ ಘಾಟು ವಾಸನೆಯನ್ನು ಹಲ್ಲಿಗಳಿಂದ ತಡೆದುಕೊಳ್ಳಲು ಸಾಧ್ಯವಿಲ್ಲ.