ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಬೇಕಾ? ತೆಂಗಿನ ಹಾಲಿನ ಈ ಟ್ರಿಕ್ ಬಳಸಿ!
health-life Sep 29 2026
Author: Govindaraj S Image Credits:Pinterest
Kannada
ಕೂದಲಿನ ಆರೋಗ್ಯಕ್ಕೆ ಬೆಸ್ಟ್
ತೆಂಗಿನ ಹಾಲಿನಲ್ಲಿ ಕೊಬ್ಬಿನಾಂಶ, ವಿಟಮಿನ್ ಹಾಗೂ ಖನಿಜಾಂಶಗಳು ಹೇರಳವಾಗಿವೆ. ಇವು ಕೂದಲಿಗೆ ಅಗತ್ಯವಾದ ತೇವಾಂಶ ಒದಗಿಸಿ, ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತವೆ.
Image credits: Pinterest
Kannada
ತೆಂಗಿನ ಹಾಲಿನ ಮಸಾಜ್
ಕಾಲು ಕಪ್ ತೆಂಗಿನ ಹಾಲನ್ನು ಸ್ವಲ್ಪ ಬಿಸಿ ಮಾಡಿ. ಇದು ಉಗುರುಬೆಚ್ಚಗಿರುವಾಗ ತಲೆಬುರುಡೆಗೆ ಹಚ್ಚಿ 10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಇದು ನ್ಯಾಚುರಲ್ ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.
Image credits: Pinterest
Kannada
ವಾರಕ್ಕೊಮ್ಮೆ ಹೀಗೆ ಮಾಡಿ
ಮಸಾಜ್ ಮಾಡಿದ 20 ನಿಮಿಷಗಳ ಬಳಿಕ ಮೈಲ್ಡ್ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಬೆಸ್ಟ್ ರಿಸಲ್ಟ್ ಬೇಕು ಅಂದ್ರೆ ವಾರಕ್ಕೊಮ್ಮೆ ಈ ರೀತಿ ಮಾಡಬಹುದು.
Image credits: Pinterest
Kannada
ನಿಂಬೆರಸ ಮತ್ತು ತೆಂಗಿನ ಹಾಲು
ಒಂದು ಬೌಲ್‌ನಲ್ಲಿ 4 ಚಮಚ ತೆಂಗಿನ ಹಾಲು ತೆಗೆದುಕೊಂಡು, ಅದಕ್ಕೆ 2 ಚಮಚ ನಿಂಬೆರಸ ಮಿಕ್ಸ್ ಮಾಡಿ. ಈ ಮಿಶ್ರಣವನ್ನು 4 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬೇಕು.
Image credits: Freepik
Kannada
50 ನಿಮಿಷಗಳ ಕಾಲ...
ಫ್ರಿಡ್ಜ್‌ನಿಂದ ತೆಗೆದ ಮಿಶ್ರಣವನ್ನು ತಲೆಗೆ ಹಚ್ಚಿ 45 ರಿಂದ 50 ನಿಮಿಷಗಳ ಕಾಲ ಒಣಗಲು ಬಿಡಿ. ಆಮೇಲೆ ಮೈಲ್ಡ್ ಶಾಂಪೂವಿನಿಂದ ವಾಶ್ ಮಾಡಿ. ಈ ಹೇರ್ ಪ್ಯಾಕ್ ಕೂದಲನ್ನು ಆರೋಗ್ಯವಾಗಿಡುತ್ತದೆ.
Image credits: Freepik
Kannada
ಅಲೋವೆರಾ ಮತ್ತು ತೆಂಗಿನ ಹಾಲು
ಒಂದು ಬೌಲ್‌ನಲ್ಲಿ 3 ಚಮಚ ತೆಂಗಿನ ಹಾಲು, 1 ಚಮಚ ಅಲೋವೆರಾ ಜೆಲ್ ಹಾಗೂ ಒಂದು ಹಿಡಿ ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಿರಿ.
Image credits: Freepik
Kannada
ಇದನ್ನ ಮರೆಯಬೇಡಿ
ಮೊದಲ ಬಾರಿಗೆ ತೆಂಗಿನ ಹಾಲು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡುವುದು ಒಳ್ಳೆಯದು. ಒಂದು ವೇಳೆ ತುರಿಕೆ ಅಥವಾ ಕೆಂಪಾಗುವಿಕೆ ಕಂಡುಬಂದರೆ ತಕ್ಷಣವೇ ಬಳಸುವುದನ್ನು ನಿಲ್ಲಿಸಿ.