Health

ವಿಷಕಾರಿ ಸಸ್ಯಗಳು

ಜಗತ್ತಿನಲ್ಲಿರುವ ಕೆಲವೊಂದು ಸಸ್ಯಗಳು ಮನುಷ್ಯನ ಸಾವಿಗೂ ಕಾರಣವಾಗಬಲ್ಲದು. ಅಪ್ಪಿತಪ್ಪಿಯೂ ಇವನ್ನು ಮುಟ್ಟಿದ್ರೆ ಸಾಯೋದು ಖಚಿತ. ಅಂತ ಸಸ್ಯಗಳು ಯಾವುವು?

Image credits: freepik

ಒಲಿಯಾಂಡರ್‌

ಈ ಸಸ್ಯವು ತುಂಬಾ ವಿಷಕಾರಿಯಾಗಿದೆ. ಇದನ್ನು ನುಂಗಿದರೆ ಹೃದಯಾಘಾತದಂತಹಾ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

Image credits: Wikipedia

ಕ್ಯಾಸ್ಟರ್ ಬೀನ್

ಕ್ಯಾಸ್ಟರ್‌ ಬೀನ್‌ ಬೀಜಗಳು ರಿಸಿನ್‌ನ್ನು ಹೊಂದಿರುತ್ತದೆ. ಹೀಗಾಗಿ ಇವು ವಿಷಕಾರಿಯಾಗಿವೆ. ಸಣ್ಣ ಪ್ರಮಾಣದಲ್ಲಿ ಇವನ್ನು ತಿಂದರೂ ಸಾಕು ಅಪಾಯಕಾರಿಯಾಗಿದೆ.

Image credits: Wikipedia

ನೈಟ್‌ ಶೇಡ್

ನೈಟ್‌ಶೇಡ್‌ ಸಸ್ಯದ ಎಲ್ಲಾ ಭಾಗಗಳು ವಿಷಕಾರಿ ಆಲ್ಕಲಾಯ್ಡ್‌ಗಳನ್ನು ಒಳಗೊಂಡಿರುತ್ತವೆ. ಇವುಗಳ ಸೇವನೆ ಮಾನಸಿಕ ಸ್ಥಿಮಿತ ತಪ್ಪಲು ಕಾರಣವಾಗುತ್ತದೆ. 

Image credits: Wikipedia

ಡಾಟುರ

ಡಾಟುರಾವನ್ನು ಜೆಮ್ಸನ್‌ವೀಡ್ ಎಂದು ಸಹ ಕರೆಯುತ್ತಾರೆ. ಇದರಲ್ಲಿರುವ ಟ್ರೋಪೇನ್‌ ಹಾಗೂ ಆಲ್ಕಲಾಯ್ಡ್‌ ಸಾವಿಗೂ ಕಾರಣವಾಗುತ್ತದೆ.

Image credits: Wikipedia

ವಾಟರ್‌ ಹೆಮ್ಲಾಕ್‌

ನೀರಿನ ಹೆಮ್ಲಾಕ್‌ ಅತ್ಯಂತ ವಿಷಕಾರಿ ಸಸ್ಯಗಳಲ್ಲಿ ಒಂದಾಗಿದೆ. ಇದರ ಬೇರನ್ನು ತಿನ್ನುವುದು ಜೀವವನ್ನೇ ತೆಗೆಯಬಹುದು.

Image credits: Wikipedia

ಫಾಕ್ಸ್‌ಗ್ಲೋವ್‌

ಫಾಕ್ಸ್‌ಗ್ಲೋವ್‌ ಹೃದಯ ಗ್ಲೈಕೋಸೈಡ್‌ಗಳನ್ನು ಹೊಂದಿದ್ದು, ಇದು ಹೃದಯಾಘಾತಕ್ಕೂ ಕಾರಣವಾಗಬಹುದು.

Image credits: Wikipedia

ಅಕೋನಿಟಮ್‌

ಸನ್ಯಾಸಿ ಸಸ್ಯಗಳು ಅಥವಾ ಅಕೋನಿಟಮ್‌ ಎಂದು ಕರೆಯಲ್ಪಡುವ ಸಸ್ಯ ತುಂಬಾ ವಿಷಕಾರಿ. ಇದು ಹೃದಯ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.

Image credits: Wikipedia
Find Next One