ಗಾಂಧಿ ಕುಟುಂಬ ಸೇರಿಕೊಳ್ತಿರೋ Aviva Baig ಯಾರು? ಹಿನ್ನಲೆ ಏನು?
india-news Dec 30 2025
Author: Padmashree Bhat Image Credits:aviva baig instagram
Kannada
ಮದುವೆ
ಕಾಂಗೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಮಗ ರೈಹಾನ್ ವಾದ್ರಾ ಮದುವೆಯಾಗುತ್ತಿದ್ದಾರೆ.
Image credits: aviva baig instagram
Kannada
ಹುಡುಗಿ ಯಾರು?
ಅವಿವಾ ಬೇಗ್ ಎನ್ನುವವರ ಜೊತೆ ರೈಹಾನ್ ವಾದ್ರಾ ಮದುವೆ ಆಗುತ್ತಿದ್ದಾರೆ. ಏಳು ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದೆ.
Image credits: aviva baig instagram
Kannada
ಶಿಕ್ಷಣ
ಅವಿವಾ ಬೇಗ್ ಕುಟುಂಬಸ್ಥರು ದೆಹಲಿಯಲ್ಲಿ ನೆಲೆಸಿದ್ದಾರೆ. ಅವಿವಾ ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ಹ್ಯುಮಾನಿಟೀಸ್ ವಿಭಾಗ, ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಜರ್ನಲಿಸಂ, ಕಮ್ಯುನಿಕೇಶನ್ ಪದವಿ ಪಡೆದಿದ್ದಾರೆ.
Image credits: aviva baig instagram
Kannada
ಲವ್?
ಇನ್‌ಸ್ಟಾಗ್ರಾಮ್‌ನಲ್ಲಿ ಅವಿವಾ ಅವರು ರೈಹಾನ್ ಜೊತೆಗಿನ ಪ್ರೀತಿ ವಿಷಯವನ್ನು ಅಧಿಕೃತಪಡಿಸಿದ್ದಾರೆ.
Image credits: aviva baig instagram
Kannada
ವೃತ್ತಿ ಏನು?
ಅವಿವಾ ಬೇಗ್ ಅವರು ದೆಹಲಿ ಮೂಲದ ಫೋಟೋಗ್ರಾಫರ್.
Image credits: aviva baig instagram
Kannada
ನಿರ್ಮಾಪಕಿ
'ಅಟೆಲಿಯರ್ 11' (Atelier 11) ಎಂಬ ಫೋಟೋಗ್ರಾಫಿಕ್ ಸ್ಟುಡಿಯೋ,ಪ್ರೊಡಕ್ಷನ್ ಕಂಪನಿಯ ಸಹ-ಸ್ಥಾಪಕಿ ಕೂಡ ಹೌದು. ಈ ಸಂಸ್ಥೆಯು ದೇಶದಾದ್ಯಂತ ವಿವಿಧ ಏಜೆನ್ಸಿಗಳು, ಬ್ರ್ಯಾಂಡ್, ಗ್ರಾಹಕರ ಜೊತೆ ಕೆಲಸ ಮಾಡುತ್ತದೆ.
Image credits: aviva baig instagram
Kannada
ಬೇರೆ ಕೆಲಸ?
ಇವರು ಪ್ಲಸ್‌ರೈಮ್ನ್‌ನಲ್ಲಿ (PlusRymn) ಫ್ರೀಲ್ಯಾನ್ಸ್ ಪ್ರೊಡ್ಯೂಸರ್ ಆಗಿ, ಪ್ರೊಪಗಾಂಡಾದಲ್ಲಿ (PROPAGANDA) ಜೂನಿಯರ್ ಪ್ರಾಜೆಕ್ಟ್ ಮ್ಯಾನೇಜರ್, ಆರ್ಟ್ ಚೈನ್ ಇಂಡಿಯಾದಲ್ಲಿ ಮಾರ್ಕೆಟಿಂಗ್ ಇಂಟರ್ನ್ ಆಗಿದ್ದರು.
Image credits: aviva baig instagram
Kannada
ಪತ್ರಿಕೋದ್ಯಮದ ನಂಟು
ಐ-ಪಾರ್ಲಿಮೆಂಟ್‌ನ 'ದ ಜರ್ನಲ್'ನ ಮುಖ್ಯ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವರ್ವ್ ಮ್ಯಾಗಜೀನ್ ಇಂಡಿಯಾ, ಕ್ರಿಯೇಟಿವ್ ಇಮೇಜ್ ಮ್ಯಾಗಜೀನ್‌ಗಳಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ.
Image credits: aviva baig instagram
Kannada
ನಿಶ್ಚಿತಾರ್ಥ
ಈಗಾಗಲೇ ನಿಶ್ಚಿತಾರ್ಥ ಆಗಿದೆಯಂತೆ. ಆದರೆ ಈ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿಲ್ಲ.