ಬಾಡಿ ಬಿಲ್ಡ್ ಮಾಡುವ ಕ್ರೇಜ್ ಯುವಜನರಲ್ಲಿ ಹೆಚ್ಚಾಗಿ ಕಂಡು ಬರುತ್ತೆ. ಅದಕ್ಕಾಗಿ ಜಿಮ್, ಡಯಟ್ ಎಲ್ಲವನ್ನೂ ಮಾಡ್ತಾರೆ. ಆದರೆ ಬಾಡಿ ಬಿಲ್ಡರ್ ಆಗಿರುವ 90ರ ಅಜ್ಜನನ್ನು ನೋಡಿದ್ದೀರಾ?
health-life Jul 29 2023
Author: Suvarna News Image Credits:social media
Kannada
ಪ್ರಪಂಚದ ಹಿರಿಯ ಬಾಡಿ ಬಿಲ್ಡರ್
ಇವರೇ ನೋಡಿ ಪ್ರಪಂಚದ ಅತ್ಯಂತ ಹಿರಿಯ ಬಾಡಿ ಬಿಲ್ಡರ್, ಇವರಿಗೆ 90 ವಯಸ್ಸಾಗಿದ್ದು, ಇಂದಿಗೂ ಸಹ 18 ರ ಯುವಕರಂತೆ ಬಾಡಿ ಬಿಲ್ಡ್ ಮಾಡ್ತಾರೆ.
Image credits: social media
Kannada
ಯಾರಿವರು?
ಅತ್ಯಂತ ಹಿರಿಯ ಈ ಬಾಡಿ ಬಿಲ್ಡರ್ ಹೆಸರು ಜಿಮ್ ಅರಿಂಗ್ಟನ್. ಇವರು ಅಮೇರಿಕಾದವರಾಗಿದ್ದು, ಈ ಇಳಿವಯಸ್ಸಿನಲ್ಲೂ, ಒಂದಿಷ್ಟು ಉತ್ಸಾಹ ಬತ್ತದೆ ಲವಲವಿಕೆಯಿಂದ ಬಾಡಿ ಬಿಲ್ಡ್ ಮಾಡುತ್ತಾರೆ.
Image credits: social media
Kannada
83ನೇ ವಯಸ್ಸಲ್ಲಿ ಗಿನ್ನಿಸ್ ರೆಕಾರ್ಡ್
ಇವರು ತಮ್ಮ 83ನೇ ವಯಸ್ಸಿನಲ್ಲಿಯೇ ಪ್ರಪಂಚದ ಅತ್ಯಂತ ಹಿರಿಯ ಬಾಡಿ ಬಿಲ್ಡರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಸ್ ವರ್ಲ್ದ್ ರೆಕಾರ್ಡ್ ಮಾಡಿದ್ದರು.
Image credits: social media
Kannada
13ನೇ ವಯಸ್ಸಿನಿಂದಲೇ ಬಾಡಿ ಬಿಲ್ಡಿಂಗ್
ಜಿಮ್ 13 ವರ್ಷದವರಿದ್ದಾಗ ಬಾಡಿಬಿಲ್ಡಿಂಗ್ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಅವರು ಬಾಡಿಬಿಲ್ಡಿಂಗ್ ಮ್ಯಾಗಝಿನ್ ಪೋಸ್ಟರ್ ನೋಡಿದ ಬಳಿಕ ತಾನು ಬಾಡಿ ಬಿಲ್ಡ್ ಮಾಡಬೇಕೆಂದು ನಿರ್ಧರಿಸಿದರಂತೆ.
Image credits: social media
Kannada
ಇಂದಿಗೂ ಸ್ಪರ್ಧೆಗಳಲ್ಲಿ ಭಾಗಿ
90 ನೇ ವಯಸ್ಸಿನಲ್ಲಿ, ಜಿಮ್ ಇನ್ನೂ ವೇಗವಾಗಿ ಓಡುತ್ತಿದ್ದಾರೆ ಮತ್ತು ದೇಹದಾರ್ಢ್ಯ ಸ್ಪರ್ಧೆಗಳನ್ನು ಗೆಲ್ಲುವತ್ತ ಸಾಗುತ್ತಿದ್ದಾರೆ. ಅವರ ಗೆಲುವಿನ ಪಟ್ಟಿ ಕೂಡ ದೊಡ್ಡದಾಗುತ್ತಿದೆ.
Image credits: social media
Kannada
ಮುಂದುವರೆದ ಗೆಲುವಿನ ಓಟ
ನೆವಾಡಾದ ರೆನೊದಲ್ಲಿ ಇತ್ತೀಚೆಗೆ ನಡೆದ ಐಎಫ್ಬಿಬಿ ವೃತ್ತಿಪರ ಲೀಗ್ ಈವೆಂಟ್ ನಲ್ಲಿ ಜಿಮ್ 70 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ 3ನೇ ಸ್ಥಾನ ಮತ್ತು 80 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.