Kannada

ಮೊಟ್ಟೆ ಪೋಷಕಾಂಶಗಳ ಆಗರ

ಮೊಟ್ಟೆಯಲ್ಲಿ ಆರೋಗ್ಯಕರ ಕೊಬ್ಬು, ಕೋಲಿನ್, ವಿಟಮಿನ್ ಡಿ ಮತ್ತು ಸೆಲೆನಿಯಂನಂತಹ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ.

Kannada

ಮೊಟ್ಟೆಯಲ್ಲಿ ಕೋಲಿನ್ ಹೇರಳವಾಗಿದೆ

ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ ಮತ್ತು ಜ್ಞಾನಗ್ರಹಣಕ್ಕೆ ಕೋಲಿನ್ ಅತ್ಯಗತ್ಯ. ಈ ಪೋಷಕಾಂಶ ಮೊಟ್ಟೆಯಲ್ಲಿ ಹೇರಳವಾಗಿ ಸಿಗುತ್ತದೆ.

Image credits: Our own
Kannada

ರಕ್ತಹೀನತೆ ತಡೆಯುತ್ತೆ ಮೊಟ್ಟೆಯ ಹಳದಿ ಭಾಗ

ಮೊಟ್ಟೆಯ ಹಳದಿ ಭಾಗದಲ್ಲಿ ಕಬ್ಬಿಣ ಮತ್ತು ಸತುವು ಹೆಚ್ಚಿನ ಪ್ರಮಾಣದಲ್ಲಿವೆ. ಹೀಗಾಗಿ ಇದು ರಕ್ತಹೀನತೆ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

Image credits: Social Media
Kannada

ರೋಗನಿರೋಧಕ ಶಕ್ತಿ ಹೆಚ್ಚಳ

ಮೊಟ್ಟೆಯಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕೆಲವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ರೋಗಾಣುಗಳ ವಿರುದ್ಧ ಹೋರಾಡುತ್ತವೆ.

Image credits: Getty
Kannada

ಕಣ್ಣಿನ ಆರೋಗ್ಯಕ್ಕೆ ಉತ್ತಮ

ಮೊಟ್ಟೆಯ ಹಳದಿ ಭಾಗದಲ್ಲಿ ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಎಂಬ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡುತ್ತವೆ.

Image credits: social media
Kannada

ತೂಕ ನಿಯಂತ್ರಣಕ್ಕೆ ಸಹಕಾರಿ

ಮೊಟ್ಟೆ ತಿಂದರೆ ಪದೇ ಪದೇ ಹಸಿವಾಗುವುದನ್ನು ತಡೆಯಬಹುದು. ಇದರಿಂದ ದಿನವಿಡೀ ಸೇವಿಸುವ ಕ್ಯಾಲೋರಿ ಪ್ರಮಾಣ ಕಡಿಮೆಯಾಗಿ, ತೂಕ ನಿಯಂತ್ರಣದಲ್ಲಿರುತ್ತದೆ.

Image credits: social media
Kannada

ಹೃದಯದ ಆರೋಗ್ಯ ಸುಧಾರಿಸುತ್ತೆ

ಪ್ರತಿದಿನ ಒಂದು ಮೊಟ್ಟೆ ತಿಂದರೆ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ.

Image credits: pexels

ಸಿಕ್ಕಾಪಟ್ಟೆ ಬಿಸಿಲು, ಬಾಡಿ ಹೀಟ್‌ ಕಡಿಮೆ ಮಾಡೋ ಪಾನೀಯಗಳಿವು; ದುಡ್ಡು ಖರ್ಚಾಗಲ್ಲ

ಊಟದ ನಂತರ ಸೋಂಪು ಜಗಿಯುವುದರಿಂದ ಸಿಗುವ ಆರೋಗ್ಯ ಲಾಭಗಳಿವು!

ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಾ? ಹಾಗಾದ್ರೆ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ