Kannada

ರಕ್ತಸಂಚಾರ ಹೆಚ್ಚಿಸಲು

ನಮ್ಮ ರಕ್ತನಾಳಗಳ ಆರೋಗ್ಯವು ನಾವು ಪ್ರತಿದಿನ ಅನುಸರಿಸುವ ಜೀವನಶೈಲಿಯ ಮೇಲೆ ನಿಂತಿದೆ. ದೇಹದಲ್ಲಿ ರಕ್ತಸಂಚಾರ ಸುಧಾರಿಸಲು ಈ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ.

Kannada

ಫ್ಯಾಟಿ ಫಿಶ್

ಸಾಲ್ಮನ್, ಟ್ಯೂನ ಮತ್ತು ಬೂತಾಯಿ (ಸಾರ್ಡೀನ್) ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ರಕ್ತನಾಳಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

Image credits: Getty
Kannada

ಬೆರ್ರಿಗಳು

ಬೆರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್ ಎಂಬ ಅಂಶವಿರುತ್ತದೆ. ಇದು ದೇಹದಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸಲು ಅದ್ಭುತವಾಗಿ ಸಹಾಯ ಮಾಡುತ್ತದೆ.

Image credits: Getty
Kannada

ತರಕಾರಿಗಳು

ಬೀಟ್‌ರೂಟ್ ಮತ್ತು ಪಾಲಕ್ ಸೊಪ್ಪಿನಂತಹ ತರಕಾರಿಗಳಲ್ಲಿ ಪೋಷಕಾಂಶಗಳು ಹಾಗೂ ಡಯೆಟರಿ ನೈಟ್ರೇಟ್ ಹೆಚ್ಚಾಗಿರುತ್ತದೆ. ಇದು ರಕ್ತದ ಹರಿವನ್ನು ಸುಧಾರಿಸಲು ನೆರವಾಗುತ್ತದೆ.

Image credits: Getty
Kannada

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಪ್ರಮುಖ ಅಂಶವಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು, ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ.

Image credits: Getty
Kannada

ಹಣ್ಣುಗಳು

ಸಿಟ್ರಸ್ ಹಣ್ಣುಗಳು ಮತ್ತು ದಾಳಿಂಬೆಯಲ್ಲಿ ಫ್ಲೇವನಾಯ್ಡ್‌ಗಳು ಹೇರಳವಾಗಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ರಕ್ತಸಂಚಾರ ಸುಧಾರಿಸುತ್ತದೆ.

Image credits: Getty
Kannada

ವಾಲ್‌ನಟ್

ಆಲಿವ್ ಎಣ್ಣೆ ಮತ್ತು ವಾಲ್‌ನಟ್‌ನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ರಕ್ತಸಂಚಾರ ಉತ್ತಮವಾಗುತ್ತದೆ.

Image credits: Getty

ಸಕ್ಕರೆ ತಿನ್ನುವ ಬಯಕೆ ಕಡಿಮೆ ಮಾಡಲು ಈ 7 ಫುಡ್ಸ್ ಬಳಸಿ

Sweet Potato Benefits: ಸಿಹಿಗೆಣಸು ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು

ನೆನೆಸಿದ ಬಾದಾಮಿ ತಿಂದರೆ ಈ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!

ಥೈರಾಯ್ಡ್ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ