ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂಜಾ ಕೋಣೆ ಸುಖ-ಶಾಂತಿಯ ಮೂಲ. ಆದರೆ ಕೆಲವು ಜಾಗಗಳಲ್ಲಿ ಪೂಜಾ ಕೋಣೆ ನಿರ್ಮಿಸುವುದು ಅಶುಭ ಫಲಗಳನ್ನು ನೀಡುತ್ತದೆ.
vaastu Aug 30 2026
Author: Ashwini HR Image Credits:pinterest
Kannada
ಬೆಡ್‌ರೂಮ್‌ನಲ್ಲಿ ಪೂಜೆ ಬೇಡ!
ಮಲಗುವ ಕೋಣೆ ಅಥವಾ ಬೆಡ್‌ರೂಮ್‌ನಲ್ಲಿ ದೇವರ ಫೋಟೋ ಅಥವಾ ಪೂಜೆ ಮನೆ ಇರಬಾರದು. ಇದು ಮನೆಯ ಸಕಾರಾತ್ಮಕ ಶಕ್ತಿಗೆ ಅಡ್ಡಿಪಡಿಸುತ್ತದೆ ಮತ್ತು ಪೂಜೆಯ ಪೂರ್ಣ ಫಲ ಸಿಗದಂತೆ ಮಾಡುತ್ತದೆ.
Image credits: Getty
Kannada
ಮೆಟ್ಟಿಲುಗಳ ಕೆಳಗೆ ಅಶುಭ
ಮನೆಯಲ್ಲಿ ಜಾಗವಿಲ್ಲ ಎಂದು ಮೆಟ್ಟಿಲುಗಳ ಕೆಳಗಿರುವ ಜಾಗದಲ್ಲಿ ಪೂಜೆ ಮನೆ ನಿರ್ಮಿಸಬೇಡಿ. ಇದು ಮನೆಯಲ್ಲಿ ನಿರಂತರ ಜಗಳ, ಮಾನಸಿಕ ಕಿರಿಕಿರಿ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.
Image credits: pinterest
Kannada
ಬಾತ್‌ರೂಮ್ ಹತ್ತಿರ ಬೇಡವೇ ಬೇಡ!
ಶೌಚಾಲಯ ಅಥವಾ ಸ್ನಾನಗೃಹದ ಪಕ್ಕದಲ್ಲಿ ಅಥವಾ ಹತ್ತಿರದಲ್ಲಿ ದೇವರ ಕೋಣೆ ಇರಬಾರದು. ಹೀಗೆ ಮಾಡುವುದರಿಂದ ಮನೆಯ ಮುಖ್ಯಸ್ಥರಿಗೆ ನಿರಂತರ ಕಷ್ಟಗಳು ಎದುರಾಗುತ್ತವೆ ಮತ್ತು ಮನೆಯ ಶಾಂತಿ ಕೆಡುತ್ತದೆ.
Image credits: pinterest ai modified
Kannada
ಈಶಾನ್ಯ ದಿಕ್ಕು ಶ್ರೇಯಸ್ಕರ
ವಾಸ್ತು ಪ್ರಕಾರ ದೇವರ ಕೋಣೆಯು ಯಾವಾಗಲೂ ಈಶಾನ್ಯ (North-East) ದಿಕ್ಕಿನಲ್ಲಿ ಇರುವುದು ಅತ್ಯಂತ ಶುಭ. ಇದು ಮನೆಗೆ ಸಮೃದ್ಧಿ ಮತ್ತು ನೆಮ್ಮದಿಯನ್ನು ತರುತ್ತದೆ.
Image credits: Instagram
Kannada
ಗಮನಿಸಿ
ಈ ಮಾಹಿತಿಯು ವಾಸ್ತು ಶಾಸ್ತ್ರದ ನಂಬಿಕೆಗಳ ಮೇಲೆ ಆಧಾರಿತವಾಗಿದೆ. ಪೂಜೆ ಕೋಣೆ ನಿರ್ಮಿಸುವ ಮೊದಲು ವಾಸ್ತು ತಜ್ಞರ ಸಲಹೆ ಪಡೆಯುವುದು ಉತ್ತಮ.