ಅತಿಯಾಗಿ ಸಕ್ಕರೆ ಅಂಶವಿರುವ ಆಹಾರಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಿಹಿ ತಿನ್ನುವ ಬಯಕೆಯನ್ನು ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಿ.
ಮೊಟ್ಟೆ, ಮೊಸರು ಮತ್ತು ಪನೀರ್‌ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುತ್ತದೆ. ಇವುಗಳನ್ನು ತಿಂದರೆ ಹೊಟ್ಟೆ ತುಂಬಿದಂತಿರುತ್ತದೆ ಮತ್ತು ಸಿಹಿ ತಿನ್ನುವ ಬಯಕೆ ಕಡಿಮೆಯಾಗುತ್ತದೆ.
ಗ್ರೀಕ್ ಯೋಗರ್ಟ್‌ನಲ್ಲಿ ಪ್ರೋಟೀನ್ ಅಂಶ ಹೇರಳವಾಗಿರುತ್ತದೆ. ಇದನ್ನು ತಾಜಾ ಹಣ್ಣುಗಳ ಜೊತೆ ಸೇರಿಸಿ ತಿಂದರೆ ಹೊಟ್ಟೆ ಬೇಗ ತುಂಬುತ್ತದೆ.
ಓಟ್ಸ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಸಿಹಿ ತಿನ್ನುವ ಆಸೆಯನ್ನೂ ಇದು ಕಡಿಮೆ ಮಾಡುತ್ತದೆ.
ಬೀನ್ಸ್ ಮತ್ತು ಕಡಲೆಯಂತಹ ಕಾಳುಗಳಲ್ಲಿ ಫೈಬರ್ ಹಾಗೂ ಪ್ರೋಟೀನ್ ಹೆಚ್ಚಾಗಿರುತ್ತದೆ. ಇವುಗಳನ್ನು ಡಯಟ್‌ನಲ್ಲಿ ಸೇರಿಸಿದರೆ ಸಕ್ಕರೆ ತಿನ್ನುವ ಬಯಕೆ ದೂರವಾಗುತ್ತದೆ.
ಸಾಮಾನ್ಯ ಚಾಕೊಲೇಟ್‌ಗಿಂತ ಡಾರ್ಕ್ ಚಾಕೊಲೇಟ್‌ನಲ್ಲಿ ಸಿಹಿ ಅಂಶ ಕಡಿಮೆ ಇರುತ್ತದೆ. ಇದನ್ನು ತಿಂದರೆ ಅತಿಯಾಗಿ ಸಿಹಿ ತಿನ್ನುವ ಅಭ್ಯಾಸಕ್ಕೆ ಬ್ರೇಕ್ ಬೀಳುತ್ತದೆ.
ಬಾದಾಮಿ, ವಾಲ್‌ನಟ್, ಚಿಯಾ ಸೀಡ್ಸ್ ಮತ್ತು ಸೂರ್ಯಕಾಂತಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಪ್ರೋಟೀನ್ ಇರುತ್ತದೆ. ಇದು ಸಿಹಿ ತಿನ್ನುವ ಆಸೆಯನ್ನು ತಡೆಯುತ್ತದೆ.
ಕ್ಯಾರೆಟ್, ಸೌತೆಕಾಯಿ ಮತ್ತು ಸಿಹಿ ಗೆಣಸಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇವು ಹಸಿವನ್ನು ಕಡಿಮೆ ಮಾಡುವುದರ ಜೊತೆಗೆ ಸಿಹಿ ತಿನ್ನುವ ಬಯಕೆಯನ್ನೂ ಇಲ್ಲವಾಗಿಸುತ್ತವೆ.
Sweet Potato Benefits: ಸಿಹಿಗೆಣಸು ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
ನೆನೆಸಿದ ಬಾದಾಮಿ ತಿಂದರೆ ಈ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!
ಥೈರಾಯ್ಡ್ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಪ್ರತಿದಿನ ಅಡುಗೆಯಲ್ಲಿ 'ಚಕ್ಕೆ' ಬಳಕೆಯಿಂದ ಈ 7 ಅದ್ಭುತ ಲಾಭಗಳು ಸಿಗುತ್ತವೆ!