ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ಖರ್ಚಿಲ್ಲದೆ ನೆಮ್ಮದಿಯ ನಿದ್ರೆ ಪಡೆಯಲು ನಮ್ಮ ಪೂರ್ವಜರು ತಿಳಿಸಿದ ಒಂದು ಅದ್ಭುತ ಮಾರ್ಗವೆಂದರೆ ಪಾದಗಳ ಶುಚಿಗೊಳಿಸುವಿಕೆ.
health-life Apr 02 2026
Author: Ashwini HR Image Credits:Getty
Kannada
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ
ಹೌದು. ಆಯುರ್ವೇದ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಮುನ್ನ ಕಾಲುಗಳನ್ನು ತೊಳೆದುಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Image credits: Social Media
Kannada
ದೇಹದ ಉಷ್ಣತೆ ಕಡಿಮೆಯಾಗುತ್ತೆ
ಮಲಗುವ ಮುನ್ನ ಕಾಲುಗಳನ್ನು ತಣ್ಣೀರಿನಿಂದ ತೊಳೆದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದು ಮೆದುಳಿಗೆ ನಿದ್ರಿಸುವ ಸಮಯವಾಗಿದೆ ಎಂಬ ಸಂಕೇತವನ್ನು ನೀಡಿ, ಬೇಗನೆ ಗಾಢ ನಿದ್ರೆ ಹತ್ತುವಂತೆ ಮಾಡುತ್ತದೆ.
Image credits: Getty
Kannada
ಒತ್ತಡದಿಂದ ಮುಕ್ತಿ
ಪಾದಗಳಲ್ಲಿ ಅನೇಕ ಪ್ರೆಶರ್ ಪಾಯಿಂಟ್‌ಗಳಿರುತ್ತವೆ. ನೀರು ಪಾದಗಳಿಗೆ ತಗುಲಿದಾಗ ಆ ಪಾಯಿಂಟ್‌ಗಳು ಆಕ್ಟಿವ್ ಆಗಿ ದಿನವಿಡೀ ಉಂಟಾದ ದಣಿವು ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
Image credits: Getty
Kannada
ವೈಯಕ್ತಿಕ ಸ್ವಚ್ಛತೆ
ದಿನವಿಡೀ ಶೂ, ಚಪ್ಪಲಿ ಧರಿಸಿ ಓಡಾಡುವುದರಿಂದ ಪಾದಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಬೆವರಿನ ವಾಸನೆ ಇರುತ್ತದೆ. ಕಾಲು ತೊಳೆದು ಮಲಗುವುದರಿಂದ ಬೆಡ್ ಶೀಟ್‌ಗಳು ಕೊಳೆಯಾಗುವುದಿಲ್ಲ ಮತ್ತು ಚರ್ಮದ ಸೋಂಕುಗಳು ಹರಡುವುದಿಲ್ಲ.
Image credits: linkedin
Kannada
ರಕ್ತ ಪರಿಚಲನೆ ಸುಧಾರಣೆ
ಕಾಲು ತೊಳೆದು ನಂತರ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಆಯುರ್ವೇದದ ಪ್ರಕಾರ ಇದು ಕಣ್ಣಿನ ದೃಷ್ಟಿ ಚುರುಕಾಗಲು ಮತ್ತು ದೇಹದಲ್ಲಿನ 'ವಾತ' ದೋಷವನ್ನು ಸಮತೋಲನದಲ್ಲಿಡಲು ಸಹಕಾರಿ.